ಎಲೆಕ್ಷನ್ ರಿಸಲ್ಟ್ ಗೂ ಮೊದ್ಲೇ ರಿಷಿ ಸಿನಿಮಾ ರಿಸಲ್ಟ್!

Picture of Cinibuzz

Cinibuzz

Bureau Report

ತಮ್ಮ ಕಾಮಿಡಿ ಟೈಮಿಂಗ್ನಿಂದಲೇ ಹೆಸರಾದ ಪ್ರತಿಭಾನ್ವಿತ ನಟ ರಿಷಿ. ಹಾಗಂತ ಅವರು ಬರೀ ಕಾಮಿಡಿಯನ್ನಷ್ಟೇ ಮಾಡುವುದಿಲ್ಲ. ‘ಕವಲುದಾರಿ’ಯಂತಹ ಗಂಭೀರ ಸಿನಿಮಾದಲ್ಲೂ ಮನಮುಟ್ಟುವಂತೆ ನಟಿಸಿದ್ದಾರೆ. ಅಂದಹಾಗೆ, ರಿಷಿ ಈಗ ‘ರಾಮನ ಅವತಾರದಲ್ಲಿ ದರ್ಶನ ಕೊಡೋದಿಕ್ಕೆ ಮುಹೂರ್ತ ಫಿಕ್ಸ್ ಆಗಿದೆ.

ರಿಷಿ ನಟನೆಯ ರಾಮನ ಅವತಾರ ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಮೇ 10ಕ್ಕೆ ಚಿತ್ರ ರಾಜ್ಯಾದ್ಯಂತ ತೆರೆ ಕಾಣಲಿದೆ. ಏಪ್ರಿಲ್ ತಿಂಗಳಲ್ಲಿ ಸಿನಿಮಾವನ್ನು ಬೆಳ್ಳಿಭೂಮಿ ಅಖಾಡಕ್ಕೆ ಇಳಿಸೋದಿಕ್ಕೆ ಚಿತ್ರತಂಡ ಪ್ಲಾನ್ ಹಾಕಿಕೊಂಡಿತ್ತು. ಆದ್ರೆ ಲೋಕಸಭಾ ಚುನಾವಣೆ ಹಿನ್ನೆಲೆ ಚಿತ್ರ ಬಿಡುಗಡೆ ತಡವಾಗಿದೆ. ಎಲೆಕ್ಷನ್ ಮುಗಿದ ತಕ್ಷಣ ಮೇಬಿ ಅಲ್ಲ ಪಕ್ಕ ಮೇಗೆ ಬರ್ತಿವೆ ಅಂತಾ ರಿಷಿ ಘೋಷಿಸಿದ್ದಾರೆ. ರಿಷಿ ಸ್ಪೆಷಲ್ ವಿಡಿಯೋ ಮೂಲಕ ರಾಮನ ಅವತಾರ ಸಿನಿಮಾ ಬಿಡುಗಡೆ ದಿನಾಂಕವನ್ನು ರಿವೀಲ್ ಮಾಡಿದ್ದಾರೆ. ಮೇಬಿ ಅಲ್ಲ ಪಕ್ಕ ಮೇ 10ಕ್ಕೆ ಬರ್ತಿವೆ. ಎಲೆಕ್ಷನ್ ರಿಸಲ್ಟ್ ಗೂ ಮೊದ್ಲೇ ನಮ್ಮ ಸಿನಿಮಾ ರಿಸಲ್ಟ್ ಬರಲಿದೆ ಎಂದಿದ್ದಾರೆ. ಪ್ರಮೋಷನ್ ಅಖಾಡಕ್ಕೆ ಇಳಿಯೋದಿಕ್ಕೆ ಇಡೀ ತಂಡ ಸಿದ್ಧವಾಗಿದ್ದು, ರಾಮರಾಜ್ಯ ಕಟ್ಟೋದಿಕ್ಕೆ ರಾಮನ ಅವತಾರ ಬಳಗ ಸಜ್ಜಾಗಿ ನಿಂತಿದೆ.

‘ರಾಮನ ಅವತಾರ’ ಸಿನಿಮಾದಲ್ಲಿ ಪ್ರಣೀತಾ ಸುಭಾಷ್ ಹಾಗೂ ಶುಭ್ರ ಅಯ್ಯಪ್ಪ ನಾಯಕಿಯರಾಗಿ ನಟಿಸಿದ್ದು, ಅರುಣ್ ಸಾಗರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ವಿಕಾಸ್ ಪಂಪಾಪತಿ ‘ರಾಮನ ಅವತಾರ’ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ. ಈ ಚಿತ್ರದ ಮೂಲಕ ವಿಕಾಸ್ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಟೀಸರ್ ಹಾಗೂ ಹಾಡುಗಳ ಮೂಲಕ ರಾಮನ ಅವತಾರ ಸಿನಿಮಾ ನಿರೀಕ್ಷೆ ಹೆಚ್ಚಿಸಿದೆ. ಸ್ಟಾರ್ ಫ್ಯಾಬ್ ಪ್ರೊಡಕ್ಷನ್ನಡಿ ‘ಆಪರೇಷನ್ ಅಲಮೇಲಮ್ಮ’ ಸಿನಿಮಾ ನಿರ್ಮಾಣ ಮಾಡಿದ್ದ ಅಮರೇಜ್ ಸೂರ್ಯವಂಶಿ ಚಿತ್ರ ನಿರ್ಮಾಣ ಮಾಡಿದ್ದಾರೆ. ರೋಮ್ಯಾಂಟಿಕ್ ಕಾಮಿಡಿ ಜಾನರ್ ಈ ಸಿನಿಮಾಗೆ ವಿಷ್ಣುಪ್ರಸಾದ್ ಹಾಗೂ ಸಮೀರ್ ದೇಶ್ ಪಾಂಡೇ ಕ್ಯಾಮೆರಾ ಕೈಚಳಕವಿದ್ದು, ಜೂಡಾ ಸ್ಯಾಂಡಿ ಟ್ಯೂನ್ ಹಾಕಿದ್ದು, ಅಮರನಾಥ್ ಸಂಲಕನವಿದೆ. ಉಡುಪಿ, ಬೆಂಗಳೂರು ಸುತ್ತುಮುತ್ತ ಶೂಟಿಂಗ್ ನಡೆಸಲಾಗಿದೆ.

ಇನ್ನಷ್ಟು ಓದಿರಿ

Scroll to Top