ವರ್ಷಕ್ಕೆ ಒಂದರಂತೆ ದರ್ಶನ್ ಅಭಿನಯದ ಸಿನಿಮಾಗಳು ರಿಲೀಸ್ ಆಗುತ್ತಿತ್ತು. ಬೈ ಚಾನ್ಸ್ ಎರಡು. ಆದರೆ 2019 ದರ್ಶನ್ ಅಭಿಮಾನಿಗಳಿಗೆ ಸುಗ್ಗಿಯೋ ಸುಗ್ಗಿ. ಈಗಾಗಲೇ ದರ್ಶನ್ ಅಭಿನಯದ ಯಜಮಾನ ರಿಲೀಸ್ ಆಗಿ ಭರಪೂರ ಪ್ರತಿಕ್ರಿಯೆಯನ್ನು ಗಳಿಸಿದೆ. ಸದ್ಯ ಕುರುಕ್ಷೇತ್ರ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಇದರ ಜತೆ ಜತೆಗೂ ಒಡೆಯ ಸಿನಿಮಾದ ರಿಲೀಸ್ ಬಗ್ಗೆಯೂ ಚರ್ಚೆಗಳು ಶುರುವಾಗಿದೆ.
ಹೌದು ದರ್ಶನ್