ಒಂದಾನೊಂದು ಕಾಲದಲ್ಲಿ ’ಇನ್‌ಕಾರ್’ (1988) ಚಿತ್ರದ ’ಮುಂಗ್ಡಾ’ ಹಾಡಿಗೆ ಕುಣಿದಿದ್ದರು ಹೆಲೆನ್. ಈ ಹಾಡಿನ ರೀಮಿಕ್ಸ್ ವರ್ಷನ್ ಇದೀಗ ’ಟೋಟಲ್ ಧಮಾಲ್’ ಸಿನಿಮಾಗೆ ಬಳಕೆಯಾಗಿದೆ. ರೀಮಿಕ್ಸ್‌ಗೆ ನಟಿ ಸೋನಾಕ್ಷಿ ಸಿನ್ಹಾ ಹೆಜ್ಜೆ ಹಾಕಿದ್ದಾರೆ. ಮೂಲ ಚಿತ್ರದಲ್ಲಿ ಲಾವಣಿ ಹಾಡಾಗಿದ್ದ ಇದು ಈಗ ಆಧುನಿಕ ಸಂಗೀತದೊಂದಿಗೆ ಪೆಪ್ಪಿ ಸಾಂಗ್ ಆಗಿದೆ. ಕಂಗೊಳಿಸುವ ಅದ್ಧೂರಿ ಸೆಟ್‌ನಲ್ಲಿ ಶ್ರೀಮಂತವಾಗಿ ಹಾಡನ್ನು ಚಿತ್ರಿಸಲಾಗಿದೆ. ನಟಿ ಸೋನಾಕ್ಷಿ ಸೆಕ್ಸೀ ಸ್ಟೆಪ್‌ಗಳಿದ್ದು, ನಾಯಕನಟ ಅಜಯ್ ದೇವಗನ್ ಕೂಡ ಇಲ್ಲಿ ಕಾಣಿಸಿಕೊಂಡಿದ್ದಾರೆ.
ಹಳೆಯ ಐಕಾನಿಕ್ ಹಾಡುಗಳನ್ನು ಹೊಸ ಪ್ಯಾಕೇಜ್‌ನೊಂದಿಗೆ ಈಗಿನ ಜನರೇಷನ್‌ಗೆ ದಾಟಿಸುವುದು ಖುಷಿಯ ಸಂಗತಿ. ನಟಿ ಹೆಲೆನ್ ಚಾರ್ಮ್ ಸರಿಗಟ್ಟುವುದು ಸಾಧ್ಯವೇ ಇಲ್ಲ. ಹಾಗಾಗಿ ಹೆಲೆನ್ ಆಂಟಿಗೆ ಹೋಲಿಸುವುದು ಮೂರ್ಖತನ. ಹಾಡನ್ನು ಹೊಸ ರೀತಿಯಲ್ಲೇ ಪ್ರಸೆಂಟ್ ಮಾಡಿದ್ದೇವೆ ಎನ್ನುತ್ತಾರೆ ಸೋನಾಕ್ಷಿ ಸಿನ್ಹಾ. ’ಧಮಾಲ್’ ಸರಣಿಯ ಮೂರನೆಯ ಸಿನಿಮಾ ’ಟೋಟಲ್ ಧಮಾಲ್’. ಅನಿಲ್ ಕಪೂರ್, ಅಜಯ್ ದೇವಗನ್, ಮಾಧುರಿ ದೀಕ್ಷಿತ್, ರಿತೇಶ್ ದೇಶ್‌ಮುಖ್, ಆರ್ಷದ್ ವಾರ್ಸಿ, ಜಾವೇದ್ ಜಾಫ್ರಿ ಪ್ರಮುಖ ತಾರಾಬಳಗದಲ್ಲಿದ್ದಾರೆ. ಫೆಬ್ರವರಿ ೨೨ರಂದು ಸಿನಿಮಾ ತೆರೆಕಾಣಲಿದೆ.
#