ಎರಡು ಬಾಂಬು…ಒಂದು ಗನ್ನು-ಮಿಸ್ಟರ್ ರಾಣಿ ಅಟ್ಯಾಕ್ – ಎಂಟ್ರಿ!

Picture of Cinibuzz

Cinibuzz

Bureau Report

ಮಿಸ್ಟರ್ ರಾಣಿ ಸಿನಿಮಾದ ಪೋಸ್ಟರ್ ಕ್ರಿಯೆಟಿವಿಯಿಂದಾಗಿ ಸಖತ್ ವೈರೆಲ್ ಆಗಿತ್ತು ..ಪೋಸ್ಟರ್ ನಲ್ಲೇ ಒಂದು ರೀತಿ ಟ್ರೆಂಡ್ ಸೆಟ್ ಮಾಡಿತ್ತು.ಈಗ ಸಿನಿಮಾದ ಟೀಸರ್ ರೀಲಿಸ್ ಮಾಡಿದ್ದಾರೆ.ಸದ್ಯದ ಕ್ರೈಮ್,ಥ್ರಿಲರ್,ಹಾರರ್,ಲವ್ ಸ್ಟೋರಿ ಎಲ್ಲವನ್ನು ಬದಿಗಿಟ್ಟು ವಿನೂತನ ಶೈಲಿಯ ಕಾಮಿಡಿ ಎಂಟರ್ ಟೈನರ್ ಚಿತ್ರವನ್ನು ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಖ್ಯಾತಿಯ ನಿರ್ದೇಶಕ ಮಧುಚಂದ್ರ ಮಾಡಿದ್ದಾರೆ. “ ಹೀರೋ ಆಗ್ಬೇಕು ಅಂತ ಸಿನಿಮಾ ರಂಗಕ್ಕೆ ಬಂದ ಹುಡುಗ ಆಕಸ್ಮಿಕವಾಗಿ ಹೀರೋಯಿನ್ ಆಗಿಬಿಡ್ತಾನೆ ಅನ್ನೋದೆ ಟೀಸರ್ ನಲ್ಲಿ ಹೇಳಿರೋ ಕಥೆ”.ಒನ್ ಲೈನ್ ಸ್ಟೋರಿಯಲ್ಲೇ ಸಿನಿಮಾ ಎಷ್ಟು ಢಿಫರೆಂಟಾಗಿದೆ ಮತ್ತು ಮಜಾವಾಗಿದೆ ಅನ್ನೋದು ಗೊತ್ತಾಗುತ್ತೆ.

mister rani kannada movie_cinibuzz
mister rani kannada movie_cinibuzz

ಲಕ್ಷ್ಮಿ ನಿಮಾಸ ಸೀರಿಯಲ್ ನಲ್ಲಿ ಜಯಂತ್ ಪ್ರಾತಮಾಡಿ ಸಿಕ್ಕಾಪಟ್ಟೆ ಫೇಮಸ್ ಆಗಿರೋ ದೀಪಕ್ ಸುಬ್ರಹ್ಮಣ್ಯ ಈ ಚಿತ್ರದ ಹೀರೋ(ಯಿನ್!?) ರಾಣಿ ರೋಲ್ ಮಾಡಿರೋದು ದೀಪಕ್ ಸುಬ್ರಹ್ಮಣ್ಯ ಅಂತ ಗೊತ್ತಾದಾಗ ತುಂಬಾ ಜನ ಶಾಕ್ ಗಿದ್ದಾರೆ ! ಒಬ್ಬ ಹೊಸ ಹುಡುಗ ಈ ಲೆವೆಲ್ ನಲ್ಲಿ ಹುಡುಗಿ ಥರ ಚೇಂಜ್ ಓವರ್ ಮಾಡೋಕೆ ಸಾಧ್ಯಾನಾ ಅಂತ ಎಲ್ಲಾರೂ ಅಚ್ಚರಿ ಪಟ್ಟಿದ್ದಾರೆ.ರಾಣಿ ಪೋಸ್ಟರ್ ನೋಡಿ ನಮಗೆ ಇನ್ನೊಬ್ಬಳು ಹೀರೋಯಿನ್ ಕಾಂಪಿಟೇಷನ್ ಮಾಡೋಕೆ ಬಂದಳಲ್ಲ ಅಂತ ತುಂಬಾ ಜನ ಹೀರೋಯಿನ್ ಕೂಡ ಹೊಟ್ಟೆ ಉರಿ ಪಟ್ಟುಕೊಂಡಿದ್ದರಂತೆ!! ಆದ್ರೆ ಟೀಸರ್ ನೋಡಿ ಅಯ್ಯೋ ರಾಣಿ ಹುಡುಗಿ ಅಲ್ಲ….ಹುಡುಗ ಅಂತ ಗೊತ್ತಾಗಿ ಬೆಸ್ತು ಬಿದ್ದಿದ್ದಾರೆ ಅಂತ ಗಾಸಿಪ್ ಇದೆ!!

ಇನ್ನು ಟೀಸರ್ ನೋಡಿದರೆ ಚಿತ್ರ ಟೆಕ್ನಿಕಲ್ ಆಗಿ ತುಂಬಾ ಬೇರೆ ಲೆವೆಲ್ ಗೆ ಮೂಡಿಬಂದಿರೋದು ಎದ್ದು ಕಾಣುತ್ತಿದೆ.ಟೀಸರ್ ಒಪನಿಂಗ್ ನಲ್ಲಿ ಬರುವ ಅನಿಮೇಷನ್‌ ನೋಡಿದಾಗ ಇದು ಯಾವುದೋ ಹಾಲಿವುಡ್ ಚಿತ್ರವಿರಬೇಕೆಂದು ಅನ್ನಿಸುವುದರಲ್ಲಿ ಸಂಶಯವಿಲ್ಲ.ಇದೊಂದು ವಿಭಿನ್ನ ರೀತಿಯ ಥಿಯೇಟರ್ ಎಕ್ಸ್ ಪೀರಿಯೆನ್ಸ್ ಕೊಡುವಂತ ಚಿತ್ರ ಎನಿಸುತ್ತಿದೆ.ಕಂಪ್ಲೀಟ್ ಕಾಮಿಡಿ ಪ್ಯಾಕೇಜ್ ಇರುವ ಈ ಚಿತ್ರದ ಟೀಸರ್ ಯೂಟ್ಯೂಬ್ ನಲ್ಲಿದೆ.ಮಿಸ್ ಮಾಡದೆ ನೋಡಿ ಮಿಸ್ಟರ್ ರಾಣಿ !!

ಇನ್ನಷ್ಟು ಓದಿರಿ

Scroll to Top