Connect with us

ಗಾಂಧಿನಗರ ಗಾಸಿಪ್

ರಾಧಿಕಾ ಮತ್ತು ನಿರೂಪ್ ಭಂಡಾರಿಯ ಆದಿ ಲಕ್ಷ್ಮಿ ಪುರಾಣ!

Published

on

ರಾಧಿಕಾ ಪಂಡಿತ್ ಮತ್ತು ನಿರೂಪ್ ಭಂಡಾರಿ ಒಟ್ಟಾಗಿ ನಟಿಸಲಿದ್ದಾರೆಂಬ ಸುದ್ದಿಯೊಂದು ತಿಂಗಳಿಂದೀಚೆಗೆ ಹರಿದಾಡುತ್ತಿತ್ತು. ಆದರೆ ಅದು ಯಾವ ಚಿತ್ರ, ಅದರ ಶೀರ್ಷಿಕೆ ಏನೆಂಬುದರ ಬಗ್ಗೆ ಯಾವ ಮಾಹಿತಿಯೂ ಇರಲಿಲ್ಲ. ಆದರೀಗ ಈ ಚಿತ್ರದ ಟೈಟಲ್ ಯಾವುದೆಂಬುದನ್ನು ಚಿತ್ರತಂಡ ಜಾಹೀರು ಮಾಡಿದೆ!

ಈ ಚಿತ್ರಕ್ಕೆ ಆದಿ ಲಕ್ಷ್ಮಿ ಪುರಾಣ ಎಂಬ ನಾಮಕರಣ ಮಾಡಲಾಗಿದೆಯಂತೆ. ಶೀರ್ಷಿಕೆ ಕೇಳಿದರೇನೇ ಕಥೆ ಎಂಥಾದ್ದಿರಬಹುದೆಂಬ ಕೌತುಕವೂ ಹುಟ್ಟುತ್ತದೆ. ಆದರೆ ಇದೊಂದು ಲವ್ ಸ್ಟೋರಿ ಎಂಬ ಸುಳಿವೂ ಕೂಡಾ ಸಿಗುವಂತಿದೆ. ಇದರ ಜೊತೆ ಜೊತೆಗೇ ರಾಧಿಕಾ ಪಂಡಿತ್ ಮತ್ತು ನಿರೂಪ್ ಭಂಡಾರಿ ಆದಿ ಮತ್ತು ಲಕ್ಷ್ಮಿಯರಾಗಿ ಕಾಣಿಸಿಕೊಳ್ಳಲಿರುವ ಈ ಚಿತ್ರದ ಬಗ್ಗೆ ಅಭಿಮಾನಿಗಳು ಕಾತರರಾಗಿದ್ದಾರೆ!

ಆದರೆ ಈಗ ಈ ಚಿತ್ರಕ್ಕೆ ತಯಾರಿಗಳು ನಡೆಯುತ್ತಿವೆಯಷ್ಟೇ. ಸದ್ಯಕ್ಕೇನೂ ಚಿತ್ರೀಕರಣ ಆರಂಭವಾಗೋ ಸೂಚನೆಗಳಿಲ್ಲ. ಯಾಕೆಂದರೆ ರಾಧಿಕಾ ಪಂಡಿತ್ ಈಗ ಮಗುವೊಂದನ್ನು ಎದುರು ನೋಡುತ್ತಿದ್ದಾರೆ. ಡಿಸೆಂಬರ್ ಹೊತ್ತಿಗೆಲ್ಲ ಅವರು ತಾಯಿಯಾಗಲಿದ್ದಾರೆ. ಆದರೆ ಈ ಚಿತ್ರದಲ್ಲಿ ರಾಧಿಕಾ ನಟಿಸಲು ಒಪ್ಪಿಕೊಂಡಿದ್ದಾಗಿದೆ. ಚಿತ್ರೀಕರಣವೇನಿದ್ದರೂ ಬಾಣಂತನವೆಲ್ಲ ಮುಗಿದಾದ ನಂತರವೇ.

ಸದ್ಯಕ್ಕೆ ತಾಂತ್ರಿಕ ವರ್ಗ ಮತ್ತು ತಾರಾಗಣದ ಆಯ್ಕೆ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಚಿತ್ರ ತಂಡ ರಾಧಿಕಾ ಮಗುವಿನ ಆರೈಕೆ ಮುಗಿಸಿ ಬರೋವರೆಗೂ ಚಿತ್ರದ ತಯಾರಿಯಲ್ಲಿ ತೊಡಗಲು ತೀರ್ಮಾನಿಸಿದೆಯಂತೆ. ಒಂದು ವಿಭನ್ನ ಪ್ರೇಮ ಕಥೆ ಹೊಂದಿರೋ ಈ ಚಿತ್ರದ ಬಗ್ಗೆ ನಿರೂಪ್ ಕೂಡಾ ನಿರೀಕ್ಷೆ ಹೊಂದಿದ್ದಾರೆ.

