ಕೆಲವೊಂದು ಸಾರಿ ಬಿಗ್ ಬಾಸ್ ಮನೆಯ ಕಾರ್ಯಕ್ರಮವನ್ನು ವಿಧಿಯಿಲ್ಲದೆ ನೋಡುವ ಸಂದರ್ಭ ಒದಗಿ ಬಿಡುತ್ತೆ. ಆಗ ಆ ದೊಡ್ಡಮನೆಯ ಸಣ್ಣ ಸಂಗತಿಗಳು ಸಮಾಜಕ್ಕೆ ಎಂತಹ ಮೆಸೇಜ್ ಕೊಡುತ್ತಿದೆ ಎಂಬುದನ್ನು ಗಮನಿಸಿ ಅತೀವ ಮುಜುಗರವಾಗುತ್ತದೆ. ಈಚೆಗೆ ಪ್ರಸಾರವಾದ ಪ್ರಕರಣವೊಂದರಲ್ಲಿ ಹಿರಿಯ ಹಾಸ್ಯ ನೆಂಟರೊಬ್ಬರು, ಬಿಗ್ಬಾಸ್ ನ ಕಿರಿಯ ನಟಿಯೊಬ್ಬರ ತೊಡೆಯ ಮೇಲೆ ಆರಾಮವಾಗಿ ಮಲಗಿ, ಮಾತುಗಳನ್ನು ಮುಲುಗುವುದನ್ನು ಕಂಡಾಗ, ಎಲ್ಲಿಗೆ ಬಂತು ನಮ್ಮ ಸಮಾಜ ಎಂದೆನ್ನಿಸಿ ಬಿಟ್ಟಿತು.
ಇದು ಮನರಂಜನೆಯೇ ? ಯಾವತ್ತಾದರೂ ಸರಿ ಒಂದು ದಿನ ತಮ್ಮ ಮಡದಿಯ ಅಥವಾ ತಮ್ಮ ಅಕ್ಕತಂಗಿಯರ ತೊಡೆಯ ಮೇಲೆ ಹೀಗೆ ಮಲಗಿ ಆರಾಮವಾಗಿ ಅವರು ಮಾತನಾಡಿದ ಸಂದರ್ಭವಿದೆಯೇ? ವಯಸ್ಸಿಗೆ ಬಂದ, ಕಂಡವರ ಮನೆಯ ಮಕ್ಕಳ ತೊಡೆಯ ಮೇಲೆ ಮಲಗಿ ಮಾತನಾಡುವುದು ಸರಿಯೇ ಎಂಬ ಸಾಮಾನ್ಯ ಪರಿಜ್ಞಾನ ಈ ಹಾಸ್ಯಗಾರನಿಗೆ ಬಂದರೆ ಅದು ನಿಜಕ್ಕೂ ಒಂದು ಒಳ್ಳೆಯ ಮೆಸೇಜನ್ನು ಸಮಾಜಕ್ಕೆ ಪಾಸ್ ಮಾಡಿದಂತೆ. ಒಂದು ವೇಳೆ ಇವರಿಗೆ ಸಂಬಂಧಪಟ್ಟವರ ತೊಡೆಯ ಮೇಲೆ ಬೇರೆ ಯಾರಾದರೂ ಗಂಡಸರು ಮಲಗಿ ಮಾತನಾಡಿದರೆ ಇವರು ಅದನ್ನು ಸುಮ್ಮನೆ ಸಹಿಸಿಕೊಂಡಿರುತ್ತಾರೆಯೇ? ಉತ್ತರವಿಲ್ಲದ ಪ್ರಶ್ನೆಗಳಿಗೆ ಉತ್ತರಿಸುವವರಾದರೂ ಯಾರು? ಬಿಗ್ ಬಾಸ್ ಮನೆಯಲ್ಲಿ ಸೆನ್ಸಾರೇ ಇಲ್ಲವೇ?
- ನಕ್ಷತ್ರಿಕ
No Comment! Be the first one.