ಶಂಕರ್ ನಾಗ್ ಅಭಿನಯದ ಹೊಸ ಜೀವನ, ಉಪ್ಪಿಯ ಗೌರಮ್ಮ, ಗಂಡ ಹೆಂಡತಿ, ದುಬಯ್ ಬಾಬು, ಇನಿಯ ಸೇರಿದಂತೆ ಕನ್ನಡ ಮತ್ತು ತೆಲುಗು ಸಿನಿಮಾಗಳನ್ನು ನಿರ್ಮಿಸಿ ಹೆಸರು ಮಾಡಿದವರು ನಿರ್ಮಾಪಕ ಶೈಲೇಂದ್ರ ಬಾಬು. ಚಿತ್ರ ನಿರ್ಮಾಣದಲ್ಲಿ ದೊಡ್ಡ ಗೆಲುವು ಗಳಿಸಿರುವ ಶೈಲೇಂದ್ರ ಬಾಬು ತಮ್ಮ ಮಗ ಸುಮಂತ್ ಶೈಲೇಂದ್ರನನ್ನು ‘ಆಟ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದರು. ನಂತರ ಸುಮಂತ್ ದಿಲ್ ವಾಲ, ತಿರುಪತಿ ಎಕ್ಸ್‌ಪ್ರೆಸ್, ಭಲೇ ಜೋಡಿ, ಲೀ ಮತ್ತು ತೆಲುಗಿನ ಬ್ರಾಂಡ್ ಬಾಬು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದಾರೆ; ಇನ್ನಷ್ಟು ಸಿನಿಮಾಗಳಲ್ಲಿ ನಟಿಸುವ ಇರಾದೆ ಹೊಂದಿದ್ದಾರೆ.
ತೀರಾ ಚಿಕ್ಕ ವಯಸ್ಸಿಗೇ ಹೀರೋ ಆಗಿ ಎಂಟ್ರಿ ಕೊಟ್ಟಿದ್ದ ಸುಮಂತ್ ಈಗ ಮದುವೆಯಾಗುತ್ತಿದ್ದಾರೆ. ಇದೇ ಡಿಸೆಂಬರ್ 12 ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡಿನಲ್ಲಿ ನಡೆಯುತ್ತಿರುವ ಅದ್ಧೂರಿ ಮದುವೆಯ ಮೂಲಕ ಸುಮಂತ್ ಅನಿತಾ ಜೊತೆಗೆ ಹೊಸ ಬಾಳಿಗೆ ಅಡಿಯಿರಿಸಲಿದ್ದಾರೆ.

ತನ್ನ ತಂದೆ ಚಿತ್ರರಂಗದಲ್ಲಿ ಪ್ರಖ್ಯಾತಿ ಗಳಿಸಿದ್ದರೂ ತಾನು ನಾಯಕನಾಗಿ ನೆಲೆ ನಿಲ್ಲಬೇಕೆಂಬ ಕಾರಣಕ್ಕೆ ಸುಮಂತ್ ಸಾಕಷ್ಟು ಶ್ರಮ ಪಟ್ಟ ಹುಡುಗ. ಮುಖಕ್ಕೆ ಬಣ್ಣ ಹಚ್ಚುವ ಮುಂಚೆಯೇ ಬಗೆಬಗೆಯಲ್ಲಿ ತಾಲೀಮು ನಡೆಸಿಕೊಂಡಿದ್ದವರು. ಸದ್ಯ ಮದುವೆಯ ಸಂಭ್ರಮದಲ್ಲಿರುವ ಸುಮಂತ್ ಸಿನಿಮಾರಂಗದಲ್ಲಿ ಮಾತ್ರವಲ್ಲ ದಾಂಪತ್ಯ ಜೀವನದಲ್ಲೂ ಖುಷಿಯಾಗಿ ಬಾಳುವಂತಾಗಲಿ…

#

LEAVE A REPLY

Please enter your comment!
Please enter your name here

1 × three =