ಲೂಸಿಯಾ ಸಿನಿಮಾದ ಮೂಲಕ ಸಂಗೀತದಲ್ಲಿ ಮ್ಯಾಜಿಕ್ ಮಾಡಿದವರು ಪೂರ್ಣಚಂದ್ರ ತೇಜಸ್ವಿ. ಈಗ ಜನತಾ ಟಾಕೀಸ್ ಲಾಂಛನದಲ್ಲಿ ಎ.ವಿ.ವೇಣುಗೋಪಾಲ್ ಅಡಕಿಮಾರನಹಳ್ಳಿ ಅವರು ನಿರ್ಮಿಸಿರುವ, ಸೂನಗಹಳ್ಳಿ ರಾಜು ನಿರ್ದೇಶಿಸಿರುವ ಆನೆಬಲ ಚಿತ್ರದ ಹಾಡುಗಳು ಸಖತ್ ಹಿಟ್ ಆಗಿವೆ. ಇದೇ ವಾರ ಸಿನಿಮಾ ಕೂಡ ತೆರೆಗೆ ಬರುತ್ತಿದೆ. ಈ ಸಂದರ್ಭದಲ್ಲಿ ಪೂರ್ಣಚಂದ್ರ ಏನಂತಾರೆ?
ಮಂಡ್ಯ ಅಂದಾಕ್ಷಣ ನೆನಪಾಗೋದು ಅಲ್ಲಿನ ಹಳ್ಳಿಗಳ ಭಾಷೆಯ ಸೊಗಡು. ಇದೇ ಈ ಸಿನಿಮಾದ ವಿಶೇಷತೆ. ನಮಗೂ ಸಹ ಇಲ್ಲಿನ ಪದಗಳು, ನುಡಿಗಟ್ಟುಗಳ ಪರಿಚಯವಾಯಿತು. ಮಂಡ್ಯದ ವಿಶೇಷತೆಗಳನ್ನ ಹಾಗೂ ಭಾಷೆಯನ್ನ ಎಷ್ಟು ಸಾಧ್ಯವೋ ಅಷ್ಟೂ ಸಿನಿಮಾದಲ್ಲಿ ಹಾಗೂ ಹಾಡುಗಳಲ್ಲಿ ಬಳಸಿಕೊಂಡಿದ್ದೇವೆ. ರಾಗಿ ಮುದ್ದೆಗೆ ಸಂಬಂಧಿಸಿದಂತೆ ಒಂದು ಹಾಡು ಇದೆ. ಮಳವಳ್ಳಿ ಜಾತ್ರೆಲಿ ಎಂಬ ಹಾಡನ್ನು ನಿರ್ದೇಶಕರಾದ ರಾಜು ಅವರೇ ಬರೆದಿದ್ದಾರೆ. ನಮ್ಮ ಕನ್ನಡ ಸಿನಿಮಾಗಳಲ್ಲಿ ಇದುವರೆಗೂ ಕೇಳಿಲ್ಲದಂತಹ ಹೊಸಹೊಸ ಪದಗಳನ್ನ ಬಳಸಿದ್ದೇವೆ. ಈ ರೀತಿಯ ಪದಗಳು ಅಥವಾ ಈ ರೀತಿಯ ವಿಶೇಷ ಅಭಿರುಚಿ ಇರುವಂತಹ ನಿರ್ದೇಶಕರೊಂದಿಗೆ ಕೆಲಸ ಮಾಡಿರೋದು ಬಹಳ ಖುಷಿ ನೀಡಿದೆ.
ಈ ಚಿತ್ರವನ್ನು ನೋಡಿದವರಿಗೂ ಸಹ ಖುಷಿ ನೀಡಲಿದೆ. ಚೆಂದದ ಭಾವನೆ ಎಂಬ ಮೆಲೋಡಿ ಹಾಡೊಂದನ್ನ ಯೋಗರಾಜ್ ಭಟ್ ಅವರು ಬರೆದಿದ್ದಾರೆ. ಮಳವಳ್ಳಿಯ ಪುಟ್ಟಕ್ಕ ಎಂಬ ಜನಪದ ಕಲಾವಿದರೊಬ್ಬರು ಸೋಬಾನೆ ಪದವನ್ನ ಹಾಡಿದ್ದಾರೆ. ಇನ್ನೊಂದು ಈ ಚಿತ್ರದ ವಿಶೇಷತೆ ಎಂದರೆ ಈ ಚಿತ್ರದಲ್ಲಿ ಸಣ್ಣಪುಟ್ಟ ಪಾತ್ರಗಳಿಂದ ಹಿಡಿದು ಹೀರೋ ಹೀರೋಯಿನ್ ಎಲ್ಲರೂ ಹೊಸ ಪ್ರತಿಭೆಗಳು. ಎಲ್ಲರೂ ಬಹಳ ನ್ಯಾಚುರಲ್ ಆಗಿ ನಟಿಸಿದ್ದಾರೆ. ಒಟ್ಟಾರೆಯಾಗಿ ಚಿತ್ರ ಖುಷಿಯಾದ ಜರ್ನಿ ಅಂತ ಹೇಳಬಹುದು. ಒಳ್ಳೆಯ ಅನುಮಭವ ನೀಡಿದ ಸಿನಿಮಾ. ಹೀರೋ ಸಾಗರ್ ಅವರು ಈ ಚಿತ್ರದ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಸ್ವಲ್ಪಮಟ್ಟಿಗೆ ಹೀರೋಗಳ ಕೊರತೆಯನ್ನ ನೀಗಿಸಲಿದ್ದಾರೆ ಎಂದು ಭಾವಿಸಿದ್ದೇನೆ. ರಕ್ಷಿತ ಅವರು ಯಾವುದೇ ಸಿನಿಮಾ ಬ್ಯಾಗ್ರೌಂಡ್ನಿಂದ ಬಂದವರಲ್ಲ. ಆದರೂ ಬಹಳ ಅದ್ಭುತವಾಗಿ ನಟಿಸಿದ್ದಾರೆ. ೨೮ನೇ ತಾರೀಖು ಚಿತ್ರ ತೆರೆಕಾಣಲಿದೆ. ಚಿತ್ರ ನೋಡಿ ಖಂಡಿತ ನಿಮಗೆ ಇಷ್ಟವಾಗಲಿದೆ.
No Comment! Be the first one.