One N Only Exclusive Cine Portal

ತಾಯಿಗೆ ತಕ್ಕ ಮಗ ಚಿತ್ರದ ನಿರ್ದೇಶಕರು ಬದಲಾಗಿದ್ದೇಕೆ?

ಹೊಸಾ ಪ್ರತಿಭೆಗಳಿಗೆ ಅವಕಾಶ ನೀಡಿ ಪ್ರೋತ್ಸಾಹಿಸೋ ಕನಸಿನೊಂದಿಗೆ ನಿರ್ದೇಶಕ ಶಶಾಂಕ್ ಸ್ಥಾಪಿಸಿರೋ ಸಂಸ್ಥೆ ಶಶಾಂಕ್ ಸಿನಿಮಾಸ್. ಈ ಸಂಸ್ಥೆಯ ಮೂಲಕ ಮೊದಲ ಚಿತ್ರವಾಗಿ ನಿರ್ಮಾಣಗೊಳ್ಳುತ್ತಿರೋ ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಅಜೇಯ್ ರಾವ್ ನಟಿಸುತ್ತಿರೋದು ಗೊತ್ತೇ ಇದೆ. ಆದರೆ ಈ ಚಿತ್ರದ ಮೊದಲ ಹಂತದ ಚಿತ್ರೀಕರಣವನ್ನು ಮುಗಿಸಿದ ನಂತರ ನಿರ್ದೇಶಕ ವೇದ್ ಗುರು ಜಾಗಕ್ಕೆ ಮತ್ತೋರ್ವ ನಿರ್ದೇಶಕರು ಬರಲಿದ್ದಾರಾ?

ಇಂಥಾದ್ದೊಂದು ರೂಮರ್ ಹರಿದಾಡಲಾರಂಭಿಸಿದೆ. ಚಿತ್ರ ತಂಡದ ಮೂಲಗಳ ಪ್ರಕಾರ ನಿರ್ದೇಶಕರ ಬದಲಾವಣೆಯಾಗೋದು ನಿಜ. ಆದರೆ ಇದಕ್ಕೆ ಯಾವುದೇ ಕಿರಿಕ್ಕುಗಳಾಗಲೀ, ಅಸಮಾಧಾನವಾಗಲೀ ಖಂಡಿತಾ ಕಾರಣವಲ್ಲ. ಈ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದ ವೇದ್ ಗುರು ಅಚ್ಚಕಟ್ಟಾಗಿಯೇ ಪ್ರಥಮ ಹಂತದ ಚಿತ್ರೀಕರಣವನ್ನು ಪೂರೈಸಿದ್ದಾರೆ. ಆದರೆ ಈ ನಡುವೆ ಅವರಿಗೆ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಾಡಿದ್ದರಿಂದ ನಿರ್ದೇಶಕನಾಗಿ ಮುಂದುವರೆಯೋದು ಕಷ್ಟಸಾಧ್ಯ ಎಂಬ ಸ್ಥಿತಿ ಬಂದೊದಗಿದೆ. ಆದ್ದರಿಂದಲೇ ಅನಿವಾರ್ಯವಾಗಿ ವೇದ್ ಗುರು ಜಾಗಕ್ಕೆ ಬೇರೆ ನಿರ್ದೇಶಕರನ್ನು ಕರೆತರಲು ಶಶಾಂಕ್ ನಿರ್ಧಾರ ಮಾಡಿದ್ದಾರಂತೆ.

ಹಾಗಾದರೆ ಈ ಚಿತ್ರದ ಸಾರಥ್ಯ ವಹಸಿಕೊಳ್ಳಲಿರುವ ಹೊಸಾ ನಿರ್ದೇಶಕರು ಯಾರು ಎಂಬ ಕುತೂಹಲ ಸಹಜವೇ. ಅಂದಹಾಗೆ ಶಶಾಂಕ್ ಅವರೊಂದಿಗೆ ಬಹುಕಾಲದಿಂದ ಇರುವ ಅವರ ತಂಡದ ಸದಸ್ಯರಲ್ಲೊಬ್ಬರು ವೇದ್ ಗುರು ಜಾಗಕ್ಕೆ ಬರಲಿದ್ದಾರಂತೆ. ಫೆಬ್ರವರಿಯಲ್ಲಿ ಎರಡನೇ ಹಂತದ ಚಿತ್ರೀಕರಣ ಶುರುವಾಗೋ ಹೊತ್ತಿಗೆಲ್ಲಾ ಹೊಸಾ ನಿರ್ದೇಶಕರ್‍ಯಾರೆಂಬ ವಿಚಾರ ಪಕ್ಕಾ ಆಗಲಿದೆ.

ತಾಯಿಗೆ ತಕ್ಕ ಮಗ ಚಿತ್ರ ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿದೆ. ಆಶಿತಾ ರಂಗನಾಥ್ ಮತ್ತು ಅಜೇಯ್ ರಾವ್ ಒಟ್ಟಾಗಿ ನಟಿಸುತ್ತಿರೋ ಈ ಚಿತ್ರದಲ್ಲಿ ಸುಮಲತಾ ಅಂಬರೀಶ್ ತಾಯಿಯಾಗಿ ಬಣ್ಣ ಹಚ್ಚಿದ್ದಾರೆ. ಈಗ್ಗೆ ದಶಕಗದ ಹಿಂದೆ ತೆರೆ ಕಂಡಿದ್ದ ಎಕ್ಸ್‌ಕ್ಯೂಸ್‌ಮೀ ಚಿತ್ರದಲ್ಲಿಯೂ ಸುಮಲತಾ ಅಜೇಯ್ ರಾವ್ ತಾಯಿಯಾಗಿ ಕಾಣಿಸಿಕೊಂಡಿದ್ದರು. ಆ ಚಿತ್ರ ಕೂಡಾ ಗೆದ್ದಿತ್ತು. ಇದೀಗ ತಾಯಿಗೆ ತಕ್ಕ ಮಗ ಚಿತ್ರದಲ್ಲಿಯೂ ಈ ಕಾಂಬಿನೇಷನ್ ವರ್ಕೌಟ್ ಆಗುತ್ತದೆ ಎಂಬ ಭರವಸೆ ಚಿತ್ರ ತಂಡದಲ್ಲಿದೆ!

Leave a Reply

Your email address will not be published. Required fields are marked *


CAPTCHA Image
Reload Image