ತಮ್ಮ ಎರಡನೇ ಮಗ ಪ್ರಣಾಮ್ ಹೀರೋ ಆಗಿರೋ ಕುಮಾರಿ೨೧ ಎಫ್ ಚಿತ್ರದ ಪ್ರೀಮಿಯರ್ ಶೋ ನಡೆದ ಕ್ಷಣವೇ ಡೈನಾಮಿಕ್ ಸ್ಟಾರ್ ದೇವರಾಜ್ ಬೇಸರಗೊಂಡಿದ್ದಾರೆ. ಅದಕ್ಕೆ ಕಾರಣವಾಗಿರೋದು ನಟ ಚಿರಂಜೀವಿ ಸರ್ಜಾ ಪಟಾಲಮ್ಮಿನ ದಾಂಧಲೆ!
ನೆನ್ನೆ ರಾತ್ರಿ ನಗರದ ಓರಾಯನ್ ಮಾಲ್ನ ಪಿವಿಆರ್ನಲ್ಲಿ ಕುಮಾರಿ ಚಿತ್ರದ ಪ್ರೀಮಿಯರ್ ಶೋ ನಡೆದಿತ್ತು. ಇದಕ್ಕೆ ಸೆಲೆಬ್ರಿಟಿಗಳು, ಮಾಧ್ಯಮ ಮಂದಿಯೆಲ್ಲ ಕಿಕ್ಕಿರಿದು ಸೇರಿದ್ದರು. ಆದರೆ ಓರಾಯನ್ ಮಾಲಿನ ಪಿವಿಆರ್ನಲ್ಲಿ ಒಂದು ಶೋಗೆ ನಿಗಧಿಯಾಗಿರೋ ಸೀಟಿಗಿಂತ ಒಬ್ಬರೇ ಹೆಚ್ಚಾದರೂ ಹೊರ ಕಳಿಸಲಾಗುತ್ತದೆ. ಆದರೆ ಸರ್ಜಾ ಡ್ರೈವರನ ಪಟಾಲಮ್ಮು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಈ ಶೋಗೆ ಜನ ಸೇರಿಕೊಂಡಿದ್ದರು.
ಇದನ್ನು ಗಮನಿಸಿದ ಪಿವಿಆರ್ ವ್ಯವಸ್ಥಾಪಕರು ಇಂಟರ್ವಲ್ ನಂತರ ಹೆಚ್ಚಿದ್ದ ಮಂದಿಯನ್ನು ಏಕಾಏಕಿ ಹೊರ ದಬ್ಬಿದ್ದರು. ಇದರ ವಿರುದ್ಧ ಚಿರಂಜೀವಿ ಸರ್ಜಾ ಡ್ರೈವರ್ ತನ್ನ ಹಿಂಬಾಲಕರೊಂದಿಗೆ ಸಿಡಿದೆದ್ದಿದ್ದಾನೆ. ಪಿವಿಆರ್ ಸ್ಕ್ರೀನು ಹರಿದು ಹಾಕೋದಾಗಿ ಅರಚಿಕೊಂಡಿದ್ದಾನೆ. ದೇವರಾಜ್ ತಮಗೆಲ್ಲ ಅವಮಾನ ಮಾಡಿದ್ದಾರೆ ಅಂತೆಲ್ಲ ಕೂಗಾಡಿ ರಂಪ ಎಬ್ಬಿಸಿದ್ದಾನೆ. ಇದರಿಂದ ಸ್ವಲ್ಪ ಕಾಲ ಶೋ ಕೂಡಾ ಸ್ಥಗಿತಗೊಂಡಿತ್ತು.
ನಿಜ, ಇಂಥಾದ್ದಾದಾಗ ಕಸಿವಿಸಿಯಾಗುತ್ತದೆ. ಆದರೆ ದೇವರಾಜ್ ಅವರು ಹೇಳಿ ಕೇಳಿ ಹಿರಿಯ ನಟ. ಅಂಥವರ ಮಗನ ಚಿತ್ರ ಪ್ರೀಮಿಯರ್ ಶೋ ಅಂದ ಮೇಲೆ ಅವರ ಅಂದಾಜು ಮೀರಿ ಜನ ಸೇರಿದ್ದಾರೆ. ಆದರೆ ಪಿವಿಆರ್ ಮಂದಿ ನಿಯಮಾನುಸಾರ ಹೆಚ್ಚಿನವರನ್ನು ಹೊರ ಹಾಕಿದ್ದಾರೆ. ಇದು ಕೈ ಮೀರಿ ಆದ ಅವಘಡ. ಇದು ಖಂಡಿತಾ ಉದ್ದೇಶಪೂರ್ವಪಕವಾಗಿ ಆದದ್ದಲ್ಲ. ಆದರೆ ಚಿರಂಜೀವಿ ಸರ್ಜಾ ಡ್ರೈವರ್ ಮಾತ್ರ ಪಕ್ಕಾ ಬೀದಿ ಗೂಂಡಾನಂತೆ ಬಡಕೊಂಡು ರಾಡಿಯೆಬ್ಬಿಸಿದ್ದಾನೆ.
ತಮ್ಮ ಮಗನ ಚಿತ್ರದ ಮೊದ ಶೋಗೆ ಖುಷಿಯಿಂದಲೇ ಬಂದು ಲವ ಲವಿಕೆಯಿಂದ ಓಡಾಡಿಕೊಂಡಿದ್ದ ದೇವರಾಜ್ ಚಿರು ಡ್ರೈವರ್ನ ದಾಂಧಲೆಯಿಂದ ಬೇಸರಗೊಂಡಿದ್ದಾರೆ. ಹೆಚ್ಚಿನ ನಟರು ಸಮಯಕ್ಕೆ ಬೇಕಾಗುತ್ತದೆ ಅಂತ ಗೂಂಡಾಗಳನ್ನೇ ಡ್ರೈವರ್ ರೂಪದಲ್ಲಿ ಇಟ್ಟುಕೊಳ್ಳೋದೂ ಇದೆ. ಆದರೆ ಸಭ್ಯ ನಟ ಅಂತಲೇ ಗುರುತಿಸಿಕೊಂಡಿರೋ ಚಿರಂಜೀವಿ ಸರ್ಜಾ ಯಾಕೆ ಇಂಥಾ ಅಡ್ನಾಡಿಯನ್ನು ಚಾಲಕನನ್ನಾಗಿ ಇಟ್ಟುಕೊಂಡಿದ್ದಾರೋ ಅಂತ ಪಿವಿಆರ್ನಲ್ಲಿದ್ದವರು ಮಾತಾಡಿಕೊಂಡಿದ್ದಾರೆ. ಅದೇ ಪ್ರಶ್ನೆ ಚಿತ್ರರಂಗದವರಲ್ಲೂ ಇದೆ!
No Comment! Be the first one.