ಗುಹೆಯೊಳಗಿಂದ ಕೇಳಿಸಿತು ಸಿಂಹದ ಸಾಂಗು!

Picture of Cinibuzz

Cinibuzz

Bureau Report

ಈ ಹಿಂದೆ ಸಮರ್ಥ, ತಾಜಾ ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದ ಎಸ್‌ಜಿಆರ್ ಅವರ ನಿರ್ದೇಶನದ ೩ನೇ ಚಿತ್ರ ಸಿಂಹಗುಹೆ. ರವಿ ಶಿರೂರು, ನಿವಿಶ್ಕಾ ಪಾಟೀಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದ ಹಾಡುಗಳಿಗೆ ಇತ್ತೀಚೆಗೆ ನಟ ಅನಿರುದ್ದ ಅವರು ಚಾಲನೆ ನೀಡಿದರು. ಎಸಿ ಮಹೇಂದರ್ ಅವರ ಛಾಯಾಗ್ರಹಣ, ಸತೀಶ್ ಆರ್ಯನ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ, ಈ ಸಂದರ್ಭದಲ್ಲಿ ನಿರ್ದೇಶಕ ಎಸ್‌ಜಿಆರ್ ಮಾತನಾಡುತ್ತ ಇದೊಂದು ಸಸ್ಪೆನ್ಸ್, ಕ್ರೈಂ, ಮರ್ಡರ್ ಮಿಸ್ಟ್ರಿ ಇರುವ ಚಿತ್ರವಾಗಿದ್ದು. ಜಾಗರಹಳ್ಳಿ ಎಂಬ ಊರಲ್ಲಿ ಮನೆಯೊಂದರ ಮುಂದೆ ಬಹುತೇಕ ಚಿತ್ರದ ಕಥೆ ನಡೆಯುತ್ತದೆ.


ಸಿಂಹಗುಹೆ ಎನ್ನುವುದು ಆ ಮನೆಯ ಹೆಸರು, ನಾಯಕ ಕೂಡ ವಿಷ್ಣು ಅಭಿಮಾನಿ. ಹಾಸನ, ಸಕಲೇಶಪುರ, ಮೂಡಿಗೆರೆ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಿದ್ದೇವೆ, ನನ್ನ ಹಿಂದಿನ ಚಿತ್ರಗಳಿಗೆ ಕೆಲಸಮಾಡಿದ ಮಹೇಂದರ್ ಅವರೇ ಈ ಚಿತ್ರಕ್ಕೂ ಸಿನಿಮಾಟೋಗ್ರಫಿ ಮಾಡಿದ್ದಾರೆ, ಚಿತ್ರವೀಗ ಬಿಡುಗಡೆಗೆ ರೆಡಿ ಇದ್ದು, ಮೇ ಎಂಡ್ ಅಥವಾ ಜುಲೈ ಮೊದಲವಾರ ರಿಲೀಸ್ ಮಾಡುವ ಯೋಜನೆಯಿದೆ ಎಂದು ಹೇಳಿದರು. ಚಿತ್ರದ ನಾಯಕ ರವಿ ಶಿರೂರ್ ಮಾತನಾಡಿ ಇದೊಂದು ಚಿಕ್ಕ ಪ್ರಯತ್ನ, ಅಭಿನಯದೊಂದಿಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದೇನೆ. ಹಳ್ಳಿಯಲ್ಲಿ ಟ್ಯಾಂಕರ್ ಓಡಿಸಿಕೊಂಡಿರುವ ಹುಡುಗನ ಪಾತ್ರ ನನ್ನದು. ಆ ಹಳ್ಳಿಯಲ್ಲಿ ಒಂದು ಮರ್ಡರ್ ನಡೆದಾಗ ಅದು ಈ ಹುಡುಗನನ್ನು ಹೇಗೆ ಎಲ್ಲೆಲ್ಲಿಗೆ ಕರೆದುಕೊಂಡು ಹೋಯಿತು ಎಂಬುದನ್ನು ಚಿತ್ರದ ಮೂಲಕ ಹೇಳಿದ್ದೇವೆ ಎಂದು ವಿವರಿಸಿದರು, ನಾಯಕಿ ನಿವಿಶ್ಕಾ ಪಾಟೀಲ್ ಮಾತನಾಡುತ್ತ ಇದೇ ನನ್ನ ಮೊದಲ ಚಿತ್ರ, ಇದರ ನಂತರ ನಾಲ್ಕು ಸಿನಿಮಾ ಆಯಿತು, ಹಾಗಾಗಿ ನನಗೆ ಈ ಚಿತ್ರ ತುಂಬಾ ಪ್ರಾಮುಖ್ಯ, ಸೀರಿಯಲ್‌ನಲ್ಲಿ ಅಭಿನಯಿಸುತ್ತಿದ್ದ ನನಗೆ ರವಿ ಸರ್ ಕರೆದು ಅವಕಾಶ ನೀಡಿದರು ಎಂದು ಹೇಳಿದರು, ಮತ್ತೊಬ್ಬ ನಾಯಕಿ ಅನುರಾಧಾ ಮಾತನಾಡಿ ನಾನೊಬ್ಬ ಡ್ಯಾನ್ಸರ್. ಒಂದಷ್ಟು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನೂ ಮಾಡಿದ್ದೇನೆ, ಇದರಲ್ಲಿ ಸೆಕೆಂಡ್ ಲೀಡ್ ಆಗಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು, ಸಂಗೀತ ನಿರ್ದೇಶಕ ಸತೀಶ್ ಆರ್ಯನ್ ಮಾತನಾಡಿ ಈ ಸಿನಿಮಾ ಪ್ರಾರಂಭವಾದಾಗ ನಾನಿರಲಿಲ್ಲ, ಮ್ಯೂಸಿಕ್ ಮಾಡಿಕೊಡಿ ಅಂತ ನಿರ್ದೇಶಕರು ನನ್ನ ಬಳಿ ಬಂದರು, ಮೊದಲು ೩ ಹಾಡು ಅಂತಿತ್ತು, ನಂತರ ಅದು ೪ ಆಯ್ತು. ನಾನೂ ಸಹ ೨ ಹಾಡುಗಳನ್ನು ಹಾಡಿದ್ದೇನೆ ಎಂದರು. ಸಾಹಿತಿ ಶಿವನಂಜೇಗೌಡ ಮಾತನಾಡಿ ಚಿತ್ರದಲ್ಲಿ ನಾನು ಭೂಮಿ ತಿರುಗುವುದು ಎಂಬ ಹಾಡನ್ನು ಬರೆದಿದ್ದೇನೆ ಎಂದರು, ಮುಖ್ಯ ಅತಿಥಿಯಾಗಿದ್ದ ಅನಿರುದ್ದ ಮಾತನಾಡಿ ಹೊಸ ತಂಡಕ್ಕೆ ಪ್ರೋತ್ಸಾಹ ನೀಡಲು ನಾನಿಲ್ಲಿ ಬಂದಿದ್ದೇನೆ, ಇವರ ಕೆಲಸ ನನಗೆ ಬಹಳ ಇಷ್ಟವಾಯ್ತು, ಹಾಡು ಚೆನ್ನಾಗಿ ಮೂಡಿಬಂದಿದೆ ಎಂದರು.

ಇನ್ನಷ್ಟು ಓದಿರಿ

Scroll to Top