ಸೆಪ್ಟೆಂಬರ್ 5 ರಂದು ಶಿವ ಕಾರ್ತಿಕೇಯನ್ – ರುಕ್ಮಿಣಿ ವಸಂತ್ ನಟನೆಯ ಸೆಪ್ಟೆಂಬರ್ ‌ “ಮದರಾಸಿ” ಚಿತ್ರ ತೆರೆಗೆ

Picture of Cinibuzz

Cinibuzz

Bureau Report

ತಮಿಳು ಚಿತ್ರರಂಗದ ಖ್ಯಾತ ನಟ ಶಿವ ಕಾರ್ತಿಕೇಯನ್ ಹಾಗೂ ಕನ್ನಡದ ನಟಿ ರಕ್ಮಿಣಿ ವಸಂತ್ ನಾಯಕ- ನಾಯಕಿಯಾಗಿ ನಟಿಸಿರುವ, A.R ಮುರುಗದಾಸ್ ನಿರ್ದೇಶನದ “ಮದರಾಸಿ” ಸೆಪ್ಟೆಂಬರ್ 5 ರಂದು ಬಹುಭಾಷೆಯಲ್ಲಿ ಬಿಡುಗಡೆಯಾಗಲಿದೆ.

ಬೆಂಗಳೂರಿನ ಕೋರಮಂಗಲದ ನಕ್ಸಸ್ ಮಾಲ್‌ನಲ್ಲಿ ಹಮ್ಮಿಕೊಂಡಿದ್ದ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಚಿತ್ರತಂಡದ ಸದಸ್ಯರು ಭಾಗಿಯಾಗಿದ್ದರು. ಅಭಿಮಾನಿಗಳ ಹರ್ಷೋದ್ಗಾರ ಮತ್ತು ಸಂಭ್ರಮದ ನಡುವೆ ಕನ್ನಡ, ತೆಲುಗು, ತಮಿಳು ಸೇರಿದಂತೆ ಎಲ್ಲಾ ಭಾಷೆಗಳ ಟ್ರೇಲರ್ ಪ್ರದರ್ಶನ ಮಾಡಲಾಯಿತು. ಶಿವ ಕಾರ್ತಿಕೇಯನ್, ರುಕ್ಮಿಣಿ ವಸಂತ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

“ಅಮರನ್” ಚಿತ್ರದ ಬಳಿಕ ಬೆಂಗಳೂರಿನಲ್ಲಿ ನೆಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಿವ ಕಾರ್ತಿಕೇಯನ್, ಬೆಂಗಳೂರಿನ ಅಭಿಮಾನಿಗಳ‌ ಅಭಿಮಾನದ ಮಳೆಯಲ್ಲಿ ಮಿಂದರು. ಈ ವೇಳೆ “ಮದರಾಸಿ” ಚಿತ್ರದ ಹುಕ್ ಸ್ಟೆಪ್‌ ಗೆ ಹೆಜ್ಕೆ ಹಾಕಿ ಅಭಿಮಾನಿಗಳ‌ ಜೊತೆ ಸಂಭ್ರಮಿಸಿದರು

ಈ ಸಂದರ್ಭದಲ್ಲಿ ಮಾತನಾಡಿದ ನಟ ಶಿವ ಕಾರ್ತಿಕೇಯನ್, ರುಕ್ಮಿಣಿ ವಸಂತ್ ಅವರಂತಹ ನಟಿಯನ್ನು ತಮಿಳಿಗೆ ನೀಡಿದ ಬೆಂಗಳೂರಿಗೆ ಧನ್ಯವಾದಗಳು. ನನ್ನ ಹಿಂದಿನ ಚಿತ್ರಗಳಿಗೆ ತಾವುಗಳು ನಿರೀಕ್ಷೆಗೂ ಮೀರಿ ಯಶಸ್ಸನ್ನು ನೀಡಿದ್ದೀರಿ. ಈ ಚಿತ್ರಕ್ಕೂ ನಿಮ್ಮೆಲ್ಲರ ಪ್ರೋತ್ಸಾಹವಿರಲಿ. ನಿಮ್ಮ ಪ್ರೀತಿ, ಅಭಿಮಾನಕ್ಕೆ ನಾನು ಸದಾ ಋಣಿ, “ಮದರಾಸಿ” ಕಾಲ್ಪನಿಕ ಕಥೆ. ನಿರ್ದೇಶಕ ಮುರುಗದಾಸ್ ಅವರೆ ಕಥೆ ಬರೆದಿದ್ದಾರೆ. ಸೆಪ್ಟೆಂಬರ್ 5 ನಮ್ಮ ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಬೆಂಬಲಿಸಿ ಎಂದು‌ ಮನವಿ ಮಾಡಿದರು.

ನಾಯಕಿ ರುಕ್ಮಿಣಿ ವಸಂತ್ ಮಾತನಾಡಿ ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ. ಚಿತ್ರಕ್ಕೆ ಸಹಕಾರ ಬೆಂಬಲ ಇರಲಿ ಎಂದು ಕೇಳಿಕೊಂಡರು

ವಿಕೆ ಫಿಲಂಸ್ ಕರ್ನಾಟಕದಾದ್ಯಂತ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ

ಇನ್ನಷ್ಟು ಓದಿರಿ

Scroll to Top