‘ಜೊತೆಯಾಗಿ ಹಿತವಾಗಿ’ ಪ್ಯೂರ್ ಲವ್ ಸ್ಟೋರಿಗೆ ಮನಸೋತ ಪ್ರೇಕ್ಷಕರು

Picture of Cinibuzz

Cinibuzz

Bureau Report

ಪ್ಯೂರ್ ಲವ್ ಸ್ಟೋರಿಯನ್ನ ಸಿನಿ ಪ್ರೇಮಿಗಳು ಸೋಲಿಸಿದ ಉದಾಹರಣೆಯೇ ಇಲ್ಲ. ತೆರೆಮೇಲಿನ ಪ್ರೀತಿಯನ್ನ ಪ್ರೇಕ್ಷಕರು ಮನಸ್ಸಾರೆ ಅನುಭವಿಸುವುದುಂಟು. ಅಂಥದ್ದೊಂದು ಸಿನಿಮಾ ಈಗ ಪ್ರೇಕ್ಷಕರ ಹೃದಯವನ್ನು ಕೆಣಕುತ್ತಿದೆ. ಅದೇ ಜೊತೆಯಾಗಿ ಹಿತವಾಗಿ ಸಿನಿಮಾ. ಇದೇ ಸೆಪ್ಟೆಂಬರ್ 19ಕ್ಕೆ ತೆರೆಗೆ ಬರ್ತಿದೆ. ಅದಕ್ಕೂ ಮುನ್ನ ಒಂದು ಪ್ರೀಮಿಯರ್ ಶೋ ಮಾಡಲಾಗಿದೆ. ವಿಕ್ಟರಿಯಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರು ಮನಸ್ಪೂರ್ತಿಯಾಗಿ ಮೆಚ್ಚಿಕೊಂಡಿದ್ದಾರೆ. ಲವ್ ಸ್ಟೋರಿ, ಅಪ್ಪ ಮಗನ ಸೆಂಟಿಮೆಂಟ್ ಅನ್ನ ಹಾಡಿ ಹೊಗಳಿದ್ದಾರೆ. ಪ್ರೇಕ್ಷಕ ಪ್ರಭುಗಳು ಮೆಚ್ಚಿಕೊಂಡ ಮೇಲೆ ಸಿನಿಮಾ ತಂಡಕ್ಕೆ ಅದಕ್ಕಿಂತ ಇನ್ನೇನಿದೆ ಹೇಳಿ. ಸೆಪ್ಟೆಂಬರ್ 19ಕ್ಕೆ ರಿಲೀಸ್ ಆದ್ಮೇಲೆ ಒಳ್ಳೆ ರೆಸ್ಪಾನ್ಸ್ ಸಿಗುವ ನಿರೀಕ್ಷೆ ಇದೆ.

ಈ ಜೊತೆಯಾಗಿ ಹಿತವಾಗಿ ಸಿನಿಮಾದ ಟೈಟಲ್ ಶಿವಣ್ಣನ ಮೊದಲ ಆನಂದ್ ಸಿನಿಮಾದ ಹಾಡಿನಲ್ಲಿರುವ ಸಾಲಾಗಿದೆ. ಈ ಹಾಡಿನ ಸಾಲನ್ನೇ ಟೈಟಲ್ ಆಗಿ ಇಡುವುದಕ್ಕೂ ಒಂದು ಕಾರಣವಿದೆ, ಅದುವೇ ಈ ಸಿನಿಮಾದ ನಾಯಕ ಅಗಸ್ತ್ಯ ದೊಡ್ಮನೆಯ ಅಪ್ಪಟ ಅಭಿಮಾನಿ. ಈ ಸಿನಿಮಾ ಒಂದು ಲವ್ ಸಬ್ಜೆಕ್ಟ್ ಇರುವಂತ ಸಿನಿಮಾ. ಹೀಗಾಗಿಯೇ ಆ ಟೈಟಲ್ ಅನ್ನ ಸಿನಿಮಾಗೆ ಇಡಲಾಗಿದೆ. ಕಥೆ ಮಾಡಿಕೊಂಡಾಗ ಒಂದೇ ಒಂದು ಸಲ ಎಂಬ ಟೈಟಲ್ ಇಡಲಾಗಿತ್ತು. ಆದ್ರೆ ಆಮೇಲೆ ಕಥೆಗೆ ತಕ್ಕಂತೆ ಟೈಟಲ್ ಬದಲಾವಣೆ ಮಾಡಲಾಗಿತ್ತು. ಮನೆಯಲ್ಲಿ ತುಂಬಾ ಫ್ರೀಡಂ ಕೊಟ್ಟರೆ ಏನಾಗುತ್ತೆ, ತೀರಾ ರಿಸ್ಟ್ರಿಕ್ಷನ್ ಇದ್ದಾಗ ಏನಾಗಬಹುದು ಎಂಬುದನ್ನ ತೀರಾ ಅದ್ಭುತವಾಗಿ ಹೆಣೆಯಲಾಗಿದೆ.