Continue Reading
Advertisement
Click to comment

Leave a Reply

Your email address will not be published. Required fields are marked *

ಗಾಂಧಿನಗರ ಗಾಸಿಪ್

ಮೋದಿ ಭಕ್ತರತ್ತ ಪೆಟ್ರೋಲ್ ಬಾಂಬೆಸೆದ ಮದನ್ ಪಟೇಲ್!

Published

on

ಪೆಟ್ರೋಲ್ ಬೆಲೆಯೇರಿಕೆಯ ವಿರುದ್ಧ ಭಾರತ ಬಂದ್ ನಡೆದಿದೆ. ಈ ಸಂಬಂಧವಾಗಿ ಇಡೀ ಕರ್ನಾಟಕದಲ್ಲಿ ನಡೆದ ಒಂದಷ್ಟು ಲೈವ್ ಅಹಿತರ ಘಟನಾವಳಿಗಳೂ ನಡೆದಿವೆ. ಆದರೆ ಈ ಪೆಟ್ರೋಲ್ ಬೆಲೆಯೇರಿಕೆಯ ಬಗ್ಗೆ ಆನ್‌ಲೈನಿನಲ್ಲಿ ಮಾರಾಮಾರಿಯೇ ನಡೆಯುತ್ತಿದೆ. ಇದೇ ಬಿಸಿಯಲ್ಲೀಗ ನಟ, ನಿರ್ಮಾಪಕ, ರಾಜಕಾರಣಿ ಮದನ್ ಪಟೇಲ್ ಇದೀಗ ಮೋದಿ ಬೆಂಬಲಿಗರ ವಿರುದ್ಧ ಸಿಟ್ಟಾಗಿದ್ದಾರೆ. ಜೊತೆಗೊಂದು ಎಚ್ಚರಿಕೆಯನ್ನೂ ರವಾನಿಸಿದ್ದಾರೆ. ಒಂದು ಕಾಲದಲ್ಲಿ ಬಿಜೆಪಿ ಪಕ್ಷದಲ್ಲೇ ಓಡಾಡಿಕೊಂಡಿದ್ದ ಮದನ್ ಯಾಕೆ ಅದೇ ಪಕ್ಷದ ವಿರುದ್ಧ ಗುಡುಗಿದ್ದಾರೋ ಗೊತ್ತಿಲ್ಲ!

`ಇತ್ತೀಚೆಗೆ ನಾನು ಕೇಂದ್ರ ಸರ್ಕಾರದ ಪೆಟ್ರೋಲ್ ಬೆಲೆ ಏರಿಕೆ ಕುರಿತು ಶೇರ್ ಮಾಡುತ್ತಿರೋ ಪೋಸ್ಟ್‌ಗಳಿಗೆ ಕೆಲವು ನಮೋಭಕ್ತ ಶಿಖಂಡಿ ವಂಶಸ್ಥರು ತಮ್ಮ ಚೆಡ್ಡಿ ಭಾಷೆಯಲ್ಲಿ ಕಮೆಂಟ್ಸ್ ಮಾಡುತ್ತಿರುವ ಬಗ್ಗೆ ನನ್ನ ಪಿಎ ಗಮನಕ್ಕೆ ತಂದಿರುತ್ತಾನೆ. ನಿಮ್ಮ ಭಾಷೆ ನಿಮ್ಮತನ ತೋರಿಸುತ್ತದೆ. ನಿಮಗಿಂತಾ ಕೀಳು ಮಟ್ಟದ ಭಾಷೆ ನಮಗೂ ಬರುತ್ತದೆ. ನಿಮ್ಮ ಭಾಷೆಯ ಬಗ್ಗೆ ಹಿಡಿತವಿರಲಿ. ಇಲ್ಲದಿದ್ದಲ್ಲಿ ನೀವೇ ಅದಕ್ಕೆ ಹೊಣೆಗಾರರಾಗುತ್ತೀರಿ. ಕಾನೂನು ಕ್ರಮದ ಜೊತೆಗೆ ನನ್ನ ಅಭಿಮಾನಿಗಳ ಕ್ರಮದ ಬಗ್ಗೆ ಎಚ್ಚರವಿರಲಿ. ಧೈರ್ಯವಿದ್ದರೆ ನಿಮ್ಮ ನಿಮ್ಮ ವಿಳಾಸದ ಜೊತೆಗೆ ಕಮೆಂಟ್ ಮಾಡಿ ನೋಡಿ. ನಂತರ ಬೆಳವಣಿಗೆ ಗಮನಿಸಿ. ಹುಷಾರ್…’ ಎಂಬುದು ಫೇಸ್‌ಬುಕ್ ಮೂಲಕವೇ ಮದನ್ ಪಟೇಲ್ ಎಚ್ಚರಿಕೆ ನೀಡಿರೋದರ ಸಾರಾಂಶ.

