ರೋರಿಂಗ್ ಸ್ಟಾರ್ ಶ್ರೀಮುರಳಿ ಮಫ್ತಿ ಚಿತ್ರದ ನಂತರ ನಟಿಸುತ್ತಿರೋ ಚಿತ್ರ ಭರಾಟೆ. ಭರ್ಜರಿ ಖ್ಯಾತಿಯ ಚೇತನ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬರಲಿರೋ ಈ ಚಿತ್ರಕ್ಕೆ ಶ್ರೀ ಲೀಲಾ ನಾಯಕಿಯಾಗಿ ಆಯ್ಕೆಯಾಗಿ ತಿಂಗಳು ಕಳೆದಿದೆ. ಇದೀಗ ಎಲ್ಲ ತಯಾರಿ ಮುಗಿಸಿಕೊಂಡಿರೋ ಚಿತ್ರತಂಡ ಈ ತಿಂಗಳ ಕೊನೆಯಲ್ಲಿ ಚಿತ್ರೀಕರಣಕ್ಕೆ ಹೊರಡಲು ರೆಡಿಯಾಗಿದೆ.
ಚಿತ್ರೀಕರಣಕ್ಕೆ ಹೊರಡೋದು ತುಸು ತಡವಾದರೂ ಚಿತ್ರತಂಡ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡಲು ಬಲು ಹಿಂದೆಯೇ ಸಿದ್ಧತೆ ನಡೆಸಿತ್ತು. ಅದರ ಭಾಗವಾಗಿ ಸ್ವಾತಂತ್ರ್ಯ ದಿನಾಚರಣೆಯಂದೇ ಭರಾಟೆಯ ಫಸ್ಟ್ ಲುಕ್ ಬಿಡುಗಡೆಯಾಗಲಿದೆ.
ಈ ಫಸ್ಟ್ ಲುಕ್ಕಿನ ಜೊತೆಗೆ ಒಂದು ಮೇಕಿಂಗ್ ಟೀಸರನ್ನೂ ಚಿತ್ರತಂಡ ಬಿಡುಗಡೆ ಮಾಡಿದೆ. ಇದಕ್ಕಾಗಿ ಇಡೀ ತಂಡ ಪಟ್ಟಿರೋ ಶ್ರಮವೂ ಈ ಮೂಲಕ ಜಾಹೀರಾಗಿದೆ. ಈ ಶೂಟಿಂಗನ್ನು ಜೈಸಲ್ಮೇರ್ ಮುಂತಾದೆಡೆಗಳ ಸುಂದರ ಲೊಕೇಷನ್ನುಗಲ್ಲಿ ಮಾಡಲಾಗಿದೆಯಂತೆ. ಇದುವೇ ಒಟ್ಟಾರೆ ಚಿತ್ರದ ಸಂಭಾವ್ಯ ಒಟ್ಟಂದವನ್ನೂ ಪ್ರೇಕ್ಷಕರಿಗೆ ಮುಟ್ಟಿಸಿದೆ.
ಉಗ್ರಂ ಚಿತ್ರ ಸೂಪರ್ ಹಿಟ್ ಆದ ನಂತರ ಶ್ರೀಮುರಳಿ ಕಥೆಗಳ ಆಯ್ಕೆಗೆ ಬಹಳಾ ಪ್ರಾಧಾನ್ಯತೆ ಕೊಡುತ್ತಿದ್ದಾರೆ. ಮಫ್ತಿ ಚಿತ್ರ ಗೆದ್ದ ಬಳಿಕ ಕೊಂಚ ಸುದೀರ್ಘವಾದ ಗ್ಯಾಪ್ ಸೃಷ್ಟಿಯಾಗಿತ್ತಲ್ಲಾ? ಅದಕ್ಕೂ ಕೂಡಾ ಕಥೆಯೆಡೆನ ಗಂಭೀರ ಅವಲೋಕನವೇ ಮುಖ್ಯ ಕಾರಣವಂತೆ. ಭರ್ಜರಿ ಚಿತ್ರದ ನಂತರ ಭರ್ಜರಿಯಾಗಿಯೇ ಚಾಲ್ತಿಯಲ್ಲಿರುವ ಚೇತನ್ ನಿರ್ದೇಶನದ ಭರಾಟೆಯ ಬಗ್ಗೆ ಎಲ್ಲರಿಗೂ ಕುತೂಹಲವಿರುವುದು ಸುಳ್ಳಲ್ಲ.
#
No Comment! Be the first one.