Connect with us

ಅಭಿಮಾನಿ ದೇವ್ರು

ಸರ್ಕಾರಿ ಶಾಲೆ ಉಳಿಸಲು ಪಣ ತೊಟ್ಟ ಪ್ರಥಮ್!

Published

on

ಬೆಂಗಳೂರು ದಕ್ಷಿಣವಲಯ ೧ರ ದೊಡ್ಡಗೊಲ್ಲರಹಟ್ಟಿ ಕ್ಲಸ್ಟರ್‌ನ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ವಿನ್ನರ್ ಪ್ರಥಮ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ನಟ ನಿರ್ದೇಶಕ ನಿತಿನ್ ನಂಜಪ್ಪ ಹಾಗೂ ನ್ಯಾಷನಲ್ ಲಾ ಸ್ಕೂಲ್ ಆಪ್ ಇಂಡಿಯಾ ಯೂನಿವರ್ಷಿಟಿಯ ಮಗು ಮತ್ತು ಕಾನೂನು ಕೇಂದ್ರದ ಕುಮಾರ್ ಶೃಂಗೇರಿಯವರು ನೆರವೇರಿಸಿಕೊಟ್ಟಿದ್ದಾರೆ.

ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪ್ರಥಮ್ ‘ನಾನು ಈ ಮಟ್ಟಕ್ಕೆ ಬರಲು ನಾನು ಓದಿದ ಸರ್ಕಾರಿ ಶಾಲೆಯ ಪ್ರತಿಭಾ ಕಾರಂಜಿ ಕಾರ್ಯಕ್ರಮವೇ ಕಾರಣ. ನಾನು ಪಂಚಾಯಿತಿ ಮಟ್ಟದಿಂದ ರಾಜ್ಯಮಟ್ಟದ ಕಾರ್ಯಕ್ರಮದವರೆಗೂ ಭಾಗವಹಿಸಿದ್ದೆ, ಈ ಕಾರ್ಯಕ್ರಮವೇ ನನ್ನನ್ನು ಉತ್ತಮ ನಟನ್ನನ್ನಾಗಿ ಮಾಡಿದೆ. ನನಗೆ ಈ ರೀತಿಯ ಅವಕಾಶಗಳು ಸಿಗದೇ ಇದ್ದಿದ್ದರೆ ನಾನು ಈ ದಿನ ನಿಮ್ಮ ಮುಂದೆ ಈ ರೀತಿಯ ನಟನಾಗಿ ಬೆಳೆಯಲು ಸಾಧ್ಯವೇ ಆಗುತ್ತಿರಲಿಲ್ಲ. ಸರ್ಕಾರಗಳು ಶಾಲೆಗಳನ್ನು ಮುಚ್ಚುವ ಮಾತನಾಡಬಾರದು ಬದಲಿಗೆ ಅವುಗಳನ್ನು ಇನ್ನೂ ಹೆಚ್ಚು ಅಭಿವೃದ್ಧಿಯನ್ನು ಹಾಗೂ ಸಬಲೀಕರಣವನ್ನು ಮಾಡಬೇಕು. ಇಂತಹ ಸಾಮಾಜಿಕ ಕಾರ್ಯಕ್ಕೆ ನಾನು ಸದಾ ಮುಂದಿರುತ್ತೇನೆ’ ಎಂಬ ಸ್ಫೂರ್ತಿದಾಯಕ ಮಾತುಗಳನ್ನಾಡಿದ್ದಾರೆ.

ಕಾರ್ಯಕ್ರಮದಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ಚಂದ್ರಕಲಾ ಹಾಗೂ ಶಾಲೆಯ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಸೌಭಾಗ್ಯರವರು ಹಾಗೂ ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ಶಾಲಾ ಮಕ್ಕಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.

ಅಭಿಮಾನಿ ದೇವ್ರು

ಕೊಡಗು ಜನರ ಕಂಬನಿಗೆ ಮಿಡಿದ ದರ್ಶನ್!

