ಸದಭಿರುಚಿಯ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ನೀನಾಸಂ ಸತೀಶ್ ಮತ್ತು ಲವ್ ಇನ್ ಮಂಡ್ಯ ಖ್ಯಾತಿಯ ಉದಯ್ ಮೆಹ್ತಾ ಕಾಂಬಿನೇಷನ್ನಿನಲ್ಲಿ ಮೂಡಿಬರುತ್ತಿರುವ ಬ್ರಹ್ಮಚಾರಿ ಸಿನಿಮಾದ ಫಸ್ಟ್ ಲುಕ್ ಮೇ 24ರಂದು ರಿಲೀಸ್ ಆಗಲಿದೆ. ಈಗಾಗಲೇ ಡಿಫರೆಂಟ್ ಟೈಟಲ್ ಮತ್ತೆ 100% ವರ್ಜಿನ್ ಅನ್ನೋ ಟ್ಯಾಗ್ ಲೈನ್ ಮೂಲಕ ಸದ್ದು ಮಾಡುತ್ತಿರುವ ಬ್ರಹ್ಮಚಾರಿ ಸಿನಿಮಾ ದಿನದಿಂದ ದಿನಕ್ಕೆ ಕೌತುಕತೆಯನ್ನು ಹೆಚ್ಚಿಸಿಕೊಳ್ಳತ್ತಲೇ ಇದೆ.
ಇನ್ನು ಚಿತ್ರದಲ್ಲಿ ಸತೀಶ್ ಗೆ ಜೊತೆಯಾಗಿ ಅದಿತಿ ಪ್ರಭುದೇವ ನಾಯಕಿಯಾಗಿ ಮಿಂಚಲಿದ್ದಾರೆ. ಇದೊಂದು ಲವ್ ಸಬ್ಜೆಕ್ಟ್ ಹೊಂದಿರೋ ಕಥೆಯಾಗಿದ್ದರೂ ಚಿತ್ರಕ್ಕೆ ಬ್ರಹ್ಮಚಾರಿ ಟೈಟಲ್ ಇಟ್ಟಿರೋದು ತುಂಬಾನೇ ಕ್ಯೂರಿಯಾಸಿಟಿ ಹೆಚ್ಚಿಸಿದೆ. ‘ಡಬಲ್ ಇಂಜಿನ್’, ‘ಬಾಂಬೆ ಮಿಠಾಯಿ’ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಚಂದ್ರ ಮೋಹನ್ ಬ್ರಹ್ಮಚಾರಿ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಜತೆಗೆ ಕೆಜಿಎಫ್ ಸಿನಿಮಾದಲ್ಲಿ ಜೂನಿಯರ್ ರಾಕಿಯಾಗಿ ಮೆರೆದಿದ್ದ ಅನ್ಮೋಲ್ ಕೂಡ ಬ್ರಹ್ಮಚಾರಿಯ ಜತೆ ಸೇರಿರುವುದು ವಿಶೇಷವಾಗಿದೆ.
No Comment! Be the first one.