ಜೇಕಬ್ ಸರ್ ತಮ್ಮ ಆಯ್ಕೆ ಮತ್ತು ಅದಕ್ಕೆ ಬೇಕಾದ ಪೂರ್ವಸಿದ್ಧತೆಗಳ ಬಗ್ಗೆ ಖಚಿತವಾಗಿರುತ್ತಾರೆ. ಅದು ನನಗೆ ಆರಂಭದಲೇ ಗೊತ್ತಾಯ್ತು. ಚಿತ್ರ ಒಪ್ಪಿಕೊಳ್ಳುವಾಗ ಇದು ಯಾವ ಜಾನರ್ ಸಿನಿಮಾನೋ ಹೇಗಿರುತ್ತದೆಯೋ ಎಂಬ ಸಾಕಷ್ಟು ಗೊಂದಲಗಳಿತ್ತು. ಆದರೆ ಚಿತ್ರೀಕರಣ ಶುರುವಾದ ಮೇಲೆ ಸ್ಪಷ್ಟವಾಯ್ತು, ಚಂಬಲ್ಗೆ ಒಂದು ಅತ್ಯುತ್ತಮ ಕನ್ನಡ ಸಿನಿಮಾವಾಗುವ ಎಲ್ಲಾ ಆರ್ಹತೆಗಳಿವೆ ಅಂತ.
ನಾನೊಬ್ಬ ಮೇಕಪ್ ಆರ್ಟಿಸ್ಟ್ ಮಗಳು. ಹಾಗಾಗಿ ಸಹಜವಾಗೇ ಅದರ ಬಗ್ಗೆ ಕೊಂಚ ಗಮನವಹಿಸಿ ಅಲಂಕರಿಸಿಕೊಳ್ಳುತ್ತೇನೆ. ಆದರೆ ಈ ಚಿತ್ರಕ್ಕೆ ಅಂಥ ಯಾವುದೇ ಸಾಧ್ಯತೆಗಳನ್ನ ಜೇಕಬ್ ಸರ್ ಕೊಡಲಿಲ್ಲ. ಸರಳವಾದ ಸಹಜವಾದ ಯುವತಿಯಾಗಿ ಕಾಣಿಸಿಕೊಂಡರೆ ಸಾಕು ಅಂದರು. ಅದರಂತೇ ಚಂಬಲ್ನಲ್ಲಿ ಅಭಿನಯಿಸಿದ್ದೇನೆ. ಥ್ರಿಲ್, ಎಮೋಷನಲ್ ಎಲ್ಲವೂ ಇದರಲ್ಲಿದೆ. ನೈಜ ಘಟನೆಯನ್ನಾಧರಿಸಿ ಈ ಚಿತ್ರ ಮಾಡಿದ್ದಾರೆ. ಚಿಕ್ಕ ಚಿಕ್ಕ ಪಾತ್ರಗಳಿಗೂ ಪ್ರಾಮುಖ್ಯತೆ ಇದೆ.
ಯಾವುದೇ ರೀತಿ ಪೂರ್ವಸಿದ್ಧತೆಗಳಿಲ್ಲದೆ ಕೊಟ್ಟ ಸನ್ನಿವೇಶಕ್ಕನುಗುಣವಾಗಿ ಅಭಿನಯಿಸಬೇಕು, ಅದು ಸಹಜವಾಗೇ ಮೂಡಿ ಬರಬೇಕು ಎನ್ನುವ ಕಾರಣಕ್ಕೆ ನಿರ್ದೇಶಕರು ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರಲಿಲ್ಲ. ಹಾಗಾಗಿ ಶೂಟಿಂಗ್ಗೆ ಅಂತ ಹೋದಾಗಲೂ ನನಗೆ ನನ್ನ ಪಾತ್ರ ಏನು ಅಂತ ಗೊತ್ತಿರಲಿಲ್ಲ! ಶಾಟ್ ತೆಗೆಯುವುದಕ್ಕೂ ಮುಂಚೆ ಆಗ ಎಷ್ಟು ಬೇಕೋ, ಏನು ಬೇಕೋ ಅದಷ್ಟನ್ನೇ ಹೇಳಿ ಶೂಟ್ ಮಾಡುತ್ತಿದ್ದರು. ಹಾಗಾಗಿ ಚಿತ್ರ ತುಂಬಾ ಸಹಜವಾಗಿ, ನೈಜತೆಗೆ ಹತ್ತಿರವಾಗಿ ಮೂಡಿ ಬಂದಿದೆ..
No Comment! Be the first one.