Published

on

ಕಣ್ಣೆದುರೇ ಕೊಡಗು ಸೀಮೆಯಲ್ಲಾಗುತ್ತಿರುವ ಪ್ರಾಕೃತಿಕ ದುರಂತ ಎಲ್ಲರನ್ನೂ ಆಘಾತಕ್ಕೀಡು ಮಾಡಿದೆ. ಊರಿಗೂರೇ ನೆರೆ, ನೀರು, ಭೂಕುಸಿತದಿಂದ ಕಣ್ಮರೆಯಾದಂತಾಗಿ ರಾತ್ರಿ ಹಗಲಾಗೋದರೊಳಗೆ ಜನ ಎಲ್ಲ ಕಳೆದುಕೊಂಡು ಬೀದಿಗೆ ಬಂದು ನಿಂತಿದ್ದಾರೆ. ಪ್ರಕೃತಿ ಸೃಷ್ಟಿಸಿದ ಈ ದಾರುಣಕ್ಕೆ ಚಿತ್ರರಂಗವೂ ಮಿಡಿದಿದೆ. ತಾರೆಯರೆಲ್ಲ ಕೈಲಾದ ಸಹಾಯಕ್ಕೆ ಮುಂದಾಗಿದ್ದಾರೆ. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಕೊಡಗಿನ ಜನರಿಗೆ ಸಹಾಯ ಮಾಡುವಂತೆ ಅಭಿಮಾನಿಗಳಲ್ಲಿ ಕಳಕಳಿಯಿಂದ ಮನವಿ ಮಾಡಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಎಲ್ಲವನ್ನೂ ಕಳೆದುಕೊಂಡಿರೋ ಕೊಡಗಿನ ಜನರಿಗೆ ಆ ಕ್ಷಣಕ್ಕೆ ಅಗತ್ಯವಿರುವ ಆಹಾರ, ದಿನ ಬಳಕೆಯ ವಸ್ತುಗಳು ಸೇರಿದಂತೆ ಏನೇನೆಲ್ಲ ಸಾಧ್ಯವೋ ಅದನ್ನೆಲ್ಲ ಪೂರೈಕೆ ಮಾಡುವಂತೆ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.

ಈ ಮೂಲಕ ದರ್ಶನ್ ಭಯಾನಕವಾದ ಪ್ರಾಕೃತಿಕ ದುರಂತದಿಂದ ಕಂಗೆಟ್ಟಿರುವ ಕೊಡಗಿನ ಜನತೆಯ ಸಂಕಷ್ಟಕ್ಕೆ ಮಿಡಿದಿದ್ದಾರೆ. ದರ್ಶನ್ ಅವರ ಮಾತನ್ನು ಶಿರಸಾವಹಿಸಿ ಪಾಲಿಸುವ ಅಭಿಮಾನಿಗಳು ಖಂಡಿತವಾಗಿಯೂ ಈ ಮನವಿಯೆ ಮಿಡಿಯದಿರಲಾರರು. ದರ್ಶನ್ ಅಭಿಮಾನಿಗಳೆಲ್ಲ ಮನಸು ಮಾಡಿದರೆ ಖಂಡಿತವಾಗಿಯೂ ಕೊಡಗು ಜನರ ಒಂದಷ್ಟಾದರೂ ಹಸಿವು ನೀಗುತ್ತದೆ. ಪ್ರತೀ ಕ್ಷಣವೂ ಕುಸಿಯುತ್ತಿರುವ ಪ್ರದೇಶದಲ್ಲಿಯೇ ಜೀವದ ಹಂಗು ತೊರೆದು ಕಾರ್ಯಾಚರಣೆಗಿಳಿದಿರುವ ಎಲ್ಲ ಮಾನವೀಯ ಮನಸುಗಳಿಗೂ ಮತ್ತಷ್ಟು ಕಸುವು ಸಿಕ್ಕಂತಾಗುತ್ತದೆ.

