ʻಗೌರಿʼಯೊಂದಿಗೆ ಹೊಸ ಟ್ರೆಂಡ್ ಹುಟ್ಟು ಹಾಕಿದ ಇಂದ್ರಜಿತ್ ಲಂಕೇಶ್!

Picture of Cinibuzz

Cinibuzz

Bureau Report

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ ಇಂದ್ರಜಿತ್ ಕಾಣಿಸಿಕೊಂಡರು ಅಂದರೆ, ಅಲ್ಲಿ ಏನೋ ಹೊಸತನ, ಯಾರೂ ಮಾಡದ ಸಾಹಸ, ಟ್ರೆಂಡ್ಗಳು ಸೃಷ್ಟಿಯಾಗುತ್ತವೆ ಅನ್ನೋದು ನಿಜ. ಅದಕ್ಕೆ ಅವರ ಈ ಹಿಂದಿನ ಸಿನಿಮಾಗಳೇ ಸಾಕ್ಷಿ.

ಸದ್ಯ ಇಂದ್ರಜಿತ್ ಲಂಕೇಶ್ ತಮ್ಮ ಮಗ ಸಮರ್ಜಿತ್ ಅವರನ್ನು ಲಾಂಚ್ ಮಾಡುತ್ತಿದ್ದಾರೆ. ಸದ್ಯ ಒಂದೇ ಥರದ ಪ್ರಚಾರಗಳೇ ತುಂಬಿ ಹೋಗಿರುವ ಸ್ಯಾಂಡಲ್ವುಡ್ನಲ್ಲಿ ಇಂದ್ರಜಿತ್ ಹೊಸ ಐಡಿಯಾಗಳನ್ನು ಆವಿಷ್ಕಾರ ಮಾಡುತ್ತಿದ್ದಾರೆ. ಈಗ ಬಿಡುಗಡೆಯಾಗಿರುವ ʻಗೌರಿʼ ಸಿನಿಮಾದ ಚಂದನ್ ಶೆಟ್ಟಿ ಮ್ಯೂಸಿಕ್ ಮಾಡಿ ಹಾಡಿರುವ ʻಟೈಮ್ ಬರತ್ತೆ ಒಳ್ಳೆ ಟೈಮ್ ಬರತ್ತೆʼ ಹಾಡಿಗೆ ಸಂಯುಕ್ತಾ ಹೆಗ್ಡೆ, ಸಾನಿಯಾ ಅಯ್ಯರ್ ಥರ ಸೆಲೆಬ್ರಿಟಿ, ಸೋಷಿಯಲ್ ಮೀಡಿಯಾ ಇನ್ಫ್ಲೂಯೆನ್ಸರ್ ಗಳ ಕಡೆಯಿಂದಲೇ ರೀಲ್ಸ್ ಮಾಡಿಸಿ ಬಿಟ್ಟಿದ್ದಾರೆ. ಸಾಮಾನ್ಯಕ್ಕೆ ಸಿನಿಮಾ ತೆರೆಗೆ ಬರುವ ಮುನ್ನ ಪೂರ್ತಿ ವಿಡಿಯೋವನ್ನು ಯಾರೂ ಬಿಡೋದಿಲ್ಲ. ಲಿರಿಕಲ್ ವಿಡಿಯೋ ಮಾಡಿ ರಿಲೀಸ್ ಮಾಡ್ತಾರೆ. ಇಂದ್ರಜಿತ್ ಲಂಕೇಶ್ ಅವರು ಸಂಯುಕ್ತಾ ಹೆಗಡೆ ಮತ್ತು ಸಾನ್ಯಾ ಅಯ್ಯರ್ ಅವರನ್ನೇ ಬಳಸಿಕೊಂಡು ಪ್ರತ್ಯೇಕವಾಗಿ ಹಾಡನ್ನು ಚಿತ್ರೀಕರಿಸಿ ಪ್ರಚಾರಕ್ಕೆ ಬಿಟ್ಟಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಬಹುಶಃ ಇಂಥದ್ದೊಂದು ಪ್ರಯತ್ನವನ್ನು ಯಾರೂ ಮಾಡಿರಲಿಲ್ಲ.

