ಸಾಲು ಸಾಲು ಸಿನಿಮಾಗಳ ಮಧ್ಯೆಯೂ ಬ್ರೇಕ್ ತೆಗೆದುಕೊಂಡಿದ್ದಾರೆ ವಿಜಯ್ ದೇವರಕೊಂಡ. ಹೌದು ಸಿನಿಮಾ ಶೂಟಿಂಗ್ ಗಳಿಂದ ಕೊಂಚ ರಿಲೀಫ್ ಆಗಿ ಕುಟುಂಬದೊಂದಿಗೆ ಫ್ರಾನ್ಸ್ ಗೆ ಹಾರಿದ್ದಾರೆ. ವಿಜಯ್ ನಟನೆಯ ಸಿನಿಮಾವೊಂದರ ಶೂಟಿಂಗ್ ಫ್ರಾನ್ಸ್ ನಲ್ಲಿಯೇ ನಡೆಯುತ್ತಿದ್ದು, ಶೂಟಿಂಗ್ ವಿರಾಮದ ಸಮಯದಲ್ಲಿ ಫ್ಯಾಮಿಲಿ ಜತೆ ಜಾಲಿ ಮಾಡಿದ್ದಾರೆ.
ಪ್ರಸ್ತುತ ಅರ್ಜುನ್ ರೆಡ್ಡಿ , ತಾಯಿ ಮತ್ತು ಸಹೋದರರೊಂದಿಗೆ ಉತ್ತಮ ಸಮಯವನ್ನು ವ್ಯಯಿಸುತ್ತಿದ್ದಾರೆ. ವಿಜಯ್ ಫ್ಯಾಮಿಲಿ ಜೊತೆ ಅವರ ಚಿಕ್ಕಪ್ಪ ಮತ್ತು ನಿರ್ಮಾಪಕ ಯಶ್ ರಂಗಿನೆನಿಯವರ ಕುಟುಂಬದವರು ಕೂಡ ಸೇರಿಕೊಂಡಿದ್ದಾರೆ. ಯಶ್ ರಂಗಿನೆನಿ ಈ ಸುದ್ದಿವನ್ನು ಇನ್ ಸ್ಟಾ ಗ್ರಾಂನಲ್ಲಿ ಹಂಚಿಕೊಳ್ಳುತ್ತಾ ‘ರೌಡಿ ಬಾಯ್ಸ್ ವಿತ್ ರೌಡಿ ಗರ್ಲ್ಸ್’ ಕುಟುಂಬದೊಂದಿಗೆ ರಜಾದಿನಗಳಲ್ಲಿ somewhere in South of France ಎಂದು ಬರೆದುಕೊಂಡಿದ್ದಾರೆ.
No Comment! Be the first one.