ಇಂದು ಬೆಳಿಗ್ಗೆ ‘ಡಿ ಕಂಪೆನಿಯ ಸದಸ್ಯರು ಮತ್ತು ದರ್ಶನ್ ಅವರ ಮ್ಯಾನೇಜರ್ ಸೀನಣ್ಣ ಸೇರಿದಂತೆ ಒಂದಷ್ಟು ಜನ ಕೊಡಗಿಗೆ ಹೋಗಿ ಒಂದು ಟ್ರಕ್ ಸಾಮಗ್ರಿಗಳನ್ನು ಇಳಿಸಿದ್ದಾರೆ. ಸರಿಸುಮಾರು ಹದಿನೈದರಿಂದ ಇಪ್ಪತ್ತು ಲಕ್ಷ ರುಪಾಯಿ ಬೆಲೆ ಬಾಳುವ ಪದಾರ್ಥಗಳು ಇದರಲ್ಲಿವೆ.


ಹೀಗೆ… ಅಭಿಮಾನಿಗಳನ್ನು ನೊಂದ ಜನರ ನೆರವಿಗೆ ಧಾವಿಸುವಂತೆ ಪ್ರೇರೇಪಿಸುವ ಮೂಲಕ ದರ್ಶನ್ ನಿಜಕ್ಕೂ ಮಾದರಿಯಾಗಿದ್ದಾರೆ.

Continue Reading

ಅಭಿಮಾನಿ ದೇವ್ರು

ಕನ್ನಡಿಗರೆಲ್ಲರ ಕಣ್ಣು ತೆರೆಸುವಂಥಾ ಕಿರುಚಿತ್ರ ವೈರಲ್ ಆಯ್ತು!

Published

on

ಇಲ್ಲಿದೆ ಲಿಂಕ್

https://m.facebook.com/story.php?story_fbid=2189506438005734&id=1694769344146115

ಬೇರೆ ರಾಜ್ಯದಿಂದ ಕರ್ನಾಟಕಕ್ಕೆ ಬಂದವರು ಕನ್ನಡ ಕಲಿಯುವುದಿಲ್ಲ… ಹೀಗೊಂದು ಆರೋಪಕ್ಕೆ ಬಹಳಷ್ಟು ವಯಸಾಗಿದೆ. ಆದರೆ ಇದರಲ್ಲಿ ನಮ್ಮ ಪಾಲೆಷ್ಟು ಅಂತ ಮನಸು ಮುಟ್ಟಿಕೊಂಡು ಕೇಳಿನೋಡುವ ವ್ಯವಧಾನ ಕನ್ನಡಿಗರಾದ ನಮಗೆಲ್ಲ ಇರುವುದಿಲ್ಲ. ಆದರೀಗ ಫೇಸ್‌ಬುಕ್ಕಿನಲ್ಲಿ ವೈರಲ್ ಆಗಿರೋ ಕಿರುಚಿತ್ರವೊಂದು ಅಂಥಾ ಸಂದರ್ಭ ಸೃಷ್ಟಿಸಿ ಬಿಟ್ಟಿದೆ.

`ಕನ್ನಡ ಸಾಮಾನ್ಯವಲ್ಲ, ವಿಶೇಷ. ಕಲಿಸುವ ಅಗತ್ಯವಿಲ್ಲ ಕಲಿಯುತ್ತಾರೆ’ ಎಂಬ ಒಕ್ಕಣೆಯಿರುವ ಈ ಕಿರು ಚಿತ್ರ ನಿಜಕ್ಕೂ ಸ್ಫೂರ್ತಿದಾಯಕವಾಗಿದೆ. ಬಿಡುಗಡೆಯಾದ ತುಸು ಸಮಯದಲ್ಲಿಯೇ ಹತ್ತು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆಯುವ ಮೂಲಕ ದಾಖಲೆಯನ್ನೇ ಸೃಷ್ಟಿಸಿದೆ. ಇದು ಬರೀ ಅಂಕಿಸಂಖ್ಯೆಗಳ ದಾಖಲೆಗಷ್ಟೇ ಸೀಮಿತವಾಗಿದ್ದರೆ ಜನರಿಂದ ಈ ಥರದ ಪ್ರತಿಕ್ರಿಯೆ ಬರುತ್ತಿರಲಿಲ್ಲ. ಅದು ಕನ್ನಡಿಗರೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳುವಂತಿದೆ. ಕನ್ನಡವನ್ನು ಬೇರೆ ರಾಜ್ಯದವರೂ ಕಲಿಯುವಂತೆ ಮಾಡೋದು ಹೇಗೆಂಬ ಕಾರ್ಯಗತ ಉತ್ತರವೂ ಇದರಲ್ಲಿದೆ!