ಈ ಮೊದಲು ಜೊತೆಯಾಗಿ ಹಿತವಾಗಿ ಸಿನಿಮಾವನ್ನೇ ಒಂದು ಶಾರ್ಟ್ ಮೂವಿ ಮಾಡಬೇಕು ಎಂದುಕೊಂಡಿದ್ದ ಟೀಂ, ಸಿನಿಮಾದ ಕಥೆ ಸಾಗುತ್ತಾ ಸಾಗುತ್ತಾ ಸಿನಿಮಾವನ್ನೇ ಮಾಡಿಬಿಟ್ಟರು. ಸಿನಿಮಾ ಚೆನ್ನಾಗಿ ಬರಬೇಕು, ಜನಕ್ಕೆ ತೋರಿಸುವಾಗ ಬಹಳ ಮುಖ್ಯವಾಗುತ್ತೆ ಎಂಬ ವಿಚಾರವನ್ನ ತಲೆಯಲ್ಲಿಟ್ಟುಕೊಂಡ ತಂಡ, ಎಷ್ಟೋ ಸೀನ್ ಗಳನ್ನ ರೀಶೂಟ್ ಮಾಡಿದ್ದಾರೆ. ಅಷ್ಟೇ ಅಲ್ಲ ಕಂಪ್ಲೀಟ್ ಬೆಳಗಾವಿಯನ್ನ ಮಲೆನಾಡಿನ ರೀತಿಯಲ್ಲಿ ತೋರಿಸಲಾಗಿದೆ.

ಈ ಸಿನಿಮಾದಲ್ಲಿ ಅಗಸ್ತ್ಯ ನಾಯಕ ನಟನಾಗಿ ಕಾಣಿಸಿಕೊಂಡಿದ್ದು. ಮೂಲತಃ ಬೆಳಗಾವಿಯವರು. ಸ್ಕೂಲ್ ಸಮಯದಲ್ಲಿದ್ದಾಗಿನಿಂದಲೇ ಸಿನಿಮಾದಲ್ಲಿ ನಾನು ನಟಿಸಬೇಕೆಂಬ ಆಸೆ ಅವರಲ್ಲಿತ್ತು. ಆದ್ರೆ ಸಿನಿಮಾಗೆ ಹೋಗೋದಕ್ಕೆ ಮನೆಯಲ್ಲಿ ಸಪೋರ್ಟ್ ಇರಲಿಲ್ಲ. ಆದ್ರೆ ಒಂದೇ ಒಂದು ಅವಕಾಶಕ್ಕೋಸ್ಕರ ಅಗಸ್ತ್ಯ ಅವರು ಸಿನಿಮಾದ ಟೆಕ್ನಿಕಲ್ ವಿಭಾಗದಲ್ಲಿ ಕಲಿಕೆ ಕಂಡುಕೊಂಡರು. ಎಲ್ಲಾ ಶ್ರಮದ ಫಲವಾಗಿ ಈಗ ಒಂದು ಸಿನಿಮಾದ ಹೀರೋ ಆಗಿದ್ದಾರೆ.

ಅಗಸ್ತ್ಯ ಹಾಗೂ ಸುವಾರ್ತಾ ನಾಯಕ ನಾಯಕಿಯಾಗಿದ್ದಾರೆ. ಸದ್ಯ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.ಶ್ರೀ ರತ್ನ ಫಿಲಂ ಕಂಪನಿ ನಿರ್ಮಿಸಿರುವ ಈ ಚೊಚ್ಚಲ ಚಿತ್ರವನ್ನು ಎ ಆರ್ ಕೃಷ್ಣ ನಿರ್ದೇಶಿಸಿದ್ದಾರೆ. ಅಪ್ಪನ ಪಾತ್ರಕ್ಕೆ ಆನಂದ್ ನೀನಾಸಂ ಜೀವ ತುಂಬಿದ್ದು, ಇನ್ನುಳಿದಂತೆ ತಾರಾಗಣದಲ್ಲಿ ಚೇತನ್ ದುರ್ಗಾ, ಬಳ್ಳಾರಿ ಅರ್ಜುನ್, ಸಲೋಮಿ ಡಿಸೋಜ, ಭೂಮಿಕಾ ದೇಶಪಾಂಡೆ, ವಿನಾಯಕ್ ಮುಂತಾದವರು ಇದ್ದಾರೆ.

ಇನ್ನಷ್ಟು ಓದಿರಿ

Scroll to Top