ನಟ ಕಮಲ ಹಾಸನ್ ಮತ್ತು ನಿರ್ದೇಶಕ ಶಂಕರ್ ಕಾಂಬಿನೇಷನ್‌ನಲ್ಲಿ ಸೆಟ್ಟೇರಿರುವ ’ಇಂಡಿಯನ್ 2’ ಕುರಿತಂತೆ ಕೆಲವು ವದಂತಿಗಳು ಹರಡಿವೆ. ಈ ಚಿತ್ರಕ್ಕೆ ಅಡ್ಡಿ-ಆತಂಕಗಳು ಎದುರಾಗಿವೆ ಎನ್ನುವ ಸಂಗತಿಗಳನ್ನು ಕಮಲ್ ಅಲ್ಲಗಳೆದಿದ್ದಾರೆ. 1996ರ ಸೂಪರ್‌ಹಿಟ್ ’ಇಂಡಿಯನ್’ ಚಿತ್ರದ ಸೀಕ್ವೆಲ್ ಇದೇ ಜನವರಿ 18ರಂದು ಸೆಟ್ಟೇರಿತ್ತು. ವಿಶಿಷ್ಟ ಪೋಸ್ಟರ್ ಮತ್ತು ಟ್ಯಾಗ್‌ಲೈನ್‌ನೊಮದಿಗೆ ಗಮನಸೆಳೆದಿತ್ತು. ಆದರೆ ಮೇಕಪ್ ಮತ್ತು ಇನ್ನಿತರೆ ತಾಂತ್ರಿಕ ಕಾರಣಗಳಿಂದಾಗಿ ಚಿತ್ರೀಕರಣ ಸ್ಥಗಿತಗೊಳಿಸಲಾಗಿದೆ ಎನ್ನಲಾಗಿತ್ತು. ಮೊನ್ನೆ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಕಮಲ್ ಇದಕ್ಕೆ ಸ್ಪಷ್ಟೀಕರಣ ಕೊಟ್ಟಿದ್ದಾರೆ.

ಲೈಕಾ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ತಯಾರಾಗುತ್ತಿರುವ ಚಿತ್ರಕ್ಕೆ ಕಳೆದ ವರ್ಷದಲ್ಲೇ ಪೂರ್ವತಯಾರಿ ನಡೆದಿದ್ದವು. ಕಳೆದ ತಿಂಗಳು 18ರಂದು ಚಿತ್ರಕ್ಕೆ ಅಧಿಕೃತ ಚಾಲನೆ ಸಿಕ್ಕಿತ್ತು. ಇಂಡಿಯನ್ ಸರಣಿಗೆ ಯಾವುದೇ ರೀತಿಯ ತೊಂದರೆಯಿಲ್ಲ. ಮೇಕಪ್ ಮತ್ತು ಇನ್ನಿತರೆ ವಿಷಯಗಳಲ್ಲೆವೂ ಓಕೆ ಆಗಿವೆ. ಹಾಗಾಗಿ ಅಭಿಮಾನಿಗಳಲ್ಲಿ ಗೊಂದಲ ಬೇಡ ಎಂದಿದ್ದಾರೆ ಕಮಲ್. ಉಳಿದಂತೆ ಅವರ ’ಸುಭಾಷ್ ನಾಯ್ಡು’, ’ದೇವರ್ ಮಗನ್೨’ ಚಿತ್ರಗಳೂ ಚಿತ್ರೀಕರಣದಲ್ಲಿವೆ. ಸಿನಿಮಾ ಜೊತೆಜೊತೆಗೆ ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ ಕಮಲ್. ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ತಮಿಳುನಾಡಿನ ಎಲ್ಲಾ ೪೦ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎನ್ನುತ್ತಾರೆ ಕಮಲ್

#

Arun Kumar

ಫೇಸ್‌ಬುಕ್ ಹೆಣ್ಮಕ್ಕಳ ಪಾಲಿಗಿವನು ಪಕ್ಕಾ ಕೀಚಕ!

Previous article

ಬಾಲಿವುಡ್‌ನವರ ನಿಜಬಣ್ಣ ಬಯಲು ಮಾಡುವುದಾಗಿ ಹೇಳಿದ ಕಂಗನಾ!

Next article

You may also like

Comments

Leave a reply

Your email address will not be published. Required fields are marked *