ಇಂಥಾ ಚರ್ಚೆಗಳ ನಡುವೆ ವೀರಾವೇಷದ ಅಶ್ಲೀಲ ಪದ ಬಳಕೆ ಈಗ ಆನ್‌ಲೈನ್ ಜಗತ್ತಿನಲ್ಲಿ ಮಾಮೂಲಿಯಾಗಿದೆ. ಪಕ್ಷ ಯಾವುದೇ ಇದ್ದರೂ ಕೂಡಾ ವಿರೋಧ ವ್ಯಕ್ತ ಪಡಿಸೋದಕ್ಕೆ ಸಭ್ಯ ಮಾರ್ಗಗಳಿವೆ. ಇಂಥಾ ವೀರಾವೇಶದಿಂಣದಲೇ ರ್ಚೆಯನ್ನು ಹಾದಿ ತಪ್ಪಿಸುವ ಪ್ರಯತ್ನಗಳೂ ನಡೆಯೋದಿದೆ. ಆದರೆ ನೆಟ್ಟಗೆ ಕನ್ನಡವೂ ಬಾರದ ಮಂದಿ ಕೆಟ್ಟಾ ಕೊಳಕ ಬೈಗುಳ ಬಳಸುವ ಮೂಲಕ ಅವರವರ ಪಕ್ಷಕ್ಕೆ, ನಾಯಕರಿಗೂ ಅಪಮಾನವೆಸಗುತ್ತಿದ್ದಾರೆಂಬ ಅಭಿಪ್ರಾಯ ಪ್ರಜ್ಞಾವಂತರದ್ದು.

ಸದ್ಯ ಮದನ್ ಪಟೇಲ್ ಎಚ್ಚರಿಕೆ ಯಾವ ರೀತಿಯಲ್ಲಿ ವರ್ಕೌಟ್ ಆಗುತ್ತದೆ ಎಂಬುದನ್ನು ಕಾದು ನೋಡ ಬೇಕಿದೆ!

Continue Reading

ಗಾಂಧಿನಗರ ಗಾಸಿಪ್

ನಟನೆಗಿಳಿದ ನಿರ್ಮಾಪಕ!

Published

on

ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಹಂಚಿಕೆದಾರರಾಗಿ, ನಿರ್ಮಾಪಕರಾಗಿ ಖ್ಯಾತರಾಗಿರುವವರು ಪುಷ್ಕರ್ ಮಲ್ಲಿಕಾರ್ಜುನಯ್ಯ. ಒಳ್ಳೆ ಸಿನಿಮಾಗಳನ್ನು ಹೆಚ್ಚು ಜನರಿಗೆ ತಲುಪಿಸಬೇಕೆಂಬ ಉದ್ದೇಶದಿಂದಲೇ ಡಿಸ್ಟ್ರಿಬ್ಯೂಟರ್ ಆಗಿಯೂ, ಒಳ್ಳೆ ಚಿತ್ರಗಳನ್ನು ನಿರ್ಮಾಣ ಮಾಡಬೇಕೆಂಬ ಮಹತ್ವಾಕಾಂಕ್ಷೆಯಿಂದ ನಿರ್ಮಾಪಕರಾಗಿಯೂ ಕಾರ್ಯ ನಿರ್ವಹಿಸುತ್ತಾ ಬಂದಿರುವ ಅವರೀಗ ನಟನಾಗಿಯೂ ಅಬ್ಬರಿಸಲು ಅಣಿಯಾಗಿದ್ದಾರೆ!

