ಮಕ್ಕುಗಿದರು ಚಾರ್ಲಿ ಸಂಗೀತಾ!

Picture of Cinibuzz

Cinibuzz

Bureau Report

ಕಳೆದೆರಡು ವರ್ಷಗಳಿಂದ ಯೂ ಟ್ಯೂಬ್‌ ಮೀಡಿಯಾ ಅಬ್ಬರಿಸುತ್ತಿದೆ. ಉತ್ತಮ ಕಂಟೆಂಟ್‌ ಕೊಡುತ್ತಿರುವವರು ನಿಜಕ್ಕೂ ಗೆಲುವು ಸಾಧಿಸಿದ್ದಾರೆ. ಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ ಅನ್ನೋದನ್ನು ಹಲವು ಯೂಟ್ಯೂಬರುಗಳು ತೋರಿಸಿದ್ದಾರೆ. ಆದರೆ ಇದೇ ಯೂ ಟ್ಯೂಬ್‌ ಹೆಸರಲ್ಲಿ ಹೆಸರು-ಹಣ ಮಾಡಲು ನಿಂತವರೂ ಸಾಕಷ್ಟು ಜನರಿದ್ದಾರೆ. ಹುಟ್ಟು ಸೋಂಬೇರಿಗಳಿಗೆ ಯೂ ಟ್ಯೂಬ್‌ ಒಂದು ನೆಪವಾಗಿದೆ. ನೂರಿನ್ನೂರು ಸಬ್‌ಸ್ಕ್ರೈಬರ್‌ಗಳೂ ಇಲ್ಲದ, ಬೆರಳೆಣಿಕೆಯ ವ್ಯೂಸ್‌ ಹೊಂದಿರುವ ಚಾನೆಲ್ಲುಗಳನ್ನು ತೆರೆದ ʻಸ್ವಯಂ ಘೋಷಿತ ಜರ್ನಲಿಸ್ಟುʼಗಳ ಸಂಖ್ಯೆ ಜಾಸ್ತಿಯಾಗಿದೆ.

ಸಿನಿಮಾ ವಲಯದಲ್ಲಿ ಸುಶಾಂತ್‌ ಎನ್ನುವ ಹೇತ್ಲಾಂಡಿಯ ಕಾಟ ಮಿತಿಮೀರಿಹೋಗಿದೆ. ಎಲ್ಲೆಂದರಲ್ಲಿ ನುಗ್ಗಿ ʻನಾನು ಜರ್ನಲಿಸ್ಟ್‌ʼ ಅಂತಾ ಪರಿಚಯ ಮಾಡಿಕೊಂಡು, ತಲೆ ಹರಟೆ ಶುರು ಮಾಡುವ ಈ ತಿಗಣೆ ಮುಖದವನು ಸಿನಿಮಾ ಸೆಲೆಬ್ರಿಟಿಗಳನ್ನು ಅಕ್ಷರಶಃ ಕಾಡುತ್ತಿದ್ದಾನೆ. ಇಂಟರ್ವ್ಯೂ ನೆಪದಲ್ಲಿ ಅಸಹ್ಯ ಪ್ರಶ್ನೆಗಳನ್ನು ಕೇಳುವುದು, ತಾರೆಯರ ಸೋಷಿಯಲ್‌ ಮೀಡಿಯಾ ಪೇಜುಗಳಲ್ಲಿ ಕೆಟ್ಟಾಕೊಳಕು ಕಮೆಂಟ್‌ ಮಾಡೋದು ಇವನ ಫುಲ್‌ ಟೈಮ್ ಕಾಯಕ. ಬಿಗ್‌ ಬಾಸ್‌ ಎನ್ನುವ ಶೋನಲ್ಲಿ ಅವಕಾಶ ಪಡೆಯಬೇಕು ಅನ್ನೋದು ಇವನ ಗುರಿಯಂತೆ. ಈ ಕಾರಣಕ್ಕೇ ಮೀಡಿಯಾದವರ ನಡುವೆ ಬಂದು ಆಗಾಗ ನ್ಯೂಸೆನ್ಸ್‌ ಕ್ರಿಯೇಟ್‌ ಮಾಡುವ ಚಾಳಿ ಇವನದ್ದು.

