ಕಾದಲ್
ಚಿತ್ರದ ಹಾಡುಗಳ ಲೈವ್ ರೆಕಾರ್ಡಿಂಗ್ ಸೆಷನ್ ಸಂಪೂರ್ಣವಾಗಿದೆ, ಅದ್ಭುತವಾಗಿ ಸಂಗೀತ ಮೂಡಿ ಬಂದಿದೆ, ಕಾದಲ್
ಚಿತ್ರ ಪ್ರೇಮಿಗಳ ಹಾಗೂ ಎಲ್ಲಾ ಮುದ್ದು ಮನಸುಗಳ, ಪೆದ್ದು ಮನಸ್ಸುಗಳ ಮನರಂಜಿಸಲಿದೆ, ಕಾದಲ್ ಚಿತ್ರದ ಸಂಪೂರ್ಣ ಗೀತೆಗಳು ಯುವ ಪ್ರೇಮಿಗಳನ್ನು ಮತ್ತೆ ಒಂದು ಸುಂದರ ಪ್ರಪಂಚಕ್ಕೆ ಕರೆದೊಯ್ಯಲಿದೆ,

ಮತ್ತೊಂದು ಪ್ರೇಮಲೋಕ ಸೃಷ್ಟಿಸುವ ಚಿತ್ರ ಇದಾಗಲಿದೆ, ಮನಸುಗಳ ಮಾತು ಮಧುರ ಎಂಬಂತೆ ಭಾವನೆಗಳ ಜೊತೆ ಬೆರೆತಂತಹ ಈ ಕಾದಲ್ ಚಿತ್ರ ಹಾಗೂ ಹಾಡುಗಳು ಸಿನಿ ರಸಿಕರನ್ನು ಮನರಂಜಿಸಲಿದೆ, ಪ್ಯಾನ್ ಇಂಡಿಯಾ ಸಿನಿಮಾದ ಜಮಾನದಲ್ಲಿ ಪರಿಶುದ್ಧ ಪ್ರೀತಿಯನ್ನು ಹಂಚಲು ಕಾದಲ್ ಚಿತ್ರತಂಡ ಸಿದ್ಧವಾಗಿದೆ, ಶೀಘ್ರದಲ್ಲಿ ಕಾದಲ್ ಸೆಟ್ಟರಲ್ಲಿದೆ,ಆರ್ ಆರ್ ಗೌಡ ಪ್ರೊಡಕ್ಷನ್ ನಲ್ಲಿ ಎಚ್.ಆರ್ ಸುರೇಶ್ ಗೌಡ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಪುನೀತ್ ರಂಗಸ್ವಾಮಿ ಅವರ ಸಂಭಾಷಣೆ ಮತ್ತು ಸಾಹಿತ್ಯ ಮತ್ತು ಭರ್ಜರಿ ಚೇತನ್ ಕುಮಾರ್ ಹಾಗೂ ಗೌರಿಸುತ್ತ ಅವರ ಸಾಹಿತ್ಯ ಒಳಗೊಂಡಿದೆ, ಚಿತ್ರಕ್ಕೆ ಹಿತನ್ ಹಾಸನ್ ಅವರ ಸಂಗೀತ ಸಂಯೋಜನೆ ಇದೆ,

ಯುವ ನಿರ್ದೇಶಕ ವಿಜಯ ಪ್ರಿಯ ಅವರು ಕಥೆ ಬರೋದು ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ನಿಮ್ಮೆಲ್ಲರ ಬೆಂಬಲ ಇರಲಿ ಕಾದಲ್ ನಮ್ಮೆಲ್ಲರದಾಗಿರಲಿ….












































