ಪಿಗ್ಗಿ ಮೇಲೆ ಕಂಗನಾ ಕೋಪಗೊಂಡಿದ್ದೇಕೆ?

Picture of Cinibuzz

Cinibuzz

Bureau Report

ಇಂಗ್ಲಿಷ್ ಧಾರಾವಾಹಿಯೊಂದರಲ್ಲಿ ನಟಿಸುತ್ತಲೇ ವಿಶ್ವಾಧ್ಯಂತ ಖ್ಯಾತಳಾದ ಪ್ರಿಯಾಂಕಾ ಛೋಪ್ರಾ ಬಾಲಿವುಡ್ ಅನ್ನು ಮರೆತೇ ಬಿಟ್ಟಂತಿದ್ದಳು. ವರ್ಷಾಂತರಗಳ ಕಾಲ ವಿದೇಶದಲ್ಲಿಯೇ ಇದ್ದ ಪಿಗ್ಗಿ ತನ್ನ ಹುಡುಗ ನಿಕ್‌ನೊಂದಿಗೇ ಮರಳಿದ್ದಾಳೆ. ಈಕೆ ಹೋದಲ್ಲಿ ಬಂದಲ್ಲಿ ಮಾಧ್ಯಮಗಳು ನಾಕಾಬಂಧಿ ಹಾಕುತ್ತಲೇ ಏಕಾಏಕಿ ಎಂಗೇಜ್‌ಮೆಂಟ್ ಮಾಡಿಕೊಳ್ಳೋ ಮೂಲಕ ಪಿಗ್ಗಿ ಎಲ್ಲರಿಗೂ ಶಾಕ್ ನೀಡಿದ್ದಾಳೆ.
ಆದರೆ, ಪ್ರಿಯಾಂಕಾ ಛೋಪ್ರಾ ಎಂಗೇಜ್ ಮೆಂಟ್ ಮಾಡಿಕೊಂಡಿರೋ ಸುದ್ದಿ ಮಾಧ್ಯಮಗಳಿಂದಷ್ಟೇ ತಿಳಿದುಕೊಂಡಿರೋ ಆಕೆಯ ಬಹುಕಾಲದ ಗೆಳತಿ ಕಂಗನಾ ರನೌತ್ ಎಲ್ಲರಿಗಿಂತಲೂ ಹೆಚ್ಚು ಶಾಕ್ ಆಗಿದ್ದಾಳೆ!
ಕಂಗನಾ ರನೌತ್ ಸ್ವತಃ ಹೇಳಿಕೊಂಡಿರೋ ಪ್ರಕಾರವಾಗಿ ಹೇಳೋದಾದರೆ ಪ್ರಿಯಾಂಕಾ ಛೋಪ್ರಾ ಎಂಗೇಜ್‌ಮೆಂಟ್ ಮಾಡಿಕೊಂಡಿರೋ ವಿಚಾರ ಆರಂಭದಲ್ಲಿ ಗೊತ್ತೇ ಇರಲಿಲ್ಲ. ದಶಕಗಳಿಂದೀಚೆಗೆ ಗೆಳತಿಯಾಗಿರೋ ಕಂಗನಾಗೆ ಪಿಗ್ಗಿ ಎಂಗೇಜ್ ಮೆಂಟ್ ಬಗ್ಗೆ ಒಂದು ಮಾತನ್ನೂ ಹೇಳಿಲ್ಲವಂತೆ!
ಅತ್ತ ಪ್ರಿಯಾಂಕಾ ಎಂಗೇಜ್‌ಮೆಂಟ್ ಹತ್ತಿರ ಬರುತ್ತಲೇ ಒಂದು ಕಾರ್ಯಕ್ರಮದಲ್ಲಿ ಆ ಬಗ್ಗೆ ಕಂಗನಾಗೆ ಪ್ರಶ್ನೆ ಎದುರಾಗಿತ್ತಂತೆ. ಆಗಷ್ಟೇ ಈ ಎಂಗೇಜ್‌ಮೆಂಟ್ ವಿಚಾರ ತಿಳಿದುಕೊಂಡ ಕಂಗನಾ ಶಾಕ್ ಆಗಿದ್ದಾಳೆ. ಆದರೆ ಕಡೇ ಕ್ಷಣದಲ್ಲಾದರೂ ಪಿಗ್ಗಿ ತನ್ನನ್ನು ಆಹ್ವಾನಿಸ ಬಹುದು ಅಂದುಕೊಂಡಿದ್ದ ಕಂಗನಾಗೆ ಕಡೆಗೂ ನಿರಾಸೆಯೇ ಗಟ್ಟಿಯಾಗಿತ್ತು. ಆದ್ದರಿಂದಲೇ ತನ್ನನ್ನು ಪಿಗ್ಗಿ ಎಂಗೇಜ್‌ಮೆಂಟಿಗೆ ಕರೆಯದಿರೋದರಿಂದ ಅಪ್‌ಸೆಟ್ ಆಗಿರೋದಾಗಿ ಕಂಗನಾ ಹೇಳಿಕೊಂಡಿದ್ದಾಳೆ.
೨೦೦೮ರಲ್ಲಿ ತೆರೆ ಕಂಡಿದ್ದ ಫ್ಯಾಷನ್ ಚಿತ್ರದಲ್ಲಿ ಪ್ರಿಯಾಂಕಾ ಛೋಪ್ರಾ ಮತ್ತು ಕಂಗನಾ ಒಟ್ಟಾಗಿ ನಟಿಸಿದ್ದರು. ಅಲ್ಲಿಂದಲೇ ಇವರಿಬ್ಬರ ನಡುವೆ ಗಾಢವಾದ ಸ್ನೇಹ ಹಬ್ಬಿಕೊಂಡಿತ್ತು. ಆ ನಂತರದಲ್ಲಿ ಬಾಲಿವುಡ್‌ನ ತುಂಬಾ ಇವರಿಬ್ಬರು ಗೆಳತಿಯರಾಗಿ ಬಿಂಬಿಸಿಕೊಂಡಿದ್ದರು. ಆದರೆ, ಇಂಥಾ ಗೆಳತಿಗೇ ಹೇಳದೆ ಪಿಗ್ಗಿ ಎಂಗೇಜ್ ಮೆಂಟ್ ಮುಗಿಸಿಕೊಂಡು ಮದುವೆಗೂ ತಯಾರಾಗಿದ್ದಾಳೆ!

ಇನ್ನಷ್ಟು ಓದಿರಿ

Scroll to Top