Connect with us

ಫೋಕಸ್

ಇದು ಉತ್ತರ ಕರ್ನಾಟಕದ ಜವಾರಿ ಗಾನಾ!

Published

on

ಜುಗಾರಿ, ಲಾಸ್ಟ್ ಬಸ್‌ನಂಥ ಚಿತ್ರದ ಮೂಲಕ ಗಮನ ಸೆಳೆದಿದ್ದವರು ಎಸ್ ಡಿ ಅರವಿಂದ. ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮಟಾಶ್ ಚಿತ್ರಕ್ಕಾಗಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಪಕ್ಕಾ ಉತ್ತರ ಕರ್ನಾಟಕದ ಜವಾರಿ ಹಾಡೊಂದನ್ನು ಹಾಡಿದ್ದಾರೆ!

ಅರವಿಂದ ಅವರೇ ಸಂಗೀತ ನಿರ್ದೇಶನ ಮಾಡಿರೋ ಈ ಹಾಡನ್ನು ಪುನೀತ್ ರಾಜ್‌ಕುಮಾರ್ ಅವರಿಂದಲೇ ಹಾಡಿಸಬೇಕೆಂಬ ನಿರ್ಧಾರವಾಗಿತ್ತಂತೆ. ಈ ಹಾಡಿನ ಟ್ಯೂನು ಮತ್ತು ಸಾಹಿತ್ಯ ನೋಡಿ ಖುಷಿಯಾದ ಪುನೀತ್ ಖುಷಿಯಿಂದಲೇ ಒಪ್ಪಿಕೊಂಡು ಹಾಡಿದ್ದಾರೆ. ಇತ್ತೀಚೆಗೆ ಗಾಯಕರಾಗಿಯೂ ಪ್ರಸಿದ್ಧರಾಗಿರುವ ಪುನೀತ್ ಅವರು ಹಾಡಿದ ಮೊದಲ ಉತ್ತರ ಕರ್ನಾಟಕ ಶೈಲಿಯ ಹಾಡಾಗಿಯೂ ಮಟಾಶ್ ಚಿತ್ರದ ಈ ಹಾಡು ದಾಖಲಾಗಿದೆ!

ಇತ್ತೀಚೆಗೆ ಹೆಚ್ಚಿನ ಸಂಗೀತ ನಿರ್ದೇಶಕರು ವಿಶೇಷವಾದ ಶೈಲಿಯ ಹಾಡನ್ನು ಕಂಪೋಸ್ ಮಾಡುವಾಗ ಪುನೀತ್ ರಾಜ್‌ಕುಮಾರ್ ಅವರನ್ನು ಮೊದಲ ಆಧ್ಯತೆಯಾಗಿಸಿಕೊಳ್ಳುತ್ತಿದ್ದಾರೆ. ಆದ್ದರಿಂದಲೇ ಪುನೀತ್ ಗಾಯಕರಾಗಿಯೂ ಬ್ಯುಸಿಯಾಗುವಂತಾಗಿದೆ. ಇಂಥಾ ಹಾಡುಗಳನ್ನು ಅದೇನೇ ಒತ್ತಡವಿದ್ದರೂ ಪ್ರೀತಿಯಿಂದ ಬಂದು ಹಾಡೋ ಪುನೀತ್ ಮಠಾಶ್ ಚಿತ್ರಕ್ಕಾಗಿ ಮೊದಲ ಬಾರಿ ಉತ್ತರ ಕರ್ನಾಟಕ ಶೈಲಿಯಲ್ಲಿ ಹಾಡಿದ ಸಂತಸದಲ್ಲಿದ್ದಾರೆ.

