ವಿಜಯ್ ಸೇತುಪತಿ ಅಭಿನಯದ ಸಿಂಧೂಬಾದ್ ಸಿನಿಮಾ ರಿಲೀಸ್ ಹತ್ತಿರವಾಗುತ್ತಿದೆ. ಇದರ ಜತೆಗೆ ಅವರ ಮುಂದಿನ ಸಿನಿಮಾ ಯಾವುದೆಂಬ ಚರ್ಚೆಯೂ ಆಗುತ್ತಿದೆ. ಈ ನಡುವೆ ವಿಜಯ್ ಸೇತುಪತಿ ಸಂಗ ತಮಿಜಾನ್ ಎನ್ನುವ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆನ್ನಲಾಗಿದೆ. ವಿಶೇಷವೆಂದರೆ ಸಿನಿಮಾದ ಅರ್ಧ ಭಾಗದ ಚಿತ್ರೀಕರಣವೂ ಸದ್ದಿಲ್ಲದೇ ಈಗಾಗಲೇ ಮುಗಿದಿದೆಯಂತೆ. ಚಿತ್ರವನ್ನು ವಾಲು ಮತ್ತು ಸ್ಕೆಚ್ ಫೇಮಿನ ವಿಜಯ್ ಚಂದರ್ ಅವರು ನಿರ್ದೆಶನ ಮಾಡುತ್ತಿದ್ದಾರೆ.
ಇನ್ನು ಸಿನಿಮಾ ರಿಲೀಸ್ ಗೆ ಮುನ್ನವೇ ಸಂಗ ತಮಿಜಾನ್ ನ ಸ್ಯಾಟಲೈಟ್ ಹಕ್ಕು ಕೂಡ ಬಿಕರಿಯಾಗಿದ್ದು, ಸನ್ ನೆಟ್ ವರ್ಕ್ ಬರೋಬ್ಬರಿ 11 ಕೋಟಿಗೆ ಖರೀದಿ ಮಾಡಿದೆ ಎನ್ನಲಾಗಿದೆ. ಸಂಗ ತಮಿಜಾನ್ ಸಿನಿಮಾವನ್ನು ವಿಜಯ್ ಪ್ರೊಡಕ್ಷನ್ ನಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ವಿಜಯ್ ಸೇತುಪತಿ ಚೊಚ್ಚಲ ಬಾರಿಗೆ ದ್ವಿಪಾತ್ರದಲ್ಲಿ ಅಭಿನಯಿಸಲಿದ್ದಾರೆ. ವಿಜಯ್ ಸೇತುಪತಿ ಜತೆಯಾಗಿ ನಿವೇತಾ ಪೆತುರಾಜ್, ರಾಶಿ ಕನ್ನಾ ನಾಯಕಿಯರಾಗಿ ಬಣ್ಣ ಹಚ್ಚಲಿದ್ದಾರೆ. ಉಳಿದಂತೆ ನಸೀರ್, ಅಶುತೋಶ್ ರಣ, ಜಾನ್ ವಿಜಯ್ ನಟಿಸಿದ್ದಾರೆ. ವಿವೇಕ್ ಮೆರ್ವಿನ್ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.
No Comment! Be the first one.