ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದ ಬಾಲಕಿ ಮುಂದೆ ಸತತ ಪರಿಶ್ರಮದಿಂದ ಸಾಧನೆ ಮಾಡಿ ವಿಶ್ವಸುಂದರಿಯಾಗಿ ಹಿಸ್ಟರಿ ಕ್ರಿಯೇಟ್ ಮಾಡುವ ಎಳೆಯನ್ನಿಟ್ಟುಕೊಂಡು ತಯಾರಾಗಿರುವ ಸಿನಿಮಾ ಅಂಜು. ಈ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚಿಗೆ ನೆರವೇರಿದ್ದು, ನಾಯಕಿ ಅಂಜನಾ ಶೆಟ್ಟಿ ಬಾಬನ ಸನ್ನಿಧಿಯಲ್ಲಿ ಪ್ರಾರ್ತಿಸುವ ಸೀನ್ ನ ಮುಹೂರ್ತ ಸನ್ನಿವೇಶಕ್ಕೆ 2015ರ ಮಿಸಸ್ ಏಷ್ಯಾ ವಿಜೇತೆ ಪ್ರತಿಭಾ ಆರಂಭ ಫಲಕ ತೋರಿಸಿದರೆ ಜಿ.ವಿ. ರಾಮರಾವ್ ಕ್ಯಾಮೆರಾ ಚಾಲನೆ ಮಾಡಿದರು.

ಅಂಜು ಸಿನಿಮಾವನ್ನು ಸಾಕಷ್ಟು ಹಿರಿಯ ನಿರ್ದೇಶಕರ ಜತೆಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಎ. ವಿಶ್ವನಾಥ್ ನಿರ್ದೇಶನ ಮಾಡುತ್ತಿದ್ದಾರೆ. ಭದ್ರಾವತಿ ಮೀನಾಕುಮಾರ್ ಬಂಡವಾಳವನ್ನು ಹೂಡುತ್ತಿದ್ದಾರೆ. ಇನ್ನು ಅಂಜು ಪಾತ್ರದಲ್ಲಿ ಅಭಿನಯಿಸುತ್ತಿರುವ ನಾಯಕಿ ಅಂಜನಾ ಶೆಟ್ಟಿ ರಂಗಾಯಣದಲ್ಲಿ ಟ್ರೇನಿಂಗ್ ಪಡೆದ ಹುಡುಗಿ. ಈಗಾಗಲೇ ಸಾಕಷ್ಟು ನಾಟಕ, ಕಿರುಚಿತ್ರಗಳಲ್ಲಿ ಅಭಿನಯಿಸಿ ಚೊಚ್ಚಲ ಬಾರಿಗೆ ನಾಯಕಿಯಾಗಿದ್ದಾರೆ. ರಾಜ್ ಕಿಶೋರ್ ಅವರ ಸಂಗೀತ, ಮನು ಕ್ಯಾಮೆರಾ, ವಿಕ್ರಮ್ ಸಾಹಸ ಚಿತ್ರಕ್ಕಿದೆ.

CG ARUN

ಶಂಕರ್ ಅಶ್ವಥ್ ಉಬರ್ ಓಡಿಸೋದು ನಿಲ್ಲಿಸೋದಿಲ್ಲವಂತೆ!

Previous article

19 AGE IS  ನಾನ್‍ಸೆನ್ಸ್?” ಚಿತ್ರಕ್ಕೆ ಮುಹೂರ್ತ

Next article

You may also like

Comments

Leave a reply

Your email address will not be published. Required fields are marked *