ಪರ ರಾಜ್ಯಗಳಿಂದ ಬಂದವರು ಕನ್ನಡ ಕಲಿಯುವುದಿಲ್ಲ ಅಂತ ಬಾಯಿ ಬಡಿದುಕೊಂಡರೆ, ಬಾಷಣ ಬಜಾಯಿಸಿದರೆ ಆಗೋ ಪರಿಣಾಮ ಏನೂ ಇಲ್ಲ. ಅದಕ್ಕೆ ಕನ್ನಡಿಗರ ಮನಸ್ಥಿತಿ ಬದಲಾಗಬೇಕು. ನಿತ್ಯ ವ್ಯವಹಾರ ನಡೆಯೋ ಜಾಗದಲ್ಲಿ ಮನ್ವಂತರವಾಗಬೇಕೆಂಬ ವಿಚಾರವನ್ನು ಈ ಕಿರುಚಿತ್ರ ಅತ್ಯಂತ ಪರಿಣಾಮಕಾರಿಯಾಗಿ ಪ್ರಸ್ತುತ ಪಡಿಸಿದೆ.

ಒಂದು ಹಾಲಿನ ಬೂತಿನ ವಾತಾವರಣದಲ್ಲಿ ಇದನ್ನು ಚಿತ್ರೀಕರಿಸಲಾಗಿದೆ. ಪರ ರಾಜ್ಯಗಳ ಗ್ರಾಹಕರು ಬಂದು ಅವರವರ ಭಾಷೆಯಲ್ಲಿ ಮಾತಾಡಿದರೂ ಕನ್ನಡದಲ್ಲಿಯೇ ವ್ಯವಹರಿಸುತ್ತಾ, ಅವರೂ ಕನ್ನಡ ಮಾತಾಡಲಾರಂಭಿಸಿದಾಗ ಉಚಿತವಾಗಿಯೇ ಹಾಲು ಕೊಟ್ಟು ಪ್ರೋತ್ಸಾಹಿಸೋ ಅಂಗಡಿ ಮಾಲೀಕ ಕನ್ನಡಿಗರೆಲ್ಲರಿಗೂ ಮಾದರಿಯಾಗುತ್ತಾನೆ. ಪರಭಾಷೆಯವರು ಅವರ ಭಾಷೆಯಲ್ಲಿಯೇ ಮಾತಾಡಿದರೂ ಪ್ರತಿಯಾಗಿ ಕನ್ನಡದಲ್ಲೇ ಮಾತಾಡಿದರೆ ಕನ್ನಡ ಕಲಿತೇ ಕಲಿಯುತ್ತಾರೆಂಬ ಸರಳ ಸೂತ್ರವನ್ನು ಈ ಕಿರು ಚಿತ್ರ ಪರಿಣಾಮಕಾರಿಯಾಗಿ ಜಾಹೀರು ಮಾಡಿದೆ. ರೂಪೇಶ್ ರಾಜಣ್ಣ ಎಂಬುವವರು ಈ ವಿಡಿಯೋವನ್ನು ಶೇರ್ ಮಾಡಿದ್ದರು. ಅದೀಗ ಎಲ್ಲೆಡೆ ಟಾಕ್ ಕ್ರಿಯೇಟ್ ಮಾಡಿದೆ.

