ಬಿದ್ದರೂ ಖುಷಿಪಟ್ಟ ಸನ್ನಿಲಿಯೋನ್!

ಬಿ ಟೌನಿನಲ್ಲಿ ಸದಾ ಸುದ್ದಿಯಲ್ಲಿರುವ ನಟಿಮಣಿಯರ ಪೈಕಿ ಹಾಟ್ ಬ್ಯೂಟಿ ಸನ್ನಿಲಿಯೋನ್ ಪ್ರಮುಖರಾಗಿದ್ದಾರೆ. ಪೋರ್ನ್ ಜಗತ್ತಿನಿಂದ ದೂರವಾಗಿ ಬಾಲಿವುಡ್ ನಲ್ಲಿ ನಟಿಯಾಗಿ ಗುರುತಿಸಿಕೊಂಡಿರುವ ಸನ್ನಿಲಿಯೋನ್ ಇತ್ತೀಚಿಗೆ ಎಡವಿ ಬಿದ್ದಿದ್ದಾರೆ. ಅಷ್ಟೇ ಅಲ್ಲದೇ ತಾನೇ ಬಿದ್ದ ಪೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.

ಹೌದು ಗ್ರೌಂಡ್ ನಲ್ಲಿದ್ದ ಸನ್ನಿ ಲಿಯೋನ್ ಅಚಾನಕ್ಕಾಗಿ ಕೆಳಕ್ಕೆ ಬಿದ್ದಿದ್ದು, ತಕ್ಷಣವೇ ಯಾರೋ ಫೋಟೋವನ್ನು ತೆಗೆದಿದ್ದಾರೆ. ಫೋಟೋ ನೋಡಿದ ಸನ್ನಿ ಖುಷಿ ಖುಷಿಯಾಗಿಯೇ ಟ್ವಿಟರ್ ಗೆ ಅಪ್ ಲೋಡ್ ಮಾಡಿದ್ದಾರೆ. ಕೆಲವೊಮ್ಮೆ ನಾವು ಬೀಳುವುದು, ಯಾರಾದರೂ ನೋಡಿಬಿಟ್ಟರೋ ಏನೋ ಎಂದು ಕಳವಳಗೊಂಡು ತಕ್ಷಣ ಏಳಲು ಪ್ರಯತ್ನಿಸುವುದು ಒಂಥರಾ ಮಜಾ ಕೊಡುತ್ತದೆ. ನಾನು ಬಿದ್ದಾಗಲೇ ನನಗೆ ಹೆಚ್ಚು ನಗು ಬರುತ್ತದೆ. ನಾನು ಅದನ್ನು ಸಖತ್ ಎಂಜಾಯ್ ಮಾಡುತ್ತೇನೆ. ಬೇರೆಯವರು ಬಿದ್ದಾಗ ನಗುವುದಕ್ಕಿಂತ ನಾವು ಬಿದ್ದಾಗ ನಗುವುದೇ ಹೆಚ್ಚು ಉತ್ತಮ ಎಂದು ನನಗನಿಸುತ್ತದೆ” ಎಂದು ಹೇಳಿ ನಕ್ಕಿದ್ದಾರೆ ಸನ್ನಿ.


Posted

in

by

Tags:

Comments

Leave a Reply