ಅದಕ್ಕೇ ಹೇಳಿದ್ದು ಇಂದ್ರಜಿತ್ ಯಾವತ್ತೂ ಹೊಸತನಗಳಿಗೆ ತೆರೆದುಕೊಳ್ಳುತ್ತಾರೆ. ಸದಾ ಹೊಸ ಆವಿಷ್ಕಾರ ಮಾಡುತ್ತಿರುತ್ತಾರೆ ಅಂತಾ…

ʻಗೌರಿʼ ಸಿನಿಮಾದಲ್ಲಿ ಒಟ್ಟು ಎಂಟು ವೆರೈಟಿಯ ಹಾಡುಗಳಿವೆ. ಐದು ಜನ ಸಂಗೀತ ನಿರ್ದೇಶಕರು ಕೆಲಸ ಮಾಡಿದ್ದಾರೆ. ಜೆಸ್ಸಿ ಗಿಫ್ಟ್, ಚಂದನ್ ಶೆಟ್ಟಿ, ಶಿವು ಭೇರ್ಗಿ ಹಾಗೂ ಅನಿರುದ್ದ್ ಶಾಸ್ತ್ರಿ ನಾಲ್ವರು ಸಂಗೀತ ನಿರ್ದೇಶಕರು. ಮ್ಯಾಥ್ಯೂಸ್ ಮನು ರೀರೆಕಾರ್ಡಿಂಗ್ ಮಾಡಿದ್ದಾರೆ. ವಿ.ನಾಗೇಂದ್ರಪ್ರಸಾದ್, ಕವಿರಾಜ್, ಕೆ.ಕಲ್ಯಾಣ್, ವರದರಾಜ್ ಈ ಚಿತ್ರದ ಹಾಡುಗಳನ್ನು ರಚಿಸಿದ್ದಾರೆ. ಕೈಲಾಶ್ ಖೇರ್ ,ಚಂದನ್ ಶೆಟ್ಟಿ, ಅನಿರುದ್ಧ ಶಾಸ್ತ್ರಿ,ಜಾವೇದ್ ಅಲಿ,ಅನನ್ಯ ಭಟ್, ನಿಹಾಲ್ ತೌರೋ ,ಅದಿತಿ ಸಾಗರ್, ಬಾಲಸುಬ್ರಹ್ಮಣ್ಯಂ ಹಾಗೂ ಪ್ರಜ್ಞಾ ಮರಾಠೆ ಅವರ ಜೊತೆಗೆ ಸ್ವತಃ ಚಿತ್ರ ಹೀರೋ ಸಮರ್ಜಿತ್ ಈ ಚಿತ್ರದ ಹಾಡುಗಳನ್ನು ಹಾಡಿದ್ದಾರೆ. ಗುಬ್ಬಿ, ಮಾಸ್ತಿ, ರಾಜಶೇಖರ್ ಹಾಗೂ ಬಿ.ಎ.ಮಧು ಸಂಭಾಷಣೆ ಬರೆದಿದ್ದಾರೆ. ರವಿವರ್ಮ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮಾಡಿದ್ದಾರೆ. ಲಾಫಿಂಗ್ ಬುದ್ದ ಫಿಲಂಸ್ ಲಾಂಛನದಲ್ಲಿ ಇಂದ್ರಜಿತ್ ಲಂಕೇಶ್ ನಿರ್ಮಿಸಿ, ನಿರ್ದೇಶಿಸಿರುವ ಹಾಗೂ ಸಮರ್ಜಿತ್ ಲಂಕೇಶ್ ನಾಯಕನಾಗಿ ನಟಿಸಿರುವ ʻಗೌರಿʼ ಸಿನಿಮಾ ಬಿಡುಗಡೆಯ ಹೊತ್ತಿಗೆ ಇನ್ನೂ ಏನೇನು ಕ್ರೇಜ್ ಕ್ರಿಯೇಟ್ ಮಾಡುತ್ತದೋ ನೋಡಬೇಕು!

ಇನ್ನಷ್ಟು ಓದಿರಿ

Scroll to Top