ಕಾಲಿವುಡ್ ನಟ ಕಾರ್ತಿಕ್ ಅಭಿಮಾನಿಗಳಿಗೆ ಬಿಗ್ ಶಾಕ್ ಸುದ್ದಿ ಕಾದಿದೆ. ತಮ್ಮ ಬಹುಮುಖ ಪ್ರತಿಭೆ ಮೂಲಕ ಸಿನಿರಸಿಕರ ಮನಗೆದ್ದಿರುವ ಕಾರ್ತಿಕ್ ಆರೋಗ್ಯದಲ್ಲಿ ಏರುಪೇರಾಗಿದೆ. ಸದಾ ಎಲ್ಲರನ್ನೂ ನಗಿಸುತ್ತಿದ್ದ ಹ್ಯಾಸ ದಿಗ್ಗಜ, ಕಾಲಿವುಡ್ನ ನವರಸ ನಾಯಗನ್ ಅಂತಲೇ ಫೇಮಸ್ ಆಗಿರುವ ಕಾರ್ತಿಕ್ ತಮಿಳುನಾಡಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮನೆಯಲ್ಲೇ ಇದ್ದ ಕಾರ್ತಿಕ್ ಅವರಿಗೆ ಉಸಿರಾಟದಲ್ಲಿ ಏರುಪೇರಾಗಿದೆ. ಕೂಡಲೇ ಅವರನ್ನ ಚೆನ್ನೈನಲ್ಲಿರುವ ಮಲಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಸಿರಾಟ ತೊಂದರೆ ಹೆಚ್ಚಾದ ಕಾರಣ ಐಸಿಯುವಿನಲ್ಲಿ ಅಡ್ಮಿಂಟ್ ಮಾಡಲಾಗಿದೆ. ಕೊರೊನಾ ಟೆಸ್ಟ್ ಕೂಡ ಮಾಡಿದ್ದು, ಕೋವಿಡ್-19 ವರದಿಯಲ್ಲಿ ನೆಗೆಟಿವ್ ಇದೆ. ಕಾರ್ತಿಕ್ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ಇದೀಗ ಕೊರೊನಾ ನೆಗೆಟಿವ್ ಇರುವುದು ಗೊತ್ತಾಗಿರುವುದರಿಂದ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.
ತುಂಬಾ ದಿನಗಳ ನಂತರ ಕಾರ್ತಿಕ್ ಪಬ್ಲಿಕ್ ಪ್ಲೇಸ್ನಲ್ಲಿ ಕಾಣಿಸಿಕೊಂಡಿದ್ದರು. ತಮಿಳುನಾಡು ಎಲೆಕ್ಷನ್ ವಿಚಾರವಾಗಿ ನಿನ್ನೆ ಸುದ್ದಿಗೋಷ್ಠಿಯಲ್ಲಿ ಕಾಣಿಸಿದ್ದರು. ಜೊತೆಗೆ ಎಲೆಕ್ಷನ್ ಕ್ಯಾಂಪೇನ್ ಪ್ರಚಾರವನ್ನು ಮಾಡಿದ್ದರು. ಇದಾದ ನಂತರ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಉಸಿರಾಟದ ತೊಂದರೆಯೂ ಆಗಿತ್ತು. ಹೀಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯದ ಮಟ್ಟಿಗೆ ಯಾವುದೇ ತೊಂದರೆ ಇಲ್ಲ ಅಂತ ವೈದ್ಯರು ಹೇಳಿದ್ದಾರೆ.
ತಮಿಳು ಚಿತ್ರರಂಗದ ದಿಗ್ಗಜ, ಅಂದಗಾಲತ್ತಿಲ್ ಹೀರೋ ಮುತ್ತುರಾಮನ್ ಅವರ ಪುತ್ರ ಈ ಕಾರ್ತಿಕ್. ಸರಿಸುಮಾರು ಮೂರು ದಶಕಗಳ ಹಿಂದೆ ಹೀರೋ ಆಗಿ ಚಿತ್ರರಂಗಕ್ಕೆ ಪರಿಚಯಗೊಂಡ ಕಾರ್ತಿಕ್ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಕಾರ್ತಿಕ್ ಪುತ್ರ ಗೌತಮ್ ಕೂಡಾ ಈಗ ನಟನೆಗೆ ಇಳಿದಿದ್ದಾರೆ. ಈ ನಡುವೆ ಹದಿನೈದು ವರ್ಷಗಳ ಮುಂಚೆ ಕಾರ್ತಿಕ್ ಗೆ ಕ್ಯಾನ್ಸರ್ ಕಾಯಿಲೆ ಇನ್ನಿಲ್ಲದಂತೆ ಬಾಧಿಸಿತ್ತು. ವರ್ಷಗಟ್ಟಲೆ ಚಿತ್ರರಂಗದಿಂದ ದೂರ ಉಳಿದಿದ್ದ ಕಾರ್ತಿಕ್ ಈಗ ಮತ್ತೊಂದು ಇನ್ನಿಂಗ್ಸ್ ಶುರು ಮಾಡಿದ್ದಾರೆ. ಇತ್ತೀಚೆಗೆ ತೆರೆಗೆ ಬಂದ ಮಿಸ್ಟರ್ ಚಂದ್ರಮೌಳಿಯಲ್ಲಿ ಕಾರ್ತಿಕ್ ಅಭಿನಯಕ್ಕೆ ಎಂತವರೂ ಮನಸೋಲದೇ ಇರಲು ಸಾಧ್ಯವಿಲ್ಲ. ಹಿಂದೆ ಸಾವಿನ ಮನೆಯ ಕದ ತಟ್ಟಿ ಬಂದಿದ್ದ ಕಾರ್ತಿಕ್ ಈಗ ಮತ್ತೊಮ್ಮೆ ಅನಾರೋಗ್ಯಕ್ಕೀಡಾಗಿದ್ದಾರೆ. ಆದಷ್ಟು ಬೇಗ ಚೇತರಿಸಿಕೊಳ್ಳಲಿ.
No Comment! Be the first one.