ರಾಜಸ್ತಾನ ಮೂಲದ ಕಿರುತೆರೆ ನಟ ಭವಾನಿ ಸಿಂಗ್ ಸದ್ಯ ಕಲರ್ಸ್ ಕನ್ನಡದ ರಕ್ಷಾ ಬಂಧನದಲ್ಲಿ ಸಕ್ರಿಯರಾಗಿದ್ದಾರೆ. ರಾಜಸ್ಥಾನದಿಂದ ಬೆಂಗಳೂರಿಗೆ ಬಂದು ಬಿಬಿಎಂ ಪದವೀಧರನಾಗಿದ್ದ ಅವರನ್ನು ಬಣ್ಣದ ಲೋಕವು ಸೆಳೆದು ಅಭಿನಯತರಂಗವನ್ನು ಸೇರುವಂತೆ ಮಾಡಿಬಿಟ್ಟಿತು. ನಂತರ ಕಲರ್ಸ್ ಕನ್ನಡದ ಚರಣದಾಸಿ ಸಿರೀಯಲ್ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟ ಭವಾನಿ ನಂತರ ಸುಬ್ಬಲಕ್ಷ್ಮಿ ಸಂಸಾರ ಸದ್ಯ ರಕ್ಷಾ ಬಂಧನ ಧಾರವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.
https://www.instagram.com/p/B0vTHh1Hbju/?utm_source=ig_web_copy_link
ಸಾಕಷ್ಟು ಅಭಿಮಾನಿ ಬಳಗವನ್ನು ಕನ್ನಡ, ಹಿಂದಿ ಭಾಷೆಯಲ್ಲಿ ಹೊಂದಿರುವ ಭವಾನಿ ಸಿಂಗ್ ತಮ್ಮ ಬಹುಕಾಲದ ಗೆಳತಿ ಪಂಕಜ ಶಿವಣ್ಣ ಅವರೊಂದಿಗೆ ಎಂಗೇಜ್ ಆಗಿದ್ದಾರೆ. ಸುಬ್ಬಲಕ್ಷ್ಮಿ ಸಂಸಾರದ ಸಹ ನಟಿಯಾಗಿದ್ದ ಪಂಕಜ ಅವರನ್ನು ಎರಡೂವರೆ ವರ್ಷದಿಂದ ಪ್ರೀತಿಸುತ್ತಿದ್ದು, ಇದೀಗ ಈ ಜೋಡಿ ಸಿಂಪಲ್ ಆಗಿ ನಿಶ್ಚಿತಾರ್ಥವನ್ನು ಮಾಡಿಕೊಂಡಿದೆ. ಮದುವೆಯ ಸುದ್ದಿಯೂ ಸದ್ಯದಲ್ಲೇ ಹೊರಬೀಳಲಿದೆ.