ಇಂಥಾದ್ದೊಂದು ಸೋಜಿಗದ ಸುದ್ದಿ ಹೊರ ಬಿದ್ದಿರೋದು ರಾಗಿಣಿ ದ್ವಿವೇದಿ ಅಭಿನಯದ ದಿ ಟೆರರಿಸ್ಟ್ ಚಿತ್ರದ ಕಡೆಯಿಂದ. ಹಾಗಾದರೆ ಮಲ್ಲಿಕಾರ್ಜುನಯ್ಯನವರು ಟೆರರಿಸ್ಟ್ ಪಾತ್ರ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಕಾಡೋದು ಸಹಜವೇ. ಆದರೆ ಅವರಿಲ್ಲಿ ಟೆರರಿಸ್ಟುಗಳನ್ನು ಸದೆ ಬಡಿಯುವ ಇಂಟಲಿಜೆನ್ಸ್ ಪಾತ್ರದಲ್ಲಿ ವೀರೋಚಿತವಾಗಿ ಅಭಿನಯಿಸಲಿದ್ದಾರಂತೆ. ನಿರ್ದೇಶಕ ಪಿಸಿ ಶೇಖರ್ ಅವರು ಈ ಮೂಲಕ ನಿರ್ಮಾಪಕ ಮಲ್ಲಿಕಾರ್ಜುನಯ್ಯನವರು ಬಣ್ಣ ಹಚ್ಚುವಂತೆ ಮಾಡಿದ್ದಾರೆ.

ರಾಗಿಣಿ ದ್ವಿವೇದಿ ಮುಖ್ಯಭೂಮಿಕೆಯಲ್ಲಿರುವ ಟೆರರಿಸ್ಟ್ ಚಿತ್ರ ಪೋಸ್ಟರುಗಳೂ ಸೇರಿದಂತೆ ನಾನಾ ಬಗೆಯಲ್ಲಿ ಗಮನ ಸೆಳೆಯುತ್ತಿದೆ. ಈ ಚಿತ್ರದಲ್ಲಿ ಖಡಕ್ ಆದ ಇಂಟಲಿಜೆನ್ಸ್ ಆಫಿಸರ್ ಪಾತ್ರವೊಂದಿದೆಯಂತೆ. ಇಡೀ ಚಿತ್ರದಲ್ಲಿ ಈ ಪಾತ್ರದ್ದು ನಿರ್ಣಾಯಕ ಛಾಯೆಯಿದೆ. ಆದರೆ ಈ ಪಾತ್ರಕ್ಕೆ ಸೂಕ್ತ ನಟರಿಗಾಗಿ ಬಹಳಷ್ಟು ದಿನಗಳಿಂದ ತಲಾಷು ನಡೆಯುತ್ತಿತ್ತು. ಕಡೆಗೂ ಆ ಪಾತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯನವರೇ ಸೂಕ್ತ ಅಂತ ನಿರ್ದೇಶಕರು ನಿರ್ಧರಿಸಿದ್ದರಂತೆ. ಅದಕ್ಕೆ ಪುಷ್ಕರ್ ಅವರ ಕಡೆಯಿಂದಲೂ ಒಪ್ಪಿಗೆ ಸಿಕ್ಕಿದೆ ಎಂಬ ಮಾತುಗಳಿವೆ.

ಇದುವರೆಗೂ ಪ್ರಯೋಗಾತ್ಮಕ ಚಿತ್ರಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಪುಷ್ಕರ್ ಮಲ್ಲಿಕಾರ್ಜುನಯ್ಯ ಟೆರರಿಸ್ಟ್ ಚಿತ್ರದ ಮೂಲಕ ತಮ್ಮನ್ನೇ ಹೊಸಾ ಪ್ರಯೋಗವೊಂದಕ್ಕೆ ಒಡ್ಡಿಕೊಂಡಿದ್ದಾರೆ. ಇಂಟಲಿಜೆನ್ಸ್ ಆಫಿಸರ್ ಪಾತ್ರಕ್ಕೆ ಹೇಳಿ ಮಾಡಿಸಿದಂಥಾ ದೇಹ ಪ್ರಕೃತಿ, ಖಡಕ್ ಲುಕ್ಕು ಹೊಂದಿರೋ ಪುಷ್ಕರ್ ಈ ಪಾತ್ರದ ಮೂಲಕ ನಟನಾಗಿ ನೆಲೆ ನಿಂತರೂ ಅಚ್ಚರಿಯೇನಿಲ್ಲ!

Continue Reading

ಗಾಂಧಿನಗರ ಗಾಸಿಪ್

ಮುತ್ತಣ್ಣನ ಸಿನಿಮಾಗಾಗಿ ಬರ್ತಾರಂತೆ ಮುತ್ತಯ್ಯ!

