ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ಸುದೀಪ್ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆಂಬ ಸುದ್ದಿಗೆ ಎರಡ್ಮೂರು ವರ್ಷ ತುಂಬಿದೆ. ಇಷ್ಟೊಂದು ಕಾಲಾವಧಿಯ ನಂತರ ಅದೀಗ ನಿಜವಾಗಿದೆ. ಈ ಚಿತ್ರಕ್ಕೆ ಬಿಲ್ಲಾ ರಂಗ ಭಾಷಾ ಎಂಬ ಶೀರ್ಷಿಕೆಯೂ ನಿಗಧಿಯಾಗಿ ಅನಾವರಣಗೊಂಡಿದೆ.
ಬಿಲ್ಲಾ ರಂಗ ಭಾಷಾ ಎಂಬ ಶೀರ್ಷಿಕೆ ಕಂಡೇ ಸುದೀಪ್ ಅಭಿಮಾನಿ ಬಳಗ ಖುಷಿಗೊಂಡಿದೆ. ಇದರ ಬೆನ್ನಲ್ಲಿಯೇ ಒಂದಷ್ಟು ಕುತೂಹಲ ಬೆರೆತ ಗೊಂದಲಗಳೂ ಕಾಡಲಾರಂಭಿಸಿವೆ. ಇದರಲ್ಲಿ ಕಿಚ್ಚಾ ಸುದೀಪ್ ಮೂರು ಪಾತ್ರಗಳಲ್ಲಿ ಅಭಿನಯಿಸಲಿದ್ದಾರಾ? ಶೀರ್ಷಿಕೆಯಲ್ಲಿರುವಂತೆ ಮೂರು ಪಾತ್ರಗಳು ಈ ಸಿನಿಮಾದಲ್ಲಿ ಇರಲಿದ್ದಾವಾ ಅಂತೆಲ್ಲ ಪ್ರಶ್ನೆಗಳು ಅಭಿಮಾನಿಗಳಲ್ಲಿವೆ.
ಆದರೆ ಅನೂಪ್ ಭಂಡಾರಿ ಅಪ್ಪಿ ತಪ್ಪಿಯೂ ಈ ವಿಚಾರದ ಬಗ್ಗೆ ಬಾಯಿ ಬಿಟ್ಟಿಲ್ಲ. ಆದರೆ ಕನ್ನಡ ಚಿತ್ರರಂಗದ ಪಾಲಿಗೆ ಈ ಚಿತ್ರವನ್ನು ವಿಭಿನ್ನವಾಗಿ ನೆಲೆಗಾಣಿಸೋ ಉತ್ಸಾವಂತೂ ಅವರಲ್ಲಿ ಸ್ಪಷ್ಟವಾಗಿಯೇ ಕಾಣಿಸುತ್ತಿದೆ. ರಂಗಿತಂರಂಗ ಮೂಲಕ ಭರ್ಜರಿ ಗೆಡಲುವು ದಾಖಲಿಸಿದ್ದ ಅನೂಪ್ ಎರಡನೇ ಚಿತ್ರವಾದ ರಾಜರಥದಲ್ಲಿ ಮುಗ್ಗರಿಸಿದ್ದರು. ಭಾರೀ ನಿರೀಕ್ಷೆ ಹುಟ್ಟಿಸಿದ್ದ ಈ ಚಿತ್ರ ಸೋತಿತ್ತು.
ಈ ಸೋಲಿನಿಂದ ಪಾಠ ಕಲಿತಿರೋ ಅನೂಪ್ ಬಿಲ್ಲಾ ರಂಗ ಭಾಷ ಮೂಲಕ ಮತ್ತೆ ಎದ್ದು ನಿಲ್ಲುವ ಹುರುಪಿನೊಂದಿಗೆ ತಯಾರಾಗಿದ್ದಾರೆ. ಕಿಚ್ಚಾ ಸುದೀಪ್ ಕೂಡಾ ಸರಿಯಾಗಿಯೇ ಸಾಥ್ ನೀಡಿದ್ದಾರೆ. ಈ ಬಗೆಗಿನ ಮತ್ತಷ್ಟು ಮಾಹಿತಿಗಳನ್ನು ಅನೂಪ್ ಇಷ್ಟರಲ್ಲಿಯೇ ಜಾಹೀರು ಮಾಡಲಿದ್ದಾರೆ.
#
No Comment! Be the first one.