ಮಾರ್ಕ್ ಬಗ್ಗೆ ಮಾತಾಡುವ ಮನಸ್ಸಿನೊಳಗೆ ಮಾತಾಡ್ಬೇಕು…ಮಾರ್ಕ್ ಆಕ್ಷನ್ ಟೀಸರ್ ರಿಲೀಸ್

Picture of Cinibuzz

Cinibuzz

Bureau Report

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಭತ್ತಳಿಕೆಯಿಂದ ಬರ್ತಿರುವ ಬಹು ನಿರೀಕ್ಷಿತ ಮಾರ್ಕ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಭರ್ಜರಿ ಆಕ್ಷನ್ಸ್ ಮೂಲಕ ಕಿಚ್ಚ ಖದರ್ ತೋರಿಸಿದ್ದು, ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋ ಫಿಕ್ಸ್ ಅಂತಾ ಕಮೆಂಟ್ ಮಾಡುತ್ತಿದ್ದಾರೆ.

ಸೈಕೋ ಸೈತಾನ್ ಹಾಡನ್ನ ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ಅದಕ್ಕೂ ಮೊದಲು ಬಂದ ಟೈಟಲ್ ಟೀಸರ್ ಅನ್ನೂ ಇಷ್ಟಪಟ್ಟಿದ್ದಾರೆ. ಟೀಸರ್ ಹೇಗೆ ಇರುತ್ತದೆ ಎಂಬ ನಿರೀಕ್ಷೆ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಪವರ್ ಪ್ಯಾಕ್ಡ್ ಆಕ್ಷನ್ ಟೀಸರ್ ನೋಡಿ ಕಿಚ್ಚನ ಬಳಗ ಸಂತಸಗೊಂಡಿದೆ.

ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದು ಸುದೀಪ್ ಮತ್ತೊಮ್ಮೆ ಪೊಲೀಸ್ ಆಫೀಸರ್ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಮ್ಯಾಕ್ಸ್ ಚಿತ್ರದಲ್ಲಿ ವಿಜಯ್ ಕಾರ್ತಿಕೇಯನ್ ಅವರು
ಒಂದು ರಾತ್ರಿಯಲ್ಲಿ ನಡೆಯುವ ಕಥೆಯನ್ನು ಬಹಳ ಸೊಗಸಾಗಿ ತೆರೆಗೆ ತಂದಿದ್ದರು. ಈ ಬಾರಿ ಕೂಡ ಅಂಥದ್ದೇ ಪ್ರಯತ್ನ ನಡೀತಿದೆ. ಮತ್ತಷ್ಟು ರೋಚಕವಾಗಿ ಕಥೆ ಹೇಳಲು ನಿರ್ದೇಶಕರು ಮುಂದಾಗಿದ್ದಾರೆ.

ಶೇಖರ್ ಚಂದ್ರ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ಚಿತ್ರದಲ್ಲಿ ಅಜಯ್ ಮಾರ್ಕೆಂಡೆ ಪಾತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೆ. ಪಾತ್ರಕ್ಕಾಗಿ ಹೇರ್‌ಸ್ಟೈಲ್ ಬದಲಿಸಿಕೊಂಡು ದರ್ಶನ ಕೊಟ್ಟಿದ್ದಾರೆ.

ಕ್ರಿಸ್ಮಸ್ ಹಬ್ಬಕ್ಕೆ ಮಾರ್ಕ್ ಚಿತ್ರ ರಿಲೀಸ್ ಆಗುತ್ತಿದೆ. ಕಳೆದ ವರ್ಷ 2024 ರಲ್ಲಿ ಮ್ಯಾಕ್ಸ್ ಚಿತ್ರ ಡಿಸೆಂಬರ್ 25ಕ್ಕೇನೆ ಬಂದಿತ್ತು. ಅದೇ ಡೇಟ್‌ಗೇನೆ ಮಾರ್ಕ್ ಚಿತ್ರದ ಆಗುತ್ತಿದೆ. ಸತ್ಯಜ್ಯೋತಿ ಫಿಲ್ಮ್ಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ಗಳು ಜೊತೆಯಾಗಿ ಈ ಸಿನಿಮಾವನ್ನು ನಿರ್ಮಿಸುತ್ತಿವೆ.

ಇನ್ನಷ್ಟು ಓದಿರಿ

Scroll to Top