ಸರಿಸುಮಾರು 95 ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ಕಲಾವಿದೆ, ನಿರ್ಮಾಪಕಿ, ಸದ್ಯ ನಿರ್ಮಾಪಕರ ಸಂಘದ ಆಡಳಿತಮಂಡಳಿ ಸದಸ್ಯೆಯೂ ಆಗಿರುವ ಅನಿತಾ ರಾಣಿ ಅವರ ಪರ್ಸನ್ನು ಕಿಡಿಗೇಡಿ ಕಳ್ಳನೊಬ್ಬ ಎಗರಿಸಿದ್ದಾನೆ.
ಬೆಂಗಳೂರಿನ ಸುಲ್ತಾನ್ ಪಾಳ್ಯದಲ್ಲಿ ವಾಸವಿರುವ ಅನಿತಾ ರಾಣಿ ಅವರು ಆರ್.ಟಿ.ನಗರದ ಬ್ಯಾಂಕ್ ಆಫ್ ಇಂಡಿಯಾದಿಂದ ಹೊರಬಂದು ಕಾರು ತೆರೆಯೋ ಹೊತ್ತಿಗೆ ಆ ಕಡೆಯಿಂದ ಬಂದ ಪಲ್ಸರ್ ಬೈಕ್ ಸವಾರನೊಬ್ಬ ವಿಸಿಟಿಂಗ್ ಕಾರ್ಡ್ ತೋರಿ ಅಡ್ರೆಸ್ ಕೇಳಿದ್ದಾನೆ. `ಇದೇನಪ್ಪಾ ಪೀಣ್ಯದಲ್ಲಿರುವ ವಿಳಾಸವನ್ನ ಇಲ್ಲಿ ಕೇಳುತ್ತಿದ್ದೀಯ?’ ಎಂದು ಪ್ರಶ್ನಿಸೋ ಹೊತ್ತಿಗೆ ಕಾರಿನ ಇನ್ನೊಂದು ಬಾಗಿಲು ತೆಗೆದ ಖದೀಮ ಮೇಡಮ್ ಅವರ ಪರ್ಸು ತೆಗೆದುಕೊಂಡು ಪರಾರಿಯಾಗಿದ್ದಾನೆ.
ಯುಗಾದಿ, ಮಹಾರಾಜ, ತವರಿಗೆ ಬಾ ತಂಗಿಯಿಂದ ಹಿಡಿದು ಬಾಮಾ ಹರೀಶ್ ಅವರ ಮೆಜೆಸ್ಟಿಕ್ ಎಕ್ಸ್ಪ್ರೆಸ್, ಸಾಯಿ ಪ್ರಕಾಶ್ ಅವರ ಗರ್ಭದ ಗುಡಿ ತನಕ ಹತ್ತಿರತ್ತಿರ ತೊಂಭತ್ತೈದು ಸಿನಿಮಾಗಳು, ಧಾರಾವಾಹಿಗಳಲ್ಲಿ ನಟಿಸಿರುವ ಅನಿತಾ ರಾಣಿ ಈ ಹಿಂದೆ ಮಾನಸಾ ಎಂಬ ಕಲಾತ್ಮಕ ಸಿನಿಮಾವನ್ನು ನಿರ್ಮಿಸಿ ನಟಿಸಿದ್ದರು.
ಕಳ್ಳತನವಾಗಿರುವ ಪರ್ಸಿನಲ್ಲಿ ಹೆಚ್ಚು ಹಣವಿರಲಿಲ್ಲವಾದರೂ ಅನಿತಾ ರಾಣಿಯವರ ಎ.ಟಿ.ಎಂ ಕಾರ್ಡುಗಳು, ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ ಇತರೆ ಸಂಘ ಸಂಸ್ಥೆಗಳ ಮೆಂಬರ್ಶಿಪ್ ಕಾರ್ಡುಗಳೆಲ್ಲಾ ಮಿಸ್ ಆಗಿವೆಯಂತೆ. ಇನ್ನು ಪರ್ಸ್ ಕದ್ದ ಕಳ್ಳರು ಹೇಗಿದ್ದರು, ಅವರ ಚಹರೆ, ಅವರ ಬೈಕಿನ ಬಣ್ಣ ಕುರಿತಂತೆ ಇನ್ನಿತರೆ ಸವಿವರ ವಿಚಾರಗಳು ಕನ್ನಡದ ನ್ಯೂಸ್ ಚಾನೆಲ್ ಗಳಲ್ಲಿ ಪ್ರಸಾರವಾಗಹುದು. ನಿರೀಕ್ಷಿಸಿ!
#
No Comment! Be the first one.