ಬಿ ಟೌನಿನ ಭರವಸೆಯ ನಟ ವರುಣ್ ಧವನ್ ಇನ್ನು ಕೆಲವೇ ತಿಂಗಳುಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಬಹು ವರ್ಷಗಳ ಗೆಳತಿ ನತಾಶಾ ದಲಾಲ್ ಅವರನ್ನು ವರುಣ್ ವರಿಸಲಿದ್ದು, ಇಲ್ಲಿಯವರೆಗೂ ಲವರ್ಸ್ ಗಳಾಗಿದ್ದವರು ಸತಿ ಪತಿಗಳಾಗಲಿರುವುದು ಅಭಿಮಾನಿಗಳಲ್ಲಿ ಸಂತಸ ತಂದಿದೆ.

ಸಿನಿಮಾ ಫೀಲ್ಡಿಗೆ ಬರೋ ಮುಂಚಿತವಾಗಿಯೂ ಈ ಜೋಡಿಗಳ ನಡುವೆ ಕುಚ್ ಕುಚ್ ಇತ್ತು. ಹಲವು ವರ್ಷಗಳ ಕಾಲ ಯಾರ ಕಣ್ಣಿಗೂ ಕಾಣದೇ ತಿರುಗುತ್ತಿದ್ದ ಈ ಜೋಡಿ ಕಳೆದ ವರ್ಷವಷ್ಟೇ ನಾವು ಮದುವೆಯಾಗಲಿದ್ದೇವೆ ಎಂದು ಬಹಿರಂಗವಾಗಿ ಹೇಳಿಕೊಂಡಿತ್ತು. ಕೊಟ್ಟ ಮಾತಿನಂತೆ ಡಿಸೆಂಬರ್ ನಲ್ಲಿ ಈ ಜೋಡಿ ಮದುವೆಯಾಗಲಿದೆ. ಇನ್ನು ಗೋವಾದ ಕಡಲ ತೀರದಲ್ಲಿ ಇವರ ಮದುವೆಯ ಸಿದ್ದತೆಯನ್ನು ಮಾಡಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆಯಂತೆ. ಇನ್ನು ಮದುವೆಗೆ ಯಾರ್ಯಾರ ಆಹ್ವಾನವನ್ನು ಮಾಡಲಾಗುತ್ತದೆ. ಮೀಡಿಯಾದವರನ್ನು ಒಳಬಿಟ್ಟುಕೊಳ್ಳುವರೇ ಇತ್ಯಾದಿ ಇತ್ಯಾದಿ ವಿಚಾರಗಳು ಸದ್ಯದಲ್ಲೇ ಹೊರಬೀಳಲಿದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಪೈಲ್ವಾನ್ ನಲ್ಲಿ ಅಬ್ಬರಿಸಲಿರುವ ಸುನೀಲ್ ಶೆಟ್ಟಿ!

Previous article

ಐ ಲವ್ ಯೂ ಲಿರಿಕಲ್ ವಿಡಿಯೋ ಮಾಡಿದ ಮೋಡಿ…!

Next article

You may also like

Comments

Leave a reply

Your email address will not be published. Required fields are marked *