ಗದಾಧಾರಿ ಹನುಮಾನ್ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ತಯಾರಾಗಿರೋ ದ್ವಿಭಾಷಾ ಸಿನಿಮಾ.ಸದ್ಯ ರಿಲೀಸ್ಗೆ ರೆಡಿಯಾಗಿರೋ ಗದಾಧಾರಿ ಹನುಮಾನ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಮೊದಲ ನೋಟದಲ್ಲೇ ಈ ಚಿತ್ರ ಫ್ಯಾಂಟಸಿ ಸಿನ್ಮಾದಂತೆ ಕಾಣ್ತಿದೆ.

ದುಬಾರಿ ವೆಚ್ಚದ ಗ್ರಾಫಿಕ್ಸ್ ವಿಎಫ್ ಎಕ್ಸ್ ಹಾಗೂ ಸೌಂಡ್ ಎಫೆಕ್ಟ್ಸ್ ಮೇಕಿಂಗ್ ಚಿತ್ರದ ಮೇಲಿನ ನಿರೀಕ್ಷೆಯನ್ನ ಹೆಚ್ಚಿಸಿದ್ದು, ತಂತ್ರಜ್ಞಾನದ ನೈಪುಣ್ಯದ ಜೊತೆ ಕಂಡಿರೋ ತಾರಾಬಳಗ ಈ ಚಿತ್ರದ ಮೇಲೆ ಭರವಸೆ ಹುಟ್ಟಿಸಿದೆ. ವಿರಾಬ್ ಸ್ಟುಡಿಯೋಸ್ ಬ್ಯಾನರ್ ನಡಿಯಲ್ಲಿ ಬಸವರಾಜ್ ಹುರಕಡ್ಲಿ ಮತ್ತು ರೇಣುಕ ಪ್ರಸಾದ್.ಕೆ.ಆರ್ ಜೊತೆಯಾಗಿ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ರೋಹಿತ್ ಕೊಲ್ಲಿ ಈ ಚಿತ್ರವನ್ನ ನಿರ್ದೇಶಿಸಿದ್ದಾರೆ.

ಗದಾಧಾರಿ ಹನುಮಾನ್ ಸಾಹಸಮಯ, ಹಾರರ್ ಥ್ರಿಲ್ಲರ್, ದೈವತ್ವ ಹಾಗೂ ರಾಕ್ಷಸತ್ವದ ಕಥಾಹಂದರವಿರೋ ಚಿತ್ರ.ತಾರಕಾಸುರ ಖ್ಯಾತಿಯ ಕಿರಣ್ ( ವೈಭವ್) ಈ ಚಿತ್ರದ ನಾಯಕ. ಹೊಸ ಪ್ರತಿಭೆ ಹರ್ಷಿತಾ ನಾಯಕಿ. ಇವರೊಟ್ಟಿಗೆಕಲ್ಯಾಣ್ ಕೃಷ್ಣ, ರಮೇಶ್ ಪಂಡಿತ್, ಸುನಂದ ಕಲ್ಬುರ್ಗಿ, ನಾಗೇಶ್ ಮಯ್ಯ, ಶಿವಪ್ಪ, ಅರ್ಜುನ್, ಭೀಷ್ಮ, ಲೋಕೇಶ್ ನಟಿಸಿದ್ದಾರೆ.

ಜ್ಯೂಡಾ ಸ್ಯಾಂಡಿ ಸಂಗೀತ, ಅರುಣ್ ಗೌಡ ಛಾಯಾಗ್ರಣ ಈ ಚಿತ್ರಕ್ಕಿದೆ. ಸಿ.ಎನ್ ಕಿಶೋರ್ ಸಂಕಲನ ಮಾಡಿದ್ದಾರೆ. ಟೈಗರ್ ಶಿವು ಸಾಹಸ ಸಂಯೋಜನೆ ಮಾಡಿದ್ದಾರೆ. ಬೆಂಗಳೂರು,ಹಂಪಿ, ಗಂಗಾವತಿ,ಅಂಜನಾದ್ರಿ,ಕಿತ್ತೂರು,ಹೊನ್ನಾಪುರ ಹೀಗೆ ಬಹುತೇಕ ಕರ್ನಾಟಕದಲ್ಲೇ ಈ ಚಿತ್ರದ ಚಿತ್ರೀಕರಣವಾಗಿರೋದು ವಿಶೇಷ.
ಟೀಸರ್ ಲಾಂಚ್ ಮಾಡಿ ಚಿತ್ರದ ವಿಶೇಷತೆಗಳನ್ನ ಹಂಚಿಕೊಂಡ ಚಿತ್ರತಂಡ ಸದ್ಯದಲ್ಲೇ ತೆರೆಗೆ ತರೋ ಸನ್ನಾಹದಲ್ಲಿದೆ.











































