ವರ್ಷ ಪೂರ್ತಿ ಗಣೇಶ ಹಬ್ಬಾನೇ!

Picture of Cinibuzz

Cinibuzz

Bureau Report

ಇನ್ನು ಕನ್ನಡ ಚಿತ್ರರಂಗದ ಕಣ್ಮುಚ್ಚಿತು… ಅಂತಲೇ ಎಲ್ಲರೂ ಭಾವಿಸಿದ್ದರು. ವೃತ್ತಿಪರ ನಿರ್ಮಾಪಕರಂತೂ ಏನು ಮಾಡೋದು ಅನ್ನೋದು ಗೊತ್ತಾಗದೆ ಕೈಚೆಲ್ಲಿ ಕುಳಿತಿದ್ದರು. ಈ ಹಿಂದೆ ಕನ್ನಡ ಚಿತ್ರರಂಗ ಇಂಥದ್ದೇ ಪರಿಸ್ಥಿತಿಯಲ್ಲಿದ್ದಾಗ ಇಬ್ಬರು ಹೊಸಾ ಹೀರೋಗಳು ಬಂದು ಚಿತ್ರರಂಗದ ದಿಕ್ಕನ್ನೇ ಬದಲಿಸಿದ್ದರು. ಆ ವರೆಗೆ ಕಾಣದ ಥೇಟರ್‌ ಗಳಿಕೆ ಆ ಎರಡು ಸಿನಿಮಾಗಳು ಮಾಡಿದ್ದವು. ಒಂದು ಮುಂಗಾರು ಮಳೆ, ಮತ್ತೊಂದು ದುನಿಯಾ!

ಈ ಎರಡು ಸಿನಿಮಾಗಳ ಮೂಲಕ ಸ್ಯಾಂಡಲ್‌ ವುಡ್‌ ಗೆ ಇಬ್ಬರು ಸೂಪರ್‌ ಸ್ಟಾರ್‌ಗಳು ಸಿಕ್ಕಿದ್ದು ಮಾತ್ರವಲ್ಲದೆ, ಕನ್ನಡ ಚಿತ್ರರಂಗಕ್ಕೆ ಹೊಸ ಹುಮ್ಮಸ್ಸು ತಂದುಕೊಟ್ಟಿದ್ದರು. ಈಗ ಅದೆಲ್ಲಾ ಕಳೆದು ಬರೋಬ್ಬರಿ ಹದಿನೆಂಟು ವರ್ಷಗಳೇ ಕಳೆದಿವೆ. ಕನ್ನಡ ಚಿತ್ರರಂಗ ಮತ್ತೊಮ್ಮೆ ಅಂಥದ್ದೇ ಕ್ಷಾಮ ಎದುರಿಸುತ್ತಿ. ಈ ಹೊತ್ತಲ್ಲಿ ಬಂದ ದುನಿಯಾ ವಿಜಯ್‌ ಅವರ ಭೀಮ ಉದ್ಯಮಕ್ಕೆ ಬಲ ತಂದು ಕೊಟ್ಟರೆ, ಒಂದು ವಾರದ ಅಂತರದಲ್ಲಿ ಬಂದ ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರ ಕೃಷ್ಣ ಪ್ರಣಯ ಸಖಿ ಕನ್ನಡ ಚಿತ್ರರಂಗಕ್ಕೆ ಕಾಯಕಲ್ಪವನ್ನೇ ನೀಡಿದೆ…

goldenstar_ganesh_dwapara_goldenstar_ganesh_hit_movie
goldenstar_ganesh_dwapara_goldenstar_ganesh_hit_movie