ಬೇರೆ ಭಾಷೆಯಲ್ಲಿ ದಾರಿ ಕೇಳಿದರೂ ಅವರ ಭಾಷೆಯಲ್ಲೇ ಹೇಳಿ ಬಿಡುವ ಔದಾರ್ಯ ಕನ್ನಡಿಗರದ್ದು. ಅಂಗಡಿಗಳಂಥ ಪ್ರದೇಶಗಳಲ್ಲಿ ವ್ಯಾಪಾರಿ ಬುದ್ಧಿಯೂ ಪರಭಾಷಿಕರು ಕನ್ನಡ ಕಲಿಯದಂತೆ ತಡೆಯುತ್ತಿವೆ. ಇಂಥಾ ಕೊರತೆಗಳನ್ನೆಲ್ಲ ನೀಗಿಸಿ ಕನ್ನಡವನ್ನು ಸಾರ್ವತ್ರಿಕಗೊಳಿಸುವ ಪ್ರಯತ್ನವಾಗಿ ಈ ಕಿರು ಚಿತ್ರ ಗಮನ ಸೆಳೆಯುತ್ತದೆ. ಆದ್ದರಿಂದಲೇ ಇದಕ್ಕೆ ಭಾರೀ ಪ್ರತಿಕ್ರಿಯೆಗಳೂ ಸಿಕ್ಕಿವೆ. ಶ್ರೀನಿವಾಸ ರೆಡ್ಡಿ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಕಿರುತ್ರಕ್ಕೆ ಅಭಿಮಾನ್ ಹಾಡಿದ್ದಾರೆ. ಅಭಿಷೇಕ್ ರಾಯ್ ಸಂಗೀತ ನೀಡಿದ್ದಾರೆ, ರಾಕೇಶ್ ರಾಘವನ್ ಸಂಭಾಷಣೆ ಬರೆದಿದ್ದಾರೆ. ಪ್ರಧಾನ ಪಾತ್ರದಲ್ಲಿ ಅಶೋಕ್ ರಾಯ್ ಅಭಿನಯಿಸಿದ್ದು, ಅಭಿಮನ್ ರಾಯ್ ಅವರ ಪುತ್ರ ಮಾ. ಸೋನು ತೇಜಸರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ. ಅಭಿಮನ್ ರಾಯ್ ಅವರ ಕುಟುಂಬದ ಬಹುತೇಕ ಸದಸ್ಯರು ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ಮಗ ಸೋನು ತೇಜಸ್ ಪಾಲ್ಗೊಂಡಿದ್ದ ಅಲ್ಬಂಗಳೆಲ್ಲಾ ಸಾಕಷ್ಟು ಹೆಸರು ಮಾಡುತ್ತಿವೆ. ಈಗ ಅಶೋಕ್ ರಾಯ್ ಕೂಡಾ ಕನ್ನಡದ ಕುರಿತಾದ ಕಿರುಚಿತ್ರದ ಮೂಲಕ ಸೌಂಡು ಮಾಡುತ್ತದ್ದಾರೆ.

Continue Reading

ಅಭಿಮಾನಿ ದೇವ್ರು

ಕಿಚ್ಚನ ಬರ್ತಡೇ ದಿನವೇ ಬರಲಿದೆ ಕೋಟಿಗೊಬ್ಬ 3 ಟೀಸರ್!

