ಕಲಿಯುಗದ ಕರ್ಣ ಎಂದೇ ಖ್ಯಾತರಾಗಿದ್ದ ಅಂಬರೀಶ್ ಅವರ ಋಣ ಒಂದಲ್ಲಾ ಒಂದು ರೀತಿಯಲ್ಲಿ ಚಿತ್ರರಂಗದ ಎಲ್ಲರ ಮೇಲೂ ಇದೆ. ಯಾರಿಗೇ ಆದರೂ ಸಹಾಯಕ್ಕಾಗಿ ಸದಾ ಮುಂದಿರುತ್ತಿದ್ದ ಅಂಬಿ ಅನೇಕರ ಗೆಲುವಿಗೆ ಪ್ರೇರಕ ಶಕ್ತಿಯಾಗಿದ್ದವರು. ಕನ್ನಡ ಚಿತ್ರರಂಗದ ಖ್ಯಾತ ಪ್ರಚಾರಕರ್ತರಾಗಿದ್ದ ಡಿ.ವಿ ಸುಧೀಂದ್ರ ಅವರನ್ನು ‘ಒಲವಿನ ಉಡುಗೊರೆ’ ಚಿತ್ರದ ಮೂಲಕ ನಿರ್ಮಾಪಕರನ್ನಾಗಿಸಿದ್ದೂ ಕೂಡಾ ಅಂಬರೀಶ್ ಅವರೇ!
ಅಂಬಿ ನಿರ್ಗಮಿಸಿದ ದುಃಖದಲ್ಲಿರುವ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಅದನ್ನು ನೆನಪಿಸಿಕೊಂಡೇ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ರಾಘವೇಂದ್ರ ಚಿತ್ರವಾಣಿಯ ಜನಕ ಡಿ.ವಿ ಸುಧೀಂದ್ರ ರವರ ನಿರ್ಮಾಣದ ‘ಒಲವಿನ ಉಡುಗೊರೆ’ ಚಿತ್ರದ ಮೂಲಕ ಸುಧೀಂದ್ರ ರವರನ್ನು ನಿರ್ಮಾಪಕನ ಪಟ್ಟಕ್ಕೆ ಕೂರಿಸಿದ ಕಲಿಯುಗದ ಕರ್ಣ ಕನ್ನಡ ಚಿತ್ರರಂಗದ ಹಿರಿಯಣ್ಣ ರೆಬಲ್ ಸ್ಟಾರ್ ಅಂಬರೀಶ್ ರವರ ಅಗಲಿಕೆಯಿಂದ ನಮ್ಮ ಕುಟುಂಬದ ಹಾಗೂ ನಮ್ಮೆಲ್ಲರ ಮನಸ್ಸು ಆಘಾತದಿಂದ ದುಃಖಿತವಾಗಿದೆ ಎಂದು ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಪರವಾಗಿ ಸುಧೀಂದ್ರ ವೆಂಕಟೇಶ್, ವಾಸು ಮತ್ತು ಸನೀಲ್ ಸಹೋದರರು ಅಂಬರೀಶ್ ಅವರಿಗೆ ಭಕ್ತಿ ಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಡಿ.ವಿ ಸುಧೀಂದ್ರ ಅಂಬರೀಶ್ ಅವರಿಗೆ ಆಪ್ತರಾಗಿದ್ದವರು. ಅವರು ನಿಧನ ಹೊಂದಿದ ನಂತರ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಸಾರಥ್ಯ ವಹಿಸಿಕೊಂಡಿದ್ದವರು ಸುಧೀಂದ್ರ ವೆಂಕಟೇಶ್. ಅವರೂ ಕೂಡಾ ಅಂಬರೀಶ್ರೊಂದಿಗೆ ನಿಕಟ ಸಂಪರ್ಕ ಹೊಂದಿದ್ದವರು. ಸುಧೀಂದ್ರ ಪಾಲಿಗೂ ಅಂಬಿ ಮಾರ್ಗದರ್ಶಕರಾಗಿದ್ದರು. ರಾಘವೇಂದ್ರ ಚಿತ್ರವಾಣಿಒ ಎಂಬ ಸುಧೀಮದ್ರ ಅವರ ಕನಸನ್ನು ಸಮರ್ಥವಾಗಿ ಮುಂದುವರೆಸುತ್ತಿರೋ ವೆಂಕಟೇಶ್ ಅವರ ಬಗ್ಗೆ ಅಂಬಿ ಮೆಚ್ಚುಗೆಯನ್ನೂ ಹೊಂದಿದ್ದರು.
#
No Comment! Be the first one.