ಕೃಷ್ಣಂ ಪ್ರಣಯ ಸಖಿ ಚಿತ್ರದ ಈ ವರೆಗಿನ ಕಲೆಕ್ಷನ್‌ ಇನ್ನೇನು ಐವತ್ತು ಕೋಟಿಯನ್ನು ಪೂರೈಸಿ, ಮುನ್ನುಗ್ಗಲಿದೆ ಅನ್ನೋದು ಸ್ವತಃ ಗಾಂಧಿ ನಗರದವರ, ವಿತರಕರ ವಲಯದ ಲೆಕ್ಕಾಚಾರವಾಗಿದೆ. ಈಗೆಲ್ಲಾ ಎಂಥಾ ಸ್ಟಾರ್‌ ಸಿನಿಮಾಗಳೇ ಆದರೂ ಒಂದು ಅಥವಾ ಎರಡು ವಾರಕ್ಕೆ ಕಲೆಕ್ಷನ್‌ ಡ್ರಾಪ್‌ ಆಗುತ್ತದೆ. ಆದರೆ, ಗಣೇಶ್‌ ಅವರ ಪ್ರಣಯ ಸಖಿ ವಾರಗಳು ಕಳೆದಂತೆ ಮತ್ತೆ ಮತ್ತೆ ಜನರನ್ನು ಸೆಳೆಯುತ್ತಲೇ ಇದೆ. ಬಹಳ ಹಿಂದಿನಿಂದಲೂ ಚಿತ್ರರಂಗದಲ್ಲಿ ಒಂದಿಷ್ಟು ನಂಬಿಕೆಗಳು ಚಾಲ್ತಿಯಲ್ಲಿವೆ. ಅವು ನಿಜ ಕೂಡಾ ಹೌದು; ಯಾವ ಸಿನಿಮಾಗೆ ಫ್ಯಾಮಿಲಿ ಆಡಿಯನ್ಸ್‌ ಬರಲು ಶುರು ಮಾಡುತ್ತಾರೋ, ಅದು ಮೆಘಾ ಹಿಟ್‌ ಅನ್ನಿಸಿಕೊಳ್ಳುತ್ತದೆ. ಸಾಮಾನ್ಯಕ್ಕೆ ಎಲ್ಲ ಸಿನಿಮಾಗಳಿಗೂ ಕುಟುಂಬ ಸಮೇತರಾಗಿ ಜನ ಬರೋದಿಲ್ಲ. ʻಈ ಸಿನಿಮಾವನ್ನು ಮನೆಯವರಿಗೆಲ್ಲಾ ತೋರಿಸಬಹುದು. ಇದರಲ್ಲಿ ಮನರಂಜನೆ ಇದೆ. ಕೊಟ್ಟ ಕಾಸಿಗೆ ಮೋಸವಾಗಲ್ಲʼ ಅನ್ನೋದು ಖಾತ್ರಿಯಾದ ನಂತರವಷ್ಟೇ ಫ್ಯಾಮಿಲಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರೋದು. ಕಾಂತಾರಾ ಎನ್ನುವ ಸಿನಿಮಾ ಅತ್ಯದ್ಭುತ ಯಶಸ್ಸು ಕಂಡಿದ್ದು ಕೂಡಾ ಇದೇ ಕಾರಣಕ್ಕೆ. ಈಗ ಕೃಷ್ಣಂ ಪ್ರಯಣ ಸಖಿ ಕೂಡಾ ಎರಡು ವಾರಗಳನ್ನು ದಾಟಿ ಮೂರನೇ ವಾರಕ್ಕೂ ಅತ್ಯುತ್ತಮ ಗಳಿಕೆ ಮಾಡುತ್ತಿದೆ. ಫ್ಯಾಮಿಲಿ ಆಡಿಯೆನ್ಸ್‌ ಬರೀ ಮಲ್ಟಿಪ್ಲೆಕ್ಸ್‌ಗೆ ಮಾತ್ರ ಬರುತ್ತಾರೆ ಅನ್ನೋ ಮಾತನ್ನು ಕೂಡಾ ಸುಳ್ಳು ಮಾಡಿ, ಎಲ್ಲ ಸಿಂಗಲ್‌ ಸ್ಕ್ರೀನ್‌ಗಳಲ್ಲಿ ಕೂಡಾ ಜನ ಮನೆಮಂದಿ ಸಮೇತ ಬಂದು ಸಿನಿಮಾ ನೋಡುತ್ತಿದ್ದಾರೆ.

No photo description available.

ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರಿಗೆ ಮೊದಲಿನಿಂದಲೂ ಕೈ ಹಿಡಿದಿದ್ದು, ಯುವಕ-ಯುವತಿಯರು ಮತ್ತು ಫ್ಯಾಮಿಲಿ ಪ್ರೇಕ್ಷಕರೇ. ಈಸ ಕೃಷ್ಣ ಪ್ರಣಯ ಸಖಿಯನ್ನು ಕೂಡಾ ಇದೇ ಜನ ಅಪ್ಪಿ ಮುದ್ದಾಡಿದ್ದಾರೆ. ದ್ವಾಪರ ಎನ್ನುವ ಹಾಡು ಕೂಡಾ ಜನರನ್ನು ಅದೇ ಮಟ್ಟಕ್ಕೆ ಮೋಡಿ ಮಾಡಿದೆ. ಗಣೇಶ್‌ ಯಾವತ್ತೂ ಖಾಲಿ ಕುಳಿತವರಲ್ಲ. ಗೆಲುವು-ಸೋಲುಗಳ ಆಚೆಗೆ ಒಂದರ ಹಿಂದೊಂದು ಸಿನಿಮಾಗಳನ್ನು ಮಾಡುತ್ತಲೇ ಬಂದಿದ್ದಾರೆ. ಸದ್ಯ ಕೃಷ್ಣಂ ಪ್ರಯಣ ಸಖಿ ಸಿನಿಮಾದ ಗೆಲುವು ಅವರ ಮಾರ್ಕೆಟ್ಟನ್ನು ದೊಡ್ಡ ಮಟ್ಟದಲ್ಲಿ ಹೆಚ್ಚಿಸಿದೆ. ಮೂಲಗಳ ಪ್ರಕಾರ ಕಳೆದೊಂದು ವಾರದಲ್ಲಿ ಎಂಟು ಜನ ಹೊಸ ನಿರ್ಮಾಪಕರು ಗಣೇಶ್‌ ಅವರಿಗೆ ಅಡ್ವಾನ್ಸ್‌ ನೀಡಿದ್ದಾರಂತೆ. ಸದ್ಯದ ವಾತಾವರಣವನ್ನು ನೋಡಿದರೆ ಮುಂದಿನ ವರ್ಷಗಳಲ್ಲಿ ಚಂದನವನದಲ್ಲಿ ಗಣೇಶನ ಹಬ್ಬ ಬಲು ಜೋರು ಅನ್ನೋದಂತೂ ಸತ್ಯ!

May be a graphic of 1 person and text

ಇನ್ನಷ್ಟು ಓದಿರಿ

Scroll to Top