ಪತ್ರಿಕಾ ಗೋಷ್ಟಿಗಳಿಗಾಗಲಿ, ಸಂದರ್ಶನಗಳಿಗಾಗಲಿ ಇವನನ್ನು ಯಾರೂ ಆಹ್ವಾನಿಸಿರೋದಿಲ್ಲ. ಹೇಗೋ ವಿಚಾರ ತಿಳಿದುಕೊಂಡು ನುಗ್ಗುತ್ತಾನೆ.  ಹಸಿದು ಬರುವ ಬೀದಿ ನಾಯಿಗೆ ಎರಡು ಸಲ ಹಚಾ ಅಂತಾ ಓಡಿಸಿದರೆ ಮತ್ತೆ ಆ ಕಡೆ ಅದು ತಿರುಗಿ ನೋಡೋದಿಲ್ಲ. ಆದರೆ ಈ ಸುಶಾಂತನ ಮುಖಕ್ಕೆ ಕ್ಯಾಕರಿಸಿ ಉಗಿದರೂ ಮತ್ತೆ ಮತ್ತೆ ಬಂದು ನಿಲ್ಲುತ್ತಾನೆ. ಸಿನಿಮಾ ಪಿ.ಆರ್.ಓ.ಗಳಿಗಂತೂ ಇವನು ಕೊಡುವ ಕಾಟ ಸಹಿಸೋದು ಅಸಾಧ್ಯವಾಗಿದೆ. ಹುಚ್ಚ ವೆಂಕ್ಟನ ತಮ್ಮನಂತೆ ಆಡುವ ಈ ಮೆಂಟ್ಲು ಗಿರಾಕಿ ಚಾರ್ಲಿ ಹೀರೋಯಿನ್‌ ಸಂಗೀತಾ ಶೃಂಗೇರಿಯ ಪೋಸ್ಟ್‌ ವೊಂದಕ್ಕೆ ಕೆಟ್ಟದಾಗಿ ಕಮೆಂಟು ಮಾಡಿದ್ದ. ಲಿಫ್ಟ್‌ ನಲ್ಲಿ ಎದುರು ಸಿಕ್ಕ ಈ ತಿಗಣೆ ಮುಖಕ್ಕೆ ಸಂಗೀತಾ ಮೆಟ್ಟಲ್ಲಿ ಬಡಿಯೋದೊಂದು ಬಾಕಿಯಿತ್ತು. ಆ ಮಟ್ಟಕ್ಕೆ ಜ್ವರ ಬಿಡಿಸಿದ್ದರು. ಈಗ ಸುಶಾಂತ ಮತ್ತೊಂದು ತರಲೆ ಮಾಡಿಕೊಂಡಿದ್ದಾನೆ. ಪೆಂಟಗನ್‌ ಚಿತ್ರದ ನಟಿ ತನಿಷಾ ಕುಪ್ಪಂಡ ಮುಂದೆ ಕುಂತು ʻನೀವು ಬ್ಲೂ ಫಿಲಂ ಮಾಡಲು ರೆಡಿನಾʼ ಅಂತಾ ಕೇಳಿಬಿಟ್ಟಿದ್ದಾನೆ. ಬೋಲ್ಡ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಅಂದ ಮಾತ್ರಕ್ಕೆ ಒಬ್ಬ ಹೆಣ್ಣುಮಗಳನ್ನು ಹೀಗೆ ಪ್ರಶ್ನಿಸೋದು ತಪ್ಪಲ್ಲವಾ? ನಿರ್ದೇಶಕ ರಾಘು ಶಿವಮೊಗ್ಗ ಮತ್ತು ಪೆಂಟಗನ್‌ ಚಿತ್ರತಂಡದವರು ಸೈಕೋ ಸುಶಾಂತನ ವಿರುದ್ದ ದೂರು ದಾಖಲಿಸಿದ್ದಾರೆ.

ಸರಿಯಾಗಿ ನೂರು ಸಬ್‌ಸ್ಕ್ರೈಬರ್‌ಗಳಿಲ್ಲದ ಇವನನ್ನು ಕಿಚ್ಚ ಸುದೀಪ್‌ ತನಕ ಅದ್ಯಾವ ಪುಣ್ಯಾತ್ಮ ಬಿಟ್ಟನೋ ಗೊತ್ತಿಲ್ಲ. ʻವಿಕ್ರಾಂತ್‌ ರೋಣʼ ಸಂದರ್ಭದಲ್ಲಿ ಈತ ಸುದೀಪ್‌ ಸಂದರ್ಶನ ಮಾಡಿದ್ದ. ಅದರಿಂದ ಸುಶಾಂತನಿಗೆ ಎರಡು ಸಾವಿರ ಸಬ್‌ಸ್ಕ್ರೈಬರುಗಳು ಸಿಕ್ಕಿದ್ದು ಬಿಟ್ಟರೆ ʻವಿಕ್ರಾಂತ್‌ ರೋಣʼಗಾಗಲಿ, ಸುದೀಪ್‌ ಅವರಿಗಾಗಲಿ ಏನೂ ಗಿಟ್ಟಲಿಲ್ಲ!

ಸಿನಿಮಾ ಪಿ.ಆರ್.ಓ.ಗಳು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಏನೇನೂ ವ್ಯೂಸ್‌ ಇಲ್ಲದ ಪೋರ್ಟಲ್‌, ಯೂಟ್ಯೂಬಿನವರನ್ನು ಒಳಗೆ ಬಿಟ್ಟುಕೊಂಡರೆ, ಸುಶಾಂತನಂತಾ ಇನ್ನೂ ಸಾಕಷ್ಟು ಯಬಡಾ ತಬುಡಾಗಳು ಸೃಷ್ಟಿಸುವ ಸಮಸ್ಯೆಗಳಿಗೆ ತಲೆ ಕೊಡಬೇಕಾಗುತ್ತದೆ. ಪ್ರಚಾರಕರ್ತರ ಸಂಘದ ಅಧ್ಯಕ್ಷರು ಈ ಬಗ್ಗೆ ಗಮನಹರಿಸಬೇಕಿದೆ.

ಕೈಲಿ ಮೊಬೈಲು, ಕ್ಯಾಮೆರಾ ಹಿಡಿದವರೆಲ್ಲಾ ಜರ್ನಲಿಸ್ಟು, ರಿಪೋರ್ಟರುಗಳಾಗಲು ಸಾಧ್ಯವಿಲ್ಲ. ಸಿನಿಮಾದವರು ಇನ್ನಾದರೂ ನಕಲಿ ಜರ್ನಲಿಸ್ಟ್‌ಗಳ ಬಗ್ಗೆ ಎಚ್ಚರದಿಂದಿರಲಿ!

ಇನ್ನಷ್ಟು ಓದಿರಿ

Scroll to Top