ಸಮಾಜ ಸೇವೆ, ರಾಜಕಾರಣ, ವಾಣಿಜ್ಯ ವ್ಯವಹಾರಗಳ ಜೊತೆಗೆ ಸಿನಿಮಾ ಕ್ಷೇತ್ರದಲ್ಲೂ ತೊಡಗಿಸಿಕೊಂಡಿರುವ ಯುವ ಪ್ರತಿಭೆ ಅಭಿ ರಾಣವ್. ದುನಿಯಾ ವಿಜಯ್ ಅವರ ಜಾಕ್ಸನ್ ಚಿತ್ರದಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದ್ದವರು ಅಭಿ. ಪೂರ್ಣ ಪ್ರಮಾಣದ ಹೀರೋ ಆವಿ ಒನ್ ಕ್ರೋರ್, ಯಾಕೋ ಬೇಜಾರ್ ಸಿನಿಮಾಗಳಲ್ಲೂ ನಟಿಸಿದ್ದಾರೆ. ವೆಸ್ಲಿ ಬ್ರೌನ್ ನಿರ್ದೇಶನದ ಬೆನ್ಜ್ ಲವ್ ಸ್ಟೋರಿ ಕೂಡಾ ನಿರ್ಮಾಣ ಹಂತದಲ್ಲಿದೆ…
ಇವರ ತಂದೆ ಹೊಸಕೋಟೆಯಲ್ಲಿ ಹೆಸರಾಂತ ರಾಜಕಾರಣಿ. ತಮ್ಮದೇ ಉದ್ಯಮ ಹೊಂದಿದ್ದರೂ ಅಭಿ ಅವರಿಗೆ ಸಿನಿಮಾ ಕ್ಷೇತ್ರದಲ್ಲಿ ಬೆಳೆದು ನಿಲ್ಲಬೇಕು ಎನ್ನುವ ಅದಮ್ಯ ಬಯಕೆ ಇದೆ. ಇಂದು ಅವರ ಹುಟ್ಟಿದ ದಿನ. ಹೊಸಕೋಟೆ ಸೇರಿದಂತೆ ಅಭಿ ಅವರ ಆತ್ಮೀಯರು, ಅಭಿಮಾನಿಗಳೆಲ್ಲಾ ಸೇರಿ ಈ ಹುಟ್ಟುಹಬ್ಬವನ್ನು ಹಬ್ಬದಂತೆ ಆಚರಿಸಿದ್ದಾರೆ. ಜಾಕ್ಸನ್ ಚಿತ್ರದ ಬರ್ತಡೇ ಸಾಂಗ್ ನಲ್ಲಿ ಇದೇ ಅಭಿ ಅಭಿನಯಿಸಿದ್ದಾರೆ. ಕರ್ನಾಟಕದ ಯಾವುದೇ ಮೂಲೆಯಲ್ಲಿ ಯಾರದ್ದೇ ಹುಟ್ಟುಹಬ್ಬ ಸಮಾರಂಭದಲ್ಲಿ ಆ ಹಾಡು ಕೇಳಿಬರುತ್ತದೆ. ಇವತ್ತು ಸ್ವತಃ ಅಭಿಹುಟ್ಟಿದ ದಿನದ ಸಂಭ್ರದಲ್ಲಿದ್ದಾರೆ.
ಸದಾ ಸಮಾಜದ ತಳವರ್ಗದ ಜನರ ಕಷ್ಟಗಳಿಗೆ ಮಿಡಿಯುತ್ತಾ ಬಂದಿರುವ, ಅದರ ಜೊತೆಜೊತೆಗೇ ಕಲೆಯ ಬಗ್ಗೆ ಒಲವಿರಿಸಿಕೊಂಡಿರುವ ಅಭಿ ರಾಣವ್ ಅವರ ಎಲ್ಲ ಪ್ರಯತ್ನಗಳೂ ಸಫಲವಾಗಲಿ.
Leave a Reply
You must be logged in to post a comment.