ನೈಜ ಕಥಾಹಂದರದ ಸಿನಿಮಾಗಳಿಗೆ ಬಿ ಟೌನ್ ಸಾಕಷ್ಟು ಒತ್ತು ನೀಡುತ್ತಿದ್ದು, ಬಯೋಪಿಕ್ ಆಧಾರಿತ ಸಿನಿಮಾಗಳತ್ತ ಬಾಲಿವುಡ್ ನ ಬಿಗ್ ಬಿಗ್ ನಿರ್ದೇಶಕರು ಒಲವು ತೋರಿಸುತ್ತಿದ್ದಾರೆ. ಈ ಹಿಂದೆ ಆದಿತ್ಯ ಧಾರ್ ನಿರ್ದೆಶನದಲ್ಲಿ ಮೂಡಿಬಂದ​ ‘ಉರಿ: ದಿ ಸರ್ಜಿಕಲ್​ ಸ್ಟ್ರೈಕ್​’ ನೈಜ ಕಥಾಹಂದರದ ಸಿನಿಮಾ ಆಗಿತ್ತು. ಈ ಸಿನಿಮಾವು ಬಾಲಿವುಡ್​ ನಲ್ಲಿ ದೊಡ್ಡ ಸೆನ್ಸೇಷನ್ನನ್ನೇ ಕ್ರಿಯೇಟ್ ಮಾಡಿತ್ತು. ನಾಯಕ ವಿಕಿ ಕೌಶಲ್​ ಅಭಿನಯದಲ್ಲಿ ​​ ಮೂಡಿಬಂದ ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ 342 ಕೋಟಿ ರೂಪಾಯಿ ಬಾಚಿಕೊಂಡು ದಾಖಲೆಯನ್ನು ನಿರ್ಮಿಸಿತ್ತು. ಇದೀಗ ನೈಜ ಕಥಾಹಂದರ ಹೊಂದಿರುವ ಸಿನಿಮಾವೊಂದು ತೆರೆಯ ಮೇಲೆ ಮೂಡಲು ಸಿದ್ಧವಾಗುತ್ತಿದೆ.

ಹೌದು.. ಉರಿ ಚಿತ್ರದಂತೆಯೇ, ನೈಜ ಕಥಾ ಹಂದರವನ್ನು ಹೊಂದಿದ್ದ ಬಾಲಾಕೋಟ್​ ದಾಳಿಯ ಸಿನೆಮಾವನ್ನು ತೆರೆಗಪ್ಪಳಿಸಲು ಬಾಲಿವುಡ್​ ತಯಾರಿ ನಡೆಸುತ್ತಿದೆ. ಈ ಕುರಿತಂತೆ ಬಾಲಿವುಡ್​ ಟ್ರೇಡ್​ ಅನಾಲಿಸ್ಟ್​ ತರುಣ್​ ಆದರ್ಶ್​ ಟ್ವೀಟ್​ ಮಾಡಿದ್ದಾರೆ. ವಿವೇಕ್​ ಒಬೆರಾಯ್​ ಬಾಲಾಕೋಟ್​ ಸಿನೆಮಾವನ್ನು ಕೈಗೆತ್ತಿಕೊಂಡಿದ್ದು, ಬಾಲಕೋಟ್​: ದಿ ಟ್ರೂ ಸ್ಟೋರಿ ಎಂದು ಹೆಸರಿಡಲಾಗಿದೆ ಎಂದು ಹೇಳಿದ್ದಾರೆ. ಈ ಸಿನೆಮಾ ಹಿಂದಿ, ತಮಿಳು, ತೆಲುಗು ಭಾಷೆಯಲ್ಲಿ ತೆರಕಾಣಲಿದೆ ಎಂದು ಖುಷಿಯನ್ನು ಹಂಚಿಕೊಂಡಿದ್ದಾರೆ. ಇದೇ ವರ್ಷ ಬಾಲಾಕೋಟ್​ ಸಿನಿಮಾ ಸೆಟ್ಟೇರಲಿದೆ. ವಿಶೇಷವೆಂದರೆ ಈ ಸಿನಿಮಾವನ್ನು ಜಮ್ಮು, ಕಾಶ್ಮೀರ, ದಿಲ್ಲಿ ಮತ್ತು ಆಗ್ರಾದಲ್ಲಿ ಚಿತ್ರೀಕರಣ ನಡೆಸುವ ಪ್ಲ್ಯಾನ್ ನಲ್ಲಿ ಚಿತ್ರತಂಡವಿದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಪ್ರಿಯಾಂಕ ಪರ ನಿಂತ ವಿಶ್ವಸಂಸ್ಥೆ!

Previous article

ಕೆಜಿಎಫ್ ಚಾಪ್ಟರ್ 2ಗೆ ಶುರುವಾಯ್ತು ಶನಿಕಾಟ!

Next article

You may also like

Comments

Leave a reply

Your email address will not be published. Required fields are marked *