ಅಂದಹಾಗೆ ಈ ಹಾಡು ಉತ್ತರ ಕರ್ನಾಟಕದ ಲಂಬಾಣಿ ಸಮುದಾಯದ ನುಡಿಗಟ್ಟಿನಲ್ಲಿರುವ ಅಪರೂಪದ ಪದಗಳನ್ನು ಬಳಸಿ ರಚಿಸಲಾಗಿದೆಯಂತೆ. ಕನ್ನಡಕ್ಕೆ ಹೊಸಾ ತೆರನಾಗಿ ಕೇಳಿಸಲಿರೋ ಈ ಹಾಡೀಗ ಟ್ರೆಂಡ್ ಹುಟ್ಟುಹಾಕುವ ಭರವಸೆಯನ್ನು ಅರವಿಂದ ಹೊಂದಿದ್ದಾರೆ. ಈ ಹಿಂದೆ ದೊಡ್ಮನೆ ಹುಡುಗ ಚಿತ್ರದಲ್ಲಿನ ಉತ್ತರ ಕರ್ನಾಟಕ ಶೈಲಿಯ ಹಾಡಿಗೆ ಪುನೀತ್ ನಟಿಸಿದ್ದರು. ಇದೀಗ ಅವರೇ ಆ ಭಾಷೆಯ ಸೊಗಡಿನ ಹಾಡೊಂದಕ್ಕೆ ಧ್ವನಿ ನೀಡಿದ್ದಾರೆ.

ಈ ಹಿಂದೆ ರವಿ ಬಸ್ರೂರು ನಟಿಸಿದ್ದ ಕುಂದಾಪುರ ಭಾಷೆಯ ಬಿಲಿಂಡರ್ ಚಿತ್ರಕ್ಕಾಗಿ ಪುನೀತ್ ಕುಂದಾಪುರ ಕನ್ನಡದಲ್ಲೊಂದು ಹಾಡನ್ನು ಹಾಡಿದ್ದರು. ಅದು ಕುಂದಗನ್ನಡದಾಚೆಗೂ ಸಖತ್ ಹವಾ ಕ್ರಿಯೇಟ್ ಮಾಡಿತ್ತು. ಪ್ರಾದೇಶಿಕ ಭಾಷೆಗಳ ಮೇಲೆ ಭಾರೀ ಆಸಕ್ತಿ, ಪ್ರೀತಿ ಹೊಂದಿರೋ ಪುನೀತ್ ಧ್ವನಿಯಲ್ಲಿ ಮೂಡಿ ಬಂದಿರೋ ಮಟಾಶ್ ಚಿತ್ರದ ಹಾಡು ಕೇಳುವ ಭಾಗ್ಯ ಇಷ್ಟರಲ್ಲಿಯೇ ಲಭಿಸಲಿದೆಯಂತೆ.

ಫೋಕಸ್

ಕಬ್ಬಿನ ಹಾಲು ಮಾರಲು ಬಂದಳು ಬಾಲಿವುಡ್ ಚೆಲುವೆ!

Published

on

ಸಾಹಸ ನಿರ್ದೇಶಕರಾಗಿ ಬಾಲಿವುಡ್ ರೇಂಜಿಗೂ ತಲುಪಿಕೊಂಡಿದ್ದ ರವಿವರ್ಮಾ, ಮಾಸ್ತಿಗುಡಿಯಲ್ಲಿ ಮಾಡಿಕೊಂಡಿದ್ದ ಯಡವಟ್ಟಿನಿಂದ ಅನುಭವಿಸಿದ್ದ ತೊಂದರೆ ಅಷ್ಟಿಷ್ಟಲ್ಲ. ಆದರೆ ಅದಾದ ನಂತರ ರವಿವರ್ಮಾ ನಿರ್ದೇಶಕನಾಗಿ ಹೊಸಾ ಬದುಕು ಆರಂಭಿಸಿದ್ದಾರೆ. ಅವರೀಗ ಶಿವಣ್ಣ ಮುಖ್ಯ ಭೂಮಿಕೆಯಲ್ಲಿರೋ ರುಸ್ತುಂ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಜೊತೆಗೆ ಈ ಚಿತ್ರದಲ್ಲಿ ತಾರೆಯರ ದಂಡು ನೆರೆಯುವಂತೆಯೂ ಮಾಡುತ್ತಿದ್ದಾರೆ!

ಬಾಲಿವುಡ್ ನಟ ವಿವೇಕ್ ಒಬೇರಾಯ್ ಈ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸುತ್ತಿರೋದು ಗೊತ್ತಿರೋ ವಿಚಾರವೇ. ಇದೀಗ ರುಸ್ತುಂ ಅಡ್ಡೆಗೆ ಮತ್ತೋರ್ವ ಬಾಲಿವುಡ್ ನಟಿಯ ಆಗಮನವಾಗಿದೆ. ಹಾಗೆ ಬಂದವಳು ಮಾದಕ ಚೆಲುವೆ ಸಾಕ್ಷಿ ಚೌಧರಿ!