Published

on

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಈಗ ಒಪ್ಪಿಕೊಂಡಿರೋ ಚಿತ್ರಗಳ ಸಂಖ್ಯೆಯೇ ಎಂಥವರೂ ಹೌಹಾರುವಂತಿದೆ. ಈ ಸಾಲು ಸಾಲು ಚಿತ್ರಗಳಲ್ಲಿ ಸದ್ಯಕ್ಕವರು ದ್ರೋಣ ಮತ್ತು ರುಸ್ತುಂ ಚಿತ್ರಗಳ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಅವರು ಮತ್ತೊಂದು ಹೊಸಾ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿರೋ ಸುದ್ದಿಯೂ ಹೊರ ಬಿದ್ದಿದೆ.

ತಮಿಳು ನಿರ್ದೇಶಕ ಎಂ ಮುತ್ತಯ್ಯ ನಿರ್ದೇಶನದ ಚಿತ್ರವೊಂದರಲ್ಲಿ ಶಿವರಾಜ್ ಕುಮಾರ್ ನಟಿಸಲು ಒಪ್ಪಿಕೊಂಡಿದ್ದಾರೆಂಬ ಸುದ್ದಿ ಹರಿದಾಡುತ್ತಿದೆಯಾದರೂ ಅಧಿಕೃತ ಮಾಹಿತಿ ಇನ್ನಷ್ಟೇ ಹೊರ ಬೀಳಬೇಕಿದೆ. ಈಗಿರೋ ಮಾಹಿತಿ ಆಧರಿಸಿ ಹೇಳೋದಾದರೆ ಈ ಚಿತ್ರವನ್ನು ನಿರ್ಮಾಣ ಮಾಡಲಿರುವವರು ಕೂಡಾ ತಮಿಳಿಗರೆ. ತಮಿಳು ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಹೆಸರು ಮಾಡಿರುವ ಜ್ಞಾನವೇಲು ರಾಜಾ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರಂತೆ.

ಈ ವಿಚಾರವಾಗಿ ಶಿವರಾಜ್ ಕುಮಾರ್ ಇನ್ನಷ್ಟೇ ಮಾಹಿತಿ ನೀಡಬೇಕಿದೆ. ಆದರೆ ಈ ಚಿತ್ರದ ಬಗೆಗಿನ ಎಲ್ಲ ಮಾತುಕತೆಗಳೂ ಸಮಾಪ್ತಿಗೊಂಡಿರೋದರಿಂದ ರುಸ್ತುಂ ಮತ್ತು ದ್ರೋಣ ಚಿತ್ರ ಮುಕ್ತಾಯದ ಹಂತ ತಲುಪಿದಾಕ್ಷಣವೇ ತಮಿಳು ನಿರ್ದೇಶಕನ ಈ ಚಿತ್ರದ ಬಗ್ಗೆ ಶಿವಣ್ಣ ಮಾತಾಡೋ ಸಾಧ್ಯತೆಗಳಿವೆ.

ಬಹುಶಃ ಕನ್ನಡದಲ್ಲಿ ಯಾವ ನಟರೂ ಶಿವಣ್ಣನನ್ನು ಚಿತ್ರಗಳ ಸಂಖ್ಯೆಯಲ್ಲಿ ಬೀಟ್ ಮಾಡೋದು ಕಷ್ಟವಿದೆ. ಏಕ ಕಾಲಕ್ಕೇ ಎರಡೆರಡು ಚಿತ್ರಗಳಲ್ಲಿ ಅಭಿನಯಿಸುತ್ತಿರೋ ಶಿವಣ್ಣನ ಎನರ್ಜಿ ಕಂಡು ಯುವ ನಟರೂ ಬೆರಗಾಗುತ್ತಿದ್ದಾರೆ. ಇದುವರೆಗೆ ಅವರು ಒಪ್ಪಿಕೊಂಡಿರೋ ಪ್ರಾಜೆಕ್ಟುಗಳ ಬಗ್ಗೆಯೇ ಬಹುತೇಕರು ಬೆರಗಾಗಿದ್ದರು. ಇನ್ನೊಂದು ವರ್ಷಗಳ ಕಾಲ ಕೊಂಚವೂ ಬಿಡುವಿಲ್ಲದಷ್ಟು ಚಿತ್ರಗಳನ್ನು ಈಗಾಗಲೇ ಒಪ್ಪಿಕೊಂಡಿರೋ ಶಿವಣ್ಣನ ಬತ್ತಳಿಕೆಗೆ ಮತ್ತೊಂದು ಚಿತ್ರ ಸೇರ್ಪಡೆಗೊಂಡಂತಿದೆ!

Continue Reading

Trending

Copyright © 2018 Cinibuzz