ಪುನೀತ್ ರಾಜ್ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ನಟಸಾರ್ವಭೌಮ. ಪವನ್ ಒಡೆಯರ್ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಕರ್ನಾಟಕದ ವಿವಿಧ ಲೊಕೇಷನ್ನುಗಳಲ್ಲಿ ನಡೆದಿತ್ತು. ಇದೀಗ ಇಡೀ ಚಿತ್ರ ತಂಡ ಕೋಲ್ಕತ್ತಾಕ್ಕೆ ಶಿಫ್ಟ್ ಆಗಿದೆ.
ಇದೀಗ ಅಲ್ಲಿಯೇ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಬಿಡುವಿರದಂತೆ ಶೆಡ್ಯೂಲ್ ಹಾಕಿಕೊಂಡಿರೋ ಚಿತ್ರ ತಂಡ ಯಶಸ್ವಿಯಾಗಿ ಚಿತ್ರೀಕರಣ ನಡೆಯುತ್ತಿದೆ. ಈ ನಡುವೆ ಸಿಕ್ಕ ಚೂರು ವಿರಾಮದಲ್ಲಿ ನಾಯಕಿ ಅನುಪಮಾ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದಾಳೆ. ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡು ಖುಷಿಗೊಂಡಿದ್ದಾಳೆ.
ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಬೇಡಿಕೆಯ ನಟಿ ಅನುಪಮಾ ನಟಸಾರ್ವಭೌಮನ ಮೂಲಕ ಕನ್ನಡಕ್ಕೂ ಪರಿಚಯವಾಗುತ್ತಿದ್ದಾಳೆ. ಈಕೆಯನ್ನು ನಟಸಾರ್ವಭೌಮ ಚಿತ್ರಕ್ಕೆ ನಾಯಕಿಯಾಗಿ ನಿಕ್ಕಿ ಮಾಡಿದ್ದರ ಬಗ್ಗೆ ಪುನೀತ್ ಅಭಿಮಾನಿಗಳೂ ಖುಷಿಗೊಂಡಿದ್ದಾರೆ. ಅದೇ ರೀತಿ ಕನ್ನಡ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಜೊತೆ ನಟಿಸೋ ಅವಕಾಶ ಸಿಕ್ಕಿದ್ದರ ಬಗ್ಗೆ ಅನುಪಮಾ ಕೂಡಾ ಥ್ರಿಲ್ ಆಗಿಯೇ ಈ ಬಗ್ಗೆ ಪ್ರತಿಕ್ರಿಯಿಸಿದ್ದಳು.
ದಕ್ಷಿಣ ಭಾರತೀಯ ನಟಿಯಾಗಿ ಹೊರ ಹೊಮ್ಮಿರುವ ಅನುಪಮಾ ಪರಮೇಶ್ವರನ್ ಈ ಹಿಂದೆ ರಾಷ್ಟ್ರೀಯ ಅವಾರ್ಡ್ ಪ್ರೋಗ್ರಾಮಿನಲ್ಲಿ ಪುನೀತ್ ರಾಜ್ಕುಮಾರ್ ಅವರನ್ನು ನೋಡಿದ್ದಳಂತೆ. ಕನ್ನಡದ ಈ ಸ್ಟಾರ್ ನಟನೊಂದಿಗೆ ನಟಿಸೋ ಅವಕಾಶ ಸಿಕ್ಕಿದ್ದಕ್ಕಾಗಿ ಹಿರಿ ಹಿರಿ ಹಿಗ್ಗಿರುವ ಈಕೆಗೆ ಈ ಮೂಲಕ ಕನ್ನಡ ಭಾಷೆಯನ್ನು ಕಲಿಯುವ ಆಸೆಯೂ ಇದೆಯಂತೆ.
ಈ ಚಿತ್ರದಲ್ಲಿ ಅನುಪಮಾ ಪಾತ್ರವೇನೆಂಬ ಬಗ್ಗೆಯೂ ಆಕೆಯೇ ಈ ಹಿಂದೆ ಹೇಳಿಕೊಂಡಿದ್ದಾಳೆ. ನಟಸಾರ್ವಭೌಮನಿಗೆ ಈಕೆ ಜ್ಯೂನಿಯರ್ ಲಾಯರ್ ಆಗಿ ಜೊತೆಯಾಗಲಿದ್ದಾಳಂತೆ. ತನ್ನದು ಇಂಟರೆಸ್ಟಿಂಗ್ ರೋಲ್ ಅಂತ ಖುಷಿಯಲ್ಲಿರುವ ಅನುಪಮಾ ನಿರ್ದೇಶಕ ಪವನ್ ಒಡೆಯರ್ ಕಥೆ ಹೇಳಿದಾಗ ಮರು ಮಾತಿಲ್ಲದೆ ಒಪ್ಪಿಕೊಂಡಿದ್ದಳಂತೆ. ಬೇರೆ ಬೇರೆ ಭಾಷೆಗಳಲ್ಲಿ ಪ್ರತಿಭಾನ್ವಿತ ನಟಿಯಾಗಿ ಗುರುತಿಸಿಕೊಂಡಿರೋ ಅನುಪಮಾ ನಟಸಾರ್ವಭೌಮನ ನಾಯಕಿಯಾದ ಬಗ್ಗೆ ಪವರ್ಸ್ಟಾರ್ ಅಭಿಮಾನಿಗಳೂ ಥ್ರಿಲ್ ಆಗಿದ್ದಾರೆ.
#