ಸಾಕ್ಷಿ ಚೌಧರಿ ಬಂದಿರೋದು ಹಾಡೊಂದಕ್ಕೆ ಕುಣಿಯುವುದಕ್ಕಾಗಿ. ಎಪಿ ಅರ್ಜುನ್ ಬರೆದಿರೋ ‘ಕಬ್ಬಿನ ಹಾಲು ಮಾರೋಕಂತ ಮಂಡ್ಯದಿಂದ ಬಂದಿದ್ದೀನಿ’ ಎಂಬ ಹಾಡಿಗೆ ಈಕೆ ಕುಣಿಯಲಿದ್ದಾಳೆ. ಈ ಹಾಡು ಅರ್ಜುನ್ ಜನ್ಯಾ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿದೆ. ಇದಕ್ಕೆ ರಾಜು ಸುಂದರಂ ನೃತ್ಯ ನಿರ್ದೇಶನ ಮಾಡಲಿದ್ದಾರೆ.

ರುಸ್ತುಂ ಚಿತ್ರದಲ್ಲಿ ಶಿವಣ್ಣನ ಪಾತ್ರ, ಅವರ ಲುಕ್ಕು ಸೇರಿದಂತೆ ಎಲ್ಲವೂ ಸಂಚಲನವನ್ನೇ ಸೃಷ್ಟಿಸಿವೆ. ಇದರಲ್ಲಿ ವಿವೇಕ್ ಒಬೇರಾಯ್ ನಟಿಸೋ ಮೂಲಕ ಮೊದಲ ಸಲ ಕನ್ನಡಕ್ಕೆ ಬಂದಿದ್ದಾರೆ. ಶ್ರದ್ಧಾ ಶ್ರೀನಾಥ್, ರಚಿತಾ ರಾಮ್, ಮಯೂರಿ ಮುಂತಾದವರೂ ನಟಿಸಿದ್ದಾರೆ. ತಾರಾಗಣ ಮಾತ್ರವಲ್ಲದೇ ತಾಂತ್ರಿಕವಾಗಿಯೂ ಕೂಡಾ ರುಸ್ತುಂ ಚಿತ್ರವನ್ನು ರವಿವರ್ಮಾ ರಿಚ್ ಆಗಿಯೇ ರೂಪಿಸೋ ಪಣ ತೊಟ್ಟಿದ್ದಾರೆ.

Continue Reading

ಫೋಕಸ್

ಚಪ್ಪರಿಸುವಂತಿದೆ ಚಜ್ಜಿರೊಟ್ಟಿ, ಚವಳಿಕಾಯಿ ಹಾಡು….

Published

on

‘ಮಟಾಶ್’ ಸಿನಿಮಾದ ’ಉಡಾಳರಪ್ಪೋ ಉಡಾಳರೋ ಊರ ತುಂಬ ಉಡಾಳರೋ’ ಎಂದು ಶುರುವಾಗುವ ಬಿಜಾಪುರ ಸೀಮೆಯ ಅಪ್ಪಟ ಆಡುನುಡಿಗಳ ಈ ಹಾಡು, ಈ ಪ್ರದೇಶದಲ್ಲಿನ ಒಂದು ವರ್ಗದ ಯುವಕರ ದೈನಂದಿನ ತೊಳಲಾಟಗಳನ್ನೂ ಎತ್ತಿ ತೋರಿಸುತ್ತದೆ. ಚಿತ್ರಕತೆಗೆ ಹೊಂದಿಕೊಂಡಂತೆ ಬರೆದಿರುವ ಕಾರಣದಿಂದ, ರೊಕ್ಕ ಮಾಡಲು ಹೊರಟ ನಿರುದ್ಯೋಗಿ ಉಡಾಳರ ದೈನಿಕ ಬದುಕಿನ ವಿವರಗಳನ್ನು ಕಟ್ಟಿ ಕೊಡುವಲ್ಲಿ ಸಫಲವಾಗಿದೆ.

