One N Only Exclusive Cine Portal

ಆಸ್ಕರ್ ಪ್ರಶಸ್ತಿ ಪ್ರದಾನ ವೇಳೆ ಶ್ರೀದೇವಿ, ಶಶಿ ಕಪೂರ್‌ಗೆ ಗೌರವ

ಹಾಲಿವುಡ್: ವಿಶ್ವ ಸಿನಿಮಾ ರಂಗದ ಅತ್ಯುನ್ನತ ಚಲನಚಿತ್ರ ಪ್ರಶಸ್ತಿ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅತ್ಯಂತ ವೈಭವೋತೇತವಾಗಿ, ರಂಗುರಂಗಾಗಿ ಜಗತ್ತಿನ ಗಮನವನ್ನು ತನ್ನತ್ತ ಸೆಳೆಯುವ ಮೂಲಕ ಅದ್ದೂರಿಯಾಗಿ ನಡೆಯಿತು. ಸುಮಾರು ನಾಲ್ಕು ತಿಂಗಳಿನಿಂದ ಈ ಚಿತ್ರ ಹಬ್ಬದ ತಯಾರಿಗಳು ನಡೆಯುತ್ತಿದ್ದು, ಹಾಲಿವುಡ್‌ನ ಡಾಲ್ಬಿ ಥಿಯೇರ್ಟನಲ್ಲಿ ನಡೆದ ೨೦೧೮ನೇ ಸಾಲಿನ ೯೦ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮಕ್ಕೆ ವಿಶ್ವ ಚಿತ್ರರಂಗ ಖ್ಯಾತನಾಮ ನಟ-ನಟಿಯರು, ನಿರ್ದೇಶಕರು ಹಾಗೂ ನಿರ್ಮಾಪಕರು ಮತ್ತು ತಂತ್ರಜ್ಞರು ಪಾಲ್ಗೊಂಡಿದ್ದರು. ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಜಯಿಸಿದ ಸಿನಿಮಾ ರಂಗದ ಗಣ್ಯರಿಗೆ ಅದ್ದೂರಿ ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆದ ವಿಶ್ವದ ಅತ್ಯಂತ ಪ್ರತಿಷ್ಠಿತ ಆಸ್ಕರ್ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಖ್ಯಾತ ಹಾಸ್ಯ ನಟ ಜಿಮ್ಮಿ ಕಿಮ್ಮೆಲ್ ನಿರೂಪಕರಾಗಿ ನಡೆಸಿಕೊಡುವ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ರಂಗು ನೀಡಿದರು. ಇನ್ನು ಜಗತ್ತಿನ ವಿವಿಧ ದೇಶಗಳ ಚಿತ್ರರಂಗದ ಅನೇಕ ದಿಗ್ಗಜರು ಈ ಕಾರ್ಯಕ್ರಮದಲ್ಲಿ ಹಾಜರಿದ್ದು ಮೆರುಗು ನೀಡಿದರು.

ಇನ್ನು ಮೊದಲಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯದಂತೆ ಈ ಬಾರಿಯೂ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಗತ್ತಿನ ಚಿತ್ರರಂಗದಲ್ಲಿ ತಮ್ಮದೇಯಾದ ಸಾಧನೆಯನ್ನು ಮರೆದು, ಮರೆಯಾದ ಚೇತನಗಳನ್ನು ನೆನಪಿಸಿಕೊಂಡು ಅವರಿಗೆ ಗೌರವ ನಮನ ಕೋರಲಾಯಿತು. ಈ ಬಾರಿ ಈ ಗೌರವ ನಮನ ಕಾರ್ಯಕ್ರಮದಲ್ಲಿ ಭಾರತೀಯ ಚಿತ್ರರಂಗದ ಇಬ್ಬರ ಹೆಸರನ್ನು ಭವ್ಯ ವೇದಿಕೆಯಲ್ಲಿ ನೆನಪಿಸಿಕೊಳ್ಳಲಾಯಿತು. ಕಳೆದ ಡಿಸೆಂಬರ್‌ನಲ್ಲಿ ನಿಧನರಾದ ಬಾಲಿವುಡ್‌ನ ಶಶಿ ಕಪೂರ್ ಹಾಗೂ ಇದೇ -ಬ್ರವರಿಯಲ್ಲಿ ನಿಧನರಾದ ನಟಿ ಶ್ರೀದೇವಿ ಅವರಿಗೆ ಈ ಬಾರಿಯ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೌರವ ಸಲ್ಲಿಕೆ ಮಾಡಲಾಯಿತು. ಶಶಿ ಕಪೂರ್ ಮತ್ತು ಶ್ರೀದೇವಿ ಅವರ ಜೀವನ ಮತ್ತು ಸಿನಿಮಾ ಪ್ರಯಾಣದ ಕುರಿತು ದೃಶ್ಯ ನಿರೂಪಣೆಯನ್ನು ಕಾರ್ಯಕ್ರಮದಲ್ಲಿ ಮಾಡಲಾಯಿತು. ಈ ವರ್ಷ ಆಸ್ಕರ್ ಪ್ರಶಸ್ತಿಗೆ ೧೩ ಸಿನಿಮಾಗಳು ನಾಮಾಂಕಿತಗೊಂಡಿದ್ದವು. ಆಸ್ಕರ್ ಪ್ರಶಸ್ತಿಯಲ್ಲಿ ಹಾಲಿವುಡ್ ಚಿತ್ರಗಳಾದ ಶೇಪ್ ಆ- ವಾರ್ಟ, ಡಂಕಿರ್ಕ್, ಡಾರ್ಕ್ ಕಾಮಿಡಿ ಚಿತ್ರವಾಗಿರುವ ತ್ರಿ ಬಿಲ್ ಬೋರ್ಡ್ ೨೦೧೮ನೇ ಸಾಲಿನ ಅತ್ಯುತ್ತಮ ಚಿತ್ರಗಳ ಸ್ಪರ್ಧೆಯಲ್ಲಿವೆ.

 

Leave a Reply

Your email address will not be published. Required fields are marked *


CAPTCHA Image
Reload Image