ಕಲೈ ಮಾಸ್ಟರ್ ಕಲ್ಯಾಣ!

Picture of Cinibuzz

Cinibuzz

Bureau Report

ಕನ್ನಡದ ಚಿತ್ರಪ್ರೇಕ್ಷಕರಿಗೆ ನೃತ್ಯ ನಿರ್ದೇಶಕ ಕಲೈ ಮಾಸ್ಟರ್ ಹೆಸರು ಚಿರಪರಿಚಿತ. ಕನ್ನಡದ ಬಹುತೇಕ ಸ್ಟಾರ್‌ಗಳ ಸಾಕಷ್ಟು ಚಿತ್ರಗಳಿಗೆ ಎವರ್‌ಗ್ರೀನ್ ಅನ್ನಿಸುವಂಥಾ ನೃತ್ಯ ಸಂಯೋಜನೆ ಮಾಡಿರುವ ಅವರೀಗ ವೈವಾಹಿಕ ಜೀವನಕ್ಕೆ ಅಡಿಯಿಸುತ್ತಿದ್ದಾರೆ.

ಇದೇ ತಿಂಗಳ ೨೮-೨೯ರಂದು ಕಲೈ ಮಾಸ್ಟರ್ ವಿವಾಹ ಸಮಾರಂಭ ನೆರವೇರಲಿದೆ. ಕಲೈ ಮಾಸ್ಟರ್ ದಶಕಗಳಿಂದೀಚೆಗೆ ಕನ್ನಡ ಚಿತ್ರ ರಂಗದ ಭಾಗವಾಗಿದ್ದಾರೆ. ಇದುವರೆಗೂ ನೂರಾರು ಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ.

ಪ್ರತೀ ಚಿತ್ರಗಳಲ್ಲಿಯೂ ಹೊಸತನಕ್ಕೆ ತುಡಿಯುವ ಮನಸ್ಥಿತಿಯಿಂದಲೇ ಗಮನ ಸೆಳೆದಿರುವ ಕಲೈ ಮಾಸ್ಟರ್ ಪ್ರತಿಭಾವಂತ ನೃತ್ಯ ಪಟುಗಳನ್ನು ಚಿತ್ರರಂಗಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ. ಈಗಂತೂ ನೃತ್ಯ ನಿರ್ದೇಶಕರಾಗಿ ಸಿಕ್ಕಾಪಟ್ಟೆ ಬ್ಯುಸಿಯಿರುವ ಕಲೈ ಮಾಸ್ಟರ್ ತಮಿಳು ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದ್ದಾರೆ. ಸಮುದ್ರಖಣಿ ನಿರ್ದೇಶನದ ಹೊಸ ಚಿತ್ರವೊಂದಕ್ಕೆ ಇವರು ಕೊರಿಯೋಗ್ರಾಫರ್. ಇವರ ವೈವಾಹಿಕ ಜೀವನ ಸುಖಕರವಾಗಿರಲೆಂದು ಹಾರೈಸೋಣ.

https://cinibuzz.in/kalai/

#

ಇನ್ನಷ್ಟು ಓದಿರಿ

Scroll to Top