ಬಿಜಾಪುರ ನೆಲದ ಶೈಲಿಯ ಭಾಷೆ, ಅದರಲ್ಲಿ ಉರ್ದು, ಲಂಬಾಣಿ ಪದಗಳ ಬಳಕೆಯನ್ನು ತೂಕ ಹಾಕಿದಂತೆ ಪ್ರಯೋಗ ಮಾಡಲಾಗಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್ ಆಗಿರುವೀ ಆಡಿಯೋಕ್ಕೆ ’ಚಜ್ಜಿರೊಟ್ಟಿ ಚವಳಿಕಾಯಿ’ ಸಾಂಗ್ ಎಂದೇ ಕರೆಯಲಾಗುತ್ತಿದೆ. ’ಚಜ್ಜಿರೊಟ್ಟಿ ಚವಳಿಕಾಯಿ, ರೂಪಾಯ್‌ಗೆ ಸೇರ್ ಬದನೆಕಾಯಿ’ ಎಂಬ ಸಾಲುಗಳ ಜೊತೆಗೆ ಇಲ್ಲಿನ ಪೆನಪೆಟಿಗಿ (ಹಾರ್ಮೊನಿಯಂ), ತಬಲಾ ಇತ್ಯಾದಿ ಸ್ಥಳೀಯ ಸಂಗೀತ ವಾದ್ಯಗಳ ಇಂಪೂ ಕಿವಿ ತುಂಬುತ್ತದೆ.

ಬೀರೋ ಬ್ರ್ಯಾಂಡಿ ಕುಡಿಯೋವಾಗ ಉಪ್ಪಿನಕಾಯಿ ನೆಕ್ತಾರ

ಮಾವಾ, ಗುಟ್ಕಾ ಇಲ್ಲಾರದಾಗ ಸುಣ್ಣ, ತಂಬಾಕು ತಿಕ್ತಾರ….

ಹಗಲು ಕ್ರಿಕೆಟ್ಟು ಬೆಟ್ಟಿಂಗ್, ಇಸ್ಪೀಟ್ ಆಟ

ರಾತ್ರಿಯಾದರೆ ಡಾಬಾದೊಳಗ ಊಟ…..

-ಇಂತಹ ಸಾಲುಗಳು ಪಡ್ಡೆಗಳಿಗೆ, ಉಡಾಳರಿಗೆ ಇಷ್ಟವಾದಂತಿವೆ. ವಿಜಾಯಪುರದ ಮೂಲ ಆಹಾರ ಸಂಸ್ಕೃತಿ, ಭಾಷಾ ಸೊಗಡನ್ನು ರಂಜನೆಯ ರೂಪದಲ್ಲಿ ಉಣಬಡಿಸಲಾಗಿದೆ. ’ಉಡಾಳರ’ ಈ ಹಾಡು ರಚಿಸಿದವರು, ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅಧ್ಯಾಪಕ ಸುನೀಲಕುಮಾರ್ ಸುಧಾಕರ್. ಪುನೀತ್ ಧ್ವನಿ ಇದಕ್ಕೆ ಇನ್ನಷ್ಟು ರಂಗು ನೀಡಿದೆ. ’ರೊಕ್ಕಕ್ಕಾಗಿ ಕೈ ಕೊಡಬ್ಯಾಡ, ರೊಕ್ಕಕ್ಕಾಗಿ ಬಾಯಿ ಬಿಡಬೇಡ’ ಎಂಬ ಉಪದೇಶವೂ ಈ ಸಾಂಗಿನಲ್ಲಿದೆ!

ನಿರ್ದೇಶಕ ಎಸ್.ಡಿ. ಅರವಿಂದ ’ಅಮಾನ್ಯೀಕರಣದ ೫೦ ದಿನಗಳ ತೊಳಲಾಟದ ಹಿನ್ನೆಲೆ ಇಟ್ಟುಕೊಂಡು, ಕಾಮಿಡಿ ಥ್ರಿಲ್ಲರ್ ರೂಪಿಸಿದ್ದೇವೆ’ ಎಂದಿರುವುದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.

Continue Reading

ಪ್ರಚಲಿತ ವಿದ್ಯಮಾನ

ಆಕ್ಷನ್ ಪ್ರಿನ್ಸ್ ವಿರುದ್ಧ ದಾಖಲಾಯ್ತು ಕೇಸ್!

