One N Only Exclusive Cine Portal

ಭರ್ಜರಿ ಕಾಮಿಡಿ ಶೋನಿಂದ ಸಂಜನಾ ಕಿಕ್‌ಔಟ್?

ಬಿಗ್‌ಬಾಸ್ ಎಂಬ ಶೋದ ಮತ್ತೊಂದು ಸೀಜನ್ ಮುಕ್ತಾಯವಾದರೂ ಸಂಜನಾ ಎಂಬಾಕೆಯ ನಖರಾಗಳು ಮಾತ್ರ ಮುಕ್ತಾಯವಾದಂತಿಲ್ಲ. ತನ್ನ ತಾಯಿಯ ಅಮೋಘವಾದ ಬೆಂಬಲದಿಂದ ಕನ್ನಡ ಚಿತ್ರರಂಗದಲ್ಲಿ ನಂಬರ್ ಒನ್ ನಟಿಯಾಗುವ ಆವೇಗದಿಂದ ಹೊರಟಿದ್ದ ಸಂಜನಾ ಇದೀಗ ಸಿಕ್ಕ ಅವಕಾಶವೊಂದನ್ನೂ ಕಳೆದುಕೊಂಡಳಾ ಅಂತೊಂದು ಗುಮಾನಿ ಹರಡಿಕೊಂಡಿದೆ.

ಬಿಗ್‌ಬಾಸ್ ಸ್ಪರ್ಧಿಯಾಗಿದ್ದ ಸಂಜನಾ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭರ್ಜರಿ ಕಾಮಿಡಿ ಶೋನಲ್ಲಿ ಪಾಲ್ಗೊಂಡಿದ್ದಳು. ರಾಗಿಣಿ, ದೊಡ್ಡಣ್ಣ ಮುಂತಾದವರು ಜಡ್ಜ್‌ಗಳಾಗಿರುವ, ಅಗ್ನಿ ಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ ನಿರೂಪಣೆಯ ಈ ಶೋ ಚೆಂದಗೆ ಮೂಡಿ ಬರುತ್ತಿದೆ. ಇದರಲ್ಲಿನ ಶೋಗಳಲ್ಲಿ ಪಾಲ್ಗೊಂಡಿದ್ದ ಸಂಜನಾ ಕೆಲವೇ ವಾರಗಳಲ್ಲಿ ಕಣ್ಮರೆಯಾಗಿದ್ದಾಳೆ.

ಸಂಜನಾ ಏಕಾಏಕಿ ಗಾಯಬ್ ಆಗಲು ಕಾರಣವೇನು ಅಂತ ನೋಡ ಹೋದರೆ ಕೆಲ ನಖರಾ ಮ್ಯಾಟರ್‌ಗಳು ಹೊರ ಬೀಳುತ್ತಿವೆ. ಸಂಜನಾ ಈ ಶೋನ ರಿಹರ್ಸಲ್ ಸೇರಿದಂತೆ ಯಾವುದಕ್ಕೂ ಹೇಳಿದ ಸಮಯಕ್ಕೆ ಹಾಜರಾಗುತ್ತಿರಲಿಲ್ಲವಂತೆ. ತಾನು ಪ್ರಸಿದ್ಧ ನಟಿಯಾಗಿರೋದರಿಂದ ಹೇಳಿದ ಸಮಯಕ್ಕೆ ಹೋದರೆ ಮರ್ಯಾದೆ ಇರೋದಿಲ್ಲ ಅಂದುಕೊಂಡಿದ್ದಳೇನೋ ಸಂಜನಾ? `ಯಾಕಮ್ಮಾ ಹೀಗೆ’ ಅಂದರೆ `ನಾನು ಹೈದ್ರಾಬಾದಿನಲ್ಲಿ ಸೀರಿಯಲ್ ಮಾಡ್ತಿದೀನಿ. ಡೇಟ್ಸ್ ಪ್ರಾಬ್ಲಂ ಆಗತ್ತೆ’ ಎನ್ನುತ್ತಿದ್ದಂತೆ ಸಂಜು. ಆದರೆ ಕಾರ್ಯಕ್ರಮದ ಆಯೋಜಕರು ಸಂಜನಾ ಕಡೆಯಿಂದ ತೂರಿ ಬರುತ್ತಿದ್ದ ಥರ ಥರದ ನಖರಾ ನೋಡಿ ಕಡೆಗೂ ಈಕೆಯನ್ನು ಗೌರವ ಪೂರ್ವಕವಾಗಿಯೇ ಮನೆಗೆ ಕಳಿಸಿದ್ದಾರೆಂಬ ಸುದ್ದಿ ಇದೆ.

ಕಾಮಿಡಿ ಕಿಲಾಡಿಗಳು ಶೋ ಆದ ಮೇಲೆ ಅಂಥಾದ್ದೇ ನಾನಾ ಕಾರ್ಯಕ್ರಮಗಳು ಬಂದಿದ್ದವು. ಆದರೆ ಅದೆಲ್ಲವುಗಳಿಗಿಂತಲೂ ಭರ್ಜರಿ ಕಾಮಿಡಿ ಚೆನ್ನಾಗಿದೆ ಅಂತ ಪ್ರೇಕ್ಷಕರೇ ಅಭಿಪ್ರಾಯ ಪಡುತ್ತಿದ್ದಾರೆ. ಇಂಥಾ ಒಳ್ಳೆ ಶೋನಲ್ಲಿ ಸಿಕ್ಕ ಅವಕಾಶವನ್ನು ತೆಲುಗು ಸೀರಿಯಲ್ ಕಾರಣಕ್ಕೆ ಸಂಜನಾ ತಾನೇ ತಾನಾಗಿ ಒದ್ದುಕೊಂಡಳಾ ಎಂಬುದು ಸದ್ಯದ ಪ್ರಶ್ನೆ!

Leave a Reply

Your email address will not be published. Required fields are marked *


CAPTCHA Image
Reload Image