ಮೊದಲೆಲ್ಲಾ ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾಗಳು ತೆರೆಗೆ ಬರುತ್ತದೆ ಅಂದರೆ ಹಬ್ಬದ ವಾತಾವರಣ ನಿರ್ಮಾಣವಾಗಿರುತ್ತಿತ್ತು. ಬರಬರುತ್ತಾ ಯಾಕೋ ಗಣಿ ಸಿನಿಮಾಗಳು ಸದ್ದಡಗುತ್ತಿವೆಯಾ ಅಂತಾ ಸ್ವತಃ ಅವರ ಅಭಿಮಾನಿಗಳಿಗೇ ಅನ್ನಿಸಲು ಶುರುವಾಗಿದೆ. ಅದಕ್ಕೆ ಮುಖ್ಯ ಕಾರಣ ‘ಬಾನ ದಸರಿಯಲ್ಲಿ’ ಚಿತ್ರ. ಏನೇನೂ ಪ್ರಚಾರವಿಲ್ಲದ ಈ ಸಿನಿಮಾ ಇದೇ ವಾರ ತೆರೆಗೆ ಬರುತ್ತಿದೆ.
ಹಾಗೆ ನೋಡಿದರೆ ಬಾನ ದಾರಿಯಲ್ಲಿ ಗಣೇಶ್ ಅವರ ಮಹತ್ವಾಕಾಂಕ್ಷೆಯ ಸಿನಿಮಾ. ಕಳೆದ ಎರಡು ವರ್ಷಗಳಿಂದ ಬಾನ ದಾರಿಯಲ್ಲಿ ಚಿತ್ರದ ಬಗ್ಗೆ ಗೋಲ್ಡನ್ ಸ್ಟಾರ್ ಸಾಕಷ್ಟು ಹೇಳಿಕೊಂಡಿದ್ದರು. ಈ ಚಿತ್ರ ತಮ್ಮ ವೃತ್ತಿಬದುಕಿಗೆ ದೊಡ್ಡ ತಿರುವು ನೀಡುತ್ತದೆ ಎನ್ನುವಂತೆ ಅಭಿಪ್ರಾಯ ಪಟ್ಟಿದ್ದರು. ಆರಂಭದಿಂದ ಇಷ್ಟೆಲ್ಲಾ ಹೇಳಿಕೊಳ್ಳುತ್ತಿದ್ದ ಗಣೇಶ್ ದಿನಕಳೆದಂತೆ ಬಾನದಾರಿ ಬಗ್ಗೆ ಅಷ್ಟೇನೂ ಹೇಳಿಕೊಳ್ಳಲಿಲ್ಲ. ಬಾನದಾರಿಯಲ್ಲಿ ಏನೇನಾಗಿದೆ ಅಂತಾ ಹುಡುಕುತ್ತಾ ಹೋದರೆ ಸಾಕಷ್ಟು ವಿಚಾರಗಳು ಸಿಗುತ್ತಾ ಹೋಗುತ್ತವೆ. ಈ ಸಿನಿಮಾದಲ್ಲಿನ ಅಚ್ಛರಿ ಮೂಡಿಸುವ ಅಡ್ವೆಂಚರುಗಳನ್ನೂ ಮೀರಿಸುವ ಅನೇಕ ಸುದ್ದಿಗಳಿವೆ. ಅದೇನೋ ಗೊತ್ತಿಲ್ಲ. ಸಿನಿಮಾಗಳಲ್ಲಿ ಆರಂಭದಲ್ಲಿ ಇದ್ದ ಉತ್ಸಾಹ ಕ್ರಮೇಣ ಕಳೆದುಹೋಗುತ್ತದೆ.
ಹಾಗೆ ನೋಡಿದರೆ ಬಾನ ದಾರಿಯಲ್ಲಿ ಚಿತ್ರ ಯಾವತ್ತೋ ತೆರೆಗೆ ಬರಬೇಕಿತ್ತು. ಥ್ರಿಬಲ್ ರೈಡಿಂಗ್ ಬಂದು ಒಂದು ತಿಂಗಳಿಗೇ ಈ ಪಿಚ್ಚರ್ ಕೂಡಾ ರಿಲೀಸಾಗಬೇಕಿತ್ತು. ಥ್ರಿಬಲ್ ರೈಡಿಂಗ್ ತೆರೆಗೆ ಬಂದು ಅದಾಗಲೇ ಒಂದು ವರ್ಷವಾಗುತ್ತಿದೆ. ಒಂದಲ್ಲಾ, ಮೂರು ಸಲ ಬಾನ ದಾರಿಯ ಬಿಡುಗಡೆ ದಿನಾಂಕ ಮುಂದಕ್ಕೆ ಹೋಯಿತು. ಹೆಸರಾಂತ ಹೀರೋಗಳ ಪಿಚ್ಚರುಗಳು ಹೀಗೆ ಡೇಟು ಬದಲಿಸುತ್ತಾ ಹೋದರೆ ಮಾರ್ಕೇಟಿನಲ್ಲಿ ಬೇರೆ ಥರಾ ಸುದ್ದಿಗಳು ಹರಿದಾಡಲು ಶುರುವಾಗುತ್ತದೆ.
ಕಳೆದೊಂದು ವರ್ಷದಿಂದ ಈಗ ಆಗ ಅಂತಾ ಕಾದು ಈಗ ಏಕಾ ಏಕಿ, ನೆಟ್ಟಗೆ ಪಬ್ಲಿಸಿಟಿಯನ್ನೂ ಮಾಡದೆ ರಿಲೀಸ್ ಮಾಡುತ್ತಿದ್ದಾರೆ. ಈಗ ಕರ್ನಾಟಕದಲ್ಲಿ ಕಾವೇರಿ ಕಾವು ಮತ್ತೆ ಹೆಚ್ಚಾಗಿದೆ. ಬೆಂಗಳೂರು ಬಂದ್ ಹೆಸರಲ್ಲಿ ಒಂದು ದಿನ ಚಿತ್ರಂಮದಿರಗಳು ಕ್ಲೋಸ್ ಆಗಿವೆ. ಮತ್ತೆ ಇದೇ ಶುಕ್ರವಾರ ಕರ್ನಾಟಕ ಬದ್ ಕಾರಣಕ್ಕೆ ಮತ್ತೆ ಥೇಟರ್ ಗಳು ಬಾಗಿಲು ಮುಚ್ಚಲಿವೆ. ಇದರ ನಡುವೆ ಈಗ ಬಾನದಾರಿಯಲ್ಲಿ ತೆರೆಗೆ ಬರುತ್ತಿದೆ. ನಿಜಕ್ಕೂ ಇದು ಸಿನಿಮಾ ರಿಲೀಸ್ ಮಾಡಲು ರಾಂಗ್ ಟೈಮ್ ಅನ್ನೋದು ಗಾಂಧಿನಗರದವರ ಅಭಿಪ್ರಾಯ. ಇದನ್ನು ಮೀರಿ ಬಾನದಾರಿ ಗೆದ್ದರೆ ಅದು ಪವಾಡ!
No Comment! Be the first one.