Published

on

ಸೂರಪ್ಪ ಬಾಬು ನಿರ್ಮಾಣ ಮಾಡಿರುವ ಕೋಟಿಗೊಬ್ಬ-೩ ಚಿತ್ರದ ಬಗ್ಗೆ ಸ್ವತಃ ಸುದೀಪ್ ಅವರೇ ಅನೇಕ ಸಲ ಮೆಚ್ಚುಗೆಯ ಮಾತಾಡಿದ್ದಾರೆ. ಅದು ಈ ಸರಣಿ ಗೆಲುವಿನ ಇತಿಹಾಸವನ್ನು ಮರುಕಳಿಸುವಂತೆ ಮಾಡುತ್ತದೆ ಎಂಬ ಭರವಸೆಯನ್ನೂ ವ್ಯಕ್ತಪಡಿಸಿದ್ದಾರೆ. ಇದೀಗ ಚಿತ್ರತಂಡ ಕಿಚ್ಚ ಸುದೀಪ್ ಅವರ ಬರ್ತಡೇಯನ್ನು ಸ್ಪೆಷಲ್ ಆಗಿಸಲು ತೀರ್ಮಾನಿಸಿದೆ.

ಸೆಪ್ಟೆಂಬರ್ ೨ನೇ ತಾರೀಕು ಕಿಚ್ಚಾ ಸುದೀಪ್ ಅವರ ಹುಟ್ಟುಹಬ್ಬವಿದೆ. ಅದೇ ದಿನ ಕೋಟಿಗೊಬ್ಬ ೩ ಚಿತ್ರದ ಸ್ಪೆಷಲ್ ಟೀಸರ್ ಒಂದನ್ನು ಬಿಡುಗಡೆ ಮಾಡಲು ಸೂರಪ್ಪ ಬಾಬು ನಿಧರಿಸಿದ್ದಾರೆ. ಈ ಚಿತ್ರದ ಪ್ರತೀ ವಿಚಾರಗಳ ಬಗ್ಗೆಯೂ ಕಾತರದಿಂದ ಕಾದು ಕೂತಿದ್ದ ಅಭಿಮಾನಿಗಳಿಗೆಲ್ಲ ಇದು ನಿಜಕ್ಕೂ ಹಬ್ಬದಂಥಾದ್ದೇ ಸಂಗತಿ!

ಕನ್ನಡದ ಸ್ಟಾರ್ ನಿರ್ಮಾಪಕ ಎಂದೇ ಹೆಸರಾಗಿರುವ ಸೂರಪ್ಪ ಬಾಬು ಅವರು ಕೋಟಿಗೊಬ್ಬ ೩ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಇದಲ್ಲದೇ ಶಿವಕಾರ್ತಿಕ್ ಎಂಬ ಉತ್ಸಾಹಿ ಯುವಕನಿಗೆ ನಿರ್ದೇಶನದ ಜವಾಬ್ದಾರಿಯನ್ನೂ ವಹಿಸಿದ್ದಾರೆ. ಹೊಸಬರನ್ನು ಪ್ರೋತ್ಸಾಹಿಸುವ ಮೂಲಕವೂ ಸೂರಪ್ಪ ಬಾಬು ಹೊಸಾ ಹೆಜ್ಜೆ ಇಟ್ಟಿದ್ದಾರೆ.

ಈಗಾಗಲೇ ಕೋಟಿಗೊಬ್ಬ ೩ ಚಿತ್ರ ಎಲ್ಲೆಡೆ ಟ್ರೆಂಡಿಂಗ್‌ನಲ್ಲಿದೆ. ಈ ಚಿತ್ರದ ಬಗೆಗಿನ ಒಂದಲ್ಲ ಒಂದು ವಿಚಾರ ಸದಾ ಸುದ್ದಿಯಲ್ಲಿರುತ್ತಾ ಬಂದಿದೆ. ಅಂತೂ ಸುದೀಪ್ ಬರ್ತಡೇ ದಿನವೇ ಟೀಸರ್ ಬಿಡುಗಡೆಯಾಗುತ್ತಿರೋದರಿಂದ ಅಭಿಮಾನಿಗಳೆಲ್ಲರೂ ಆ ಕ್ಷಣದ ನಿರೀಕ್ಷೆಯಲ್ಲಿದ್ದಾರೆ.

Continue Reading

Trending

Copyright © 2018 Cinibuzz