ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಗರ ಪೊಲೀಸ್ ಆಯುಕ್ತರಾಗಿ ಕಳೆದ 44 ದಿನಗಳ ಮುಂಚೆ ನೇಮಕಗೊಂಡಿದ್ದ ಅಲೋಕ್ ಕುಮಾರ್ ಅವರನ್ನು ವರ್ಗಾವಣೆ ಮಾಡಿರುವ ಬಿಜೆಪಿ ಸರ್ಕಾರ ಆ ಸ್ಥಾನಕ್ಕೆ ಎಡಿಜಿಪಿ ಆಗಿದ್ದ ಭಾಸ್ಕರ್ ರಾವ್ ಅವರನ್ನು ನೇಮಕ ಮಾಡಿದೆ. ಇನ್ನು ಅಲೋಕ್ ಕುಮಾರ್ ಅವರನ್ನು ಕರ್ನಾಟಕ ಮೀಸಲು ಪೊಲೀಸ್ ಪಡೆಗೆ ವರ್ಗಾಯಿಸಿದೆ.
ಸಾಮಾನ್ಯವಾಗಿ ನಿರ್ಗಮಿತ ಕಮೀಷನರ್ ಹೊಸ ಕಮೀಷನರ್ ಅವರಿಗೆ ಬ್ಯಾಟನ್ ಕೈ ಬದಲಾಯಿಸುವ ಮೂಲಕ ಅಧಿಕಾರವನ್ನು ಹಸ್ತಾಂತರಿಸುತ್ತಾರೆ. ಆದರೆ ನಿರ್ಗಮಿತ ಕಮೀಷನರ್ ಅಲೋಕ್ ಕುಮಾರ್ ಈ ಸಂಪ್ರದಾಯವನ್ನು ಮುರಿದು ನೂತನ ಕಮೀಷನರ್ ಅಧಿಕಾರ ಸ್ವೀಕರಣಾ ಕಾರ್ಯಕ್ರಮ ಗೈರಾಗಿದ್ದು, ಭಾಸ್ಕರ್ ರಾವ್ ಸ್ವತಃ ಅಧಿಕಾರ ಸ್ವೀಕರಿಸಿದ್ದಾರೆ.
ಐ ಲವ್ ಯು ತಂಡದ ಬೆನ್ನಿಗೆ ನಿಂತಿದ್ದ ಭಾಸ್ಕರ ರಾವ್
ಉಪೇಂದ್ರ ಮತ್ತು ಆರ್ ಚಂದ್ರು ಕಾಂಬಿನೇಷನ್ನಿನ ಐ ಲವ್ ಯು ಸಿನಿಮಾ ಸೆಟ್ಟೇರಿದಾಗಿನಿಂದ ಐವತ್ತನೇ ದಿನಕ್ಕೆ ಕಾಲಿಟ್ಟಿರುವ ತನಕವೂ ಆರ್ ಚಂದ್ರು ಅವರನ್ನು ಸದಾ ಪ್ರೋತ್ಸಾಹಿಸುತ್ತಿರುವ ಭಾಸ್ಕರ ರಾವ್ ಆರಂಭದ ಕಾರ್ಯ ಕ್ರಮದಿಂದ ನಿನ್ನೆಯಷ್ಟೇ 50ನೇ ದಿನವನ್ನು ಆಚರಿಸಿಕೊಂಡ ಐ ಲವ್ ಯು ಸಂಭ್ರಮದ ಕಾರ್ಯಕ್ರಮಕ್ಕೂ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಸ್ಯಾಂಡಲ್ ವುಡ್ ಮಂದಿಯೊಂದಿಗೆ ಆಪ್ತತೆಯನ್ನು ಕಾಯ್ದುಕೊಂಡಿರುವ ಭಾಸ್ಕರ್ ರಾವ್ ಅವರು ಬೆಂಗಳೂರು ಆಯುಕ್ತರಾಗಿ ನೇಮಕಗೊಂಡಿರುವ ವಿಚಾರಕ್ಕೆ ಆರ್ ಚಂದ್ರು ಹಾಗೂ ಐ ಲವ್ ಯು ತಂಡ ಸಂತಸವನ್ನು ವ್ಯಕ್ತಪಡಿಸಿದ್ದು, ಶುಭಾಶಯವನ್ನು ತಿಳಿಸಿದೆ.
No Comment! Be the first one.