ಹರಿಪ್ರಿಯಚರಿತೆ!

Picture of Cinibuzz

Cinibuzz

Bureau Report

ದಿನಕರ್ ನಿರ್ದೇಶನದ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ಪ್ರಧಾನ ಆಕರ್ಷಣೆಗಳಲ್ಲಿ ಮುಖ್ಯವಾಗಿರೋದು ನಾಯಕಿ ಹರಿಪ್ರಿಯಾ. ನೀರ್‌ದೋಸೆಯಂಥಾ ಚಿತ್ರದಲ್ಲಿ ಬಿಂದಾಸ್ ಆಗಿ ನಟಿಸಿದ್ದ ಹರಿಪ್ರಿಯಾರದ್ದು ಪಾತ್ರಕ್ಕಾಗಿ ಒಗ್ಗಿಕೊಳ್ಳೋ ಜಾಯಮಾನ. ಆ ಕಾರಣದಿಂದಲೇ ನೀರ್‌ದೋಸೆಯಲ್ಲಿ ಬಿಡುಬೀಸಾಗಿ ಸಿಗರೇಟು ಸೇದೋ ಸೀನುಗಳಲ್ಲಿ ಕಾಣಿಸಿಕೊಂಡಿದ್ದರು. ಈಕೆ ಇದೀಗ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರಕ್ಕಾಗಿ ಬಿಯರ್ ಗುಟುಕರಿಸಿರೋ ವಿಚಾರ ಅವರ ಕಡೆಯಿಂದಲೇ ಹೊರ ಬಿದ್ದಿದೆ!

ಅಷ್ಟಕ್ಕೂ ಹರಿಪ್ರಿಯಾ ನಿರ್ದೇಶಕ ದಿನಕರ್ ಅವರ ಗಮನ ಸೆಳೆದಿದ್ದೇ ನೀರ್ ದೋಸೆ ಚಿತ್ರದ ಮೂಲಕ. ಅದರಲ್ಲಿನ ಅಭಿನಯ ನೋಡಿಯೇ ಹರಿಪ್ರಿಯಾ ಜೊತೆಗೊಂದು ಸಿನಿಮನಾ ಮಾಡೋ ಆಲೋಚನೆ ಮಾಡಿದ್ದರಂತೆ. ಅದು ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ಮೂಲಕ ಕೈಗೂಡುವಂತಾಗಿದ್ದು ಕಥೆಯ ಕಾರಣದಿಂದ!

ದಿನಕರ್ ಅವರ ಮಡದಿ ಮಾನಸಾ ಈ ಕಥೆಯನ್ನು ಹರಿಪ್ರಿಯಾ ಅವರಿಗೆ ಮನ ಮುಟ್ಟುವಂತೆ ವಿವರಿಸಿದ್ದರಂತೆ. ಈ ಚಿತ್ರಕ್ಕೆ ಕಥೆ ಬರೆದಿರೋ ಮಾನಸಾ ಪ್ರತೀ ಕ್ಯಾರೆಕ್ಟರುಗಳ ಹಾವಭಾವ, ವರ್ತನೆ, ಅವು ಆಲೋಚಿಸುವ ರೀತಿಯ ಬಗ್ಗೆಯೂ ಸವಿಸ್ತಾರವಾಗಿ ನೋಟ್ ಮಾಡಿಕೊಂಡಿದ್ದರಲ್ಲಾ? ಅದರ ಮೂಲಕ ತಮ್ಮ ಪಾತ್ರದ ಬಗ್ಗೆ ತಿಳಿದುಕೊಂಡ ಹರಿಪ್ರಿಯಾ ತಕ್ಷಣವೇ ಒಪ್ಪಿಗೆ ಸೂಚಿಸಿದ್ದರಂತೆ!

ಇಂಥಾ ಪಾತ್ರ ಎಣ್ಣೆ ಹೊಡೆಯೋ ಸೀನೂ ಕೂಡಾ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದಲ್ಲಿದೆಯಂತೆ. ಒಂದು ಮೂಲದ ಪ್ರಕಾರ ಹರಿಪ್ರಿಯಾ ಆ ಸೀನಿನಲ್ಲಿ ಮೈಚಳಿ ಬಿಟ್ಟು ನಟಿಸಿದ್ದಾರೆ. ಆ ಬಗ್ಗೆ ಒಂದು ಪಾತ್ರಕ್ಕೆ ಸಂಪೂರ್ಣವಾಗಿ ತನ್ನನ್ನು ಸಮರ್ಪಿಸಿಕೊಂಡ ಖುಷಿ ಹರಿಪ್ರಿಯಾರದ್ದು. ಈ ಚಿತ್ರದಲ್ಲಿ ರಶ್ಮಿ ಎಂಬ ಪಾತ್ರದಲ್ಲಿ ನಟಿಸಿರೋ ಹರಿಪ್ರಿಯಾ ಆ ಪಾತ್ರ ತನ್ನ ವೃತ್ತಿ ಜೀವನಕ್ಕೆ ಬೇರೆಯದ್ದೇ ಬಗೆಯಲ್ಲಿ ಹೊಸಾ ದಿಕ್ಕು ತೋರಲಿರೋ ಭರವಸೆಯನ್ನೂ ಹೊಂದಿದ್ದಾರೆ!

#

ಇನ್ನಷ್ಟು ಓದಿರಿ

Scroll to Top