Published

on

ಬೆಂಗಳೂರಿನಲ್ಲಿ ಫ್ಲೆಕ್ಸ್ ಹಾಗೂ ಬ್ಯಾನರ್ ಹಾಕುವಂತಿಲ್ಲ ಎಂಬ ಬಗ್ಗೆ ಹೈಕೋರ್ಟ್ ತಪರಾಕಿ ನೀಡಿದ್ದರಿಂದ ಬಿಬಿಎಂಪಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಈ ಸಂಬಂಧವಾಗಿ ಕಟೌಟ್, ಫ್ಲೆಕ್ಸ್‌ಗಳನ್ನು ಕೂಡಾ ಬಿಬಿಎಂಪಿ ಬೆಂಗಳೂರು ವ್ಯಾಪ್ತಿಯಲ್ಲಿ ಬ್ಯಾನ್ ಮಾಡಿದೆ. ಆದರೆ ಹುಟ್ಟುಹಬ್ಬದ ಸಂದರ್ಭದಲ್ಲಿ ಇದನ್ನು ಉಲ್ಲಂಘಿಸಿದ ಆರೋಪದಡಿಯಲ್ಲಿ ದ್ರುವ ಸರ್ಜಾ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ!

ಬೆಂಗಳೂರು ಮಹಾನಗರ ಪಾಲಿಕೆಯ ಬನಶಂಕರಿ ಉಪ ವಿಭಾಗದಲ್ಲಿ ಎಆರ್‌ಓ ಆಗಿರುವ ತಾರಕಾನಾಥ್ ಧ್ರುವ ವಿರುದ್ಧ ದೂರು ದಾಖಲಿಸಿದ್ದಾರೆ. ಇತ್ತೀಚೆಗೆ ಮೂವತ್ತನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರಲ್ಲಾ ಧ್ರುವ? ಆ ಸಂದರ್ಭದಲ್ಲಿ ಕೆಆರ್ ರಸ್ತೆಯ ಶಾಸ್ತ್ರಿ ನಗರ ಸುತ್ತಮುತ್ತ ಅಭಿಮಾನಿಗಳು ಆಳೆತ್ತರದ ಕಟೌಟ್ ಹಾಕಿದ್ದರು. ಈ ರಸ್ತೆಯ ತುಂಬಾ ಧ್ರುವ ಸರ್ಜಾರ ಕಟೌಟ್, ಬ್ಯಾನರ್ ಹಾಕಿ ಶುಭ ಕೋರಿದ್ದರು. ಇದು ಕಾನೂನು ಉಲ್ಲಂಘನೆ ಅಂತ ಆರೋಪಿಸಿ ತಾರಕಾನಾಥ್ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧವಾಗಿ ದ್ರುವ ವಿರುದ್ಧ ಎಫ್‌ಐಆರ್ ಕೂಡಾ ದಾಖಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾವುದೇ ಅನಧಿಕೃತ ಜಾಹೀರಾತು, ಹೋರ್ಡಿಂಗ್ಸ್ ಮತ್ತು ಬ್ಯಾನರ್ ಅಳವಡಿಸದಂತೆ ಆಗಸ್ಟ್ ೧೨ರಂದೇ ಕಟ್ಟುನಿಟ್ಟಿನ ಆದೇಶ ರವಾನೆ ಮಾಡಲಾಗಿತ್ತು. ಇದರ ಅರಿವಿದ್ದೋ ಇಲ್ಲದೆಯೋ ಧ್ರುವ ಅಭಿಮಾನಿಗಳು ಈ ಕಾನೂನು ಉಲ್ಲಂಘಿಸಿದ್ದಾರೆ. ಇದರ ಪರಿಣಾಮವಾಗಿ ಇದೀಗ ಧ್ರವಾ ಸರ್ಜಾಜೆ ಹೊಸಾ ತಲೆನೋವು ಶುರುವಾಗಿದೆ. ದ್ರುವ ಇದೀಗ ತಮ್ಮ ಮೇಲೆ ಕಾನೂನು ಕ್ರಮ ಜರುಗುವ ಭೀತಿ ಎದುರಿಸುತ್ತಿದ್ದಾರೆ.

Continue Reading

Trending

Copyright © 2018 Cinibuzz