ನಿರ್ದೇಶಕ ಪ್ರೇಮ್ ವಿಲನ್ ಚಿತ್ರಕ್ಕೆ ನಾಯಕಿಯಾಗಿ ಪರದೇಸಿ ನಟಿ ಆಮಿ ಜಾಕ್ಸನ್ಳನ್ನು ಕರೆತಂದಿದ್ದು, ಈ ಚಿತ್ರದ ನಾಯಕಿ ಲಂಡನ್ ಮೂಲದೋಳೆಂದು ಬೇಕಾದಷ್ಟು ಪ್ರಚಾರ ಗಿಟ್ಟಿಸಿಕೊಂಡಿದ್ದೆಲ್ಲ ಹಳೇ ವಿಚಾರ. ಆದರೆ ವಿಲನ್ನಂಥಾ ದೊಡ್ಡ ಚಿತ್ರದಲ್ಲಿ ನಟಿಸಿ, ಅದು ಬಿಡುಯಗಡೆಯಾದರೂ ಕೂಡಾ ಆಮಿ ಜಾಕ್ಸನ್ ಎಂಬ ಅವಿವೇಕಿಗೆ ತಾನು ಯಾವ ಭಾಷೆಯ ಚಿತ್ರದಲ್ಲಿ ನಟಿಸಿದ್ದೆಂಬುದೇ ಗೊತ್ತಿಲ್ಲ!
ವಿಲನ್ ಚಿತ್ರ ತೆರೆಕಾಣುತ್ತಿರೋ ವಿಷಯವೊಮದನ್ನು ಅರ್ಥ ಮಾಡಿಕೊಂಡಿರುವ ಲಂಡನ್ ರಾಣಿ ಆಮಿ ಟ್ವಟರ್ ಮೂಲಕ ಕಾಟಾಚಾರಕ್ಕೊಂದು ವಿಶ್ ಮಾಡಿದ್ದಾಳೆ. ತಾನೇ ನಟಿಸಿದ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ಹಾಜರಿರೋ ಸೌಜನ್ಯವೂ ಇಲ್ಲದ ಈಕೆ ಲಂಡನ್ನಲ್ಲಿ ಕೂತೇ ವಿಶ್ ಮಾಡಿ ಅದರಲ್ಲಿಯೂ ಮಹಾ ಯಡವಟ್ಟೊಂದನನು ಮಾಡಿಕೊಂಡಿದ್ದಾಳೆ. ತನಗೆ ಕಾಲಿವುಡ್ ಚಿತ್ರದಲ್ಲಿ ನಟಿಸಲು ಅವಕಾಶ ಮಾಡಿಕೊಟ್ಟ ನಿರ್ದೇಶಕ ಪ್ರೇಮ್ಗೆ ಆಮಿ ಧನ್ಯವಾದ ಸಮರ್ಪಿಸಿದ್ದಾಳೆ!
`ಈವತ್ತು ವಿಲನ್ ದಿನ. ಇಡೀ ತಂಡ ಪ್ರೀತಿಯಿಂದ ನಿರ್ಮಿಸಿರೋ ದಿ ವಿಲನ್ ಚಿತ್ರ ಇಂದು ತೆರೆ ಕಾಣುತ್ತಿದೆ. ಈ ಚಿತ್ರದ ಮೂಲಕ ಕಾಲಿವುಡ್ಡಲ್ಲಿ ನಟಿಸೋ ಅವಕಾಶ ಮಾಡಿಕೊಟ್ಟ ನಿರ್ದೇಶಕ ಪ್ರೇಮ್ಜೀಗೆ ಧನ್ಯವಾದ!’ ಅಂತ ಆಮಿ ಬರೆದುಕೊಂಡಿದ್ದಾಳೆ. ಈಕೆಗೆ ತಾನು ನಟಿಸಿದ್ದು ಸ್ಯಾಂಡಲ್ವುಡ್ ಚಿತ್ರದಲ್ಲಿ, ಕಾಲಿವುಡ್ ಚಿತ್ರದಲ್ಲಲ್ಲ ಎಂಬ ಕನಿಷ್ಠ ಜ್ಞಾನವೂ ಇಲ್ಲ ಎಂದರೆ ಅದಕ್ಕೇನನ್ನಬೇಕೆಂಬುದನ್ನು ಗಿಮಿಕ್ ಪ್ರೇಮ್ ಅವರೇ ಹೇಳಬೇಕು.
ಅಷ್ಟಕ್ಕೂ ವಿಲನ್ ಚಿತ್ರದ ಈ ಪಾತ್ರಕ್ಕೆ ಲಂಡನ್ ನಟಿ ಆಮಿ ಜಾಕ್ಷನ್ಳನ್ನು ಕರೆತರುವ ಯಾವ ದರ್ದೂ ಇರಲಿಲ್ಲ. ತಾನು ಲಂಡನ್ ನಟಿಯನ್ನು ಹೀರೋಯಿನ್ ಮಾಡಿದ್ದೇನೆ ಅಂತ ಅಲ್ಲೊಂದಷ್ಟು ಪ್ರಚಾರ ಗಿಟ್ಟಿಸೋ ದರ್ದು ಪ್ರೇಮ್ಗಿತ್ತು. ಆದರೆ ಅದ್ಯಾವುದೂ ವರ್ಕೌಟ್ ಆಗಿಲ್ಲ. ಆಮಿ ನಟನೆಯೂ ಅಷ್ಟಕ್ಕಷ್ಟೇ ಎಂಬಂತಿದೆ. ಇಂಥಾ ನಟಿಯರನ್ನು ಕರೆತಂದು ಹೀಗೆಲ್ಲ ಅವಮಾನ ಅನುಭವಿಸುವ ದುರ್ಗತಿ ಕನ್ನಡದ ಕೆಲ ನಿರ್ದೇಶಕರಿಗೆ ಅದ್ಯಾಕೆ ಬಂದಿದೆಯೋ…
cinibuzzಅನ್ನು ಇನಸ್ ಸ್ಟಾಗ್ರಾಮ್ನಲ್ಲಿ ಫಾಲೋ ಮಾಡಿ
https://www.instagram.com/cinibuzzsandalwood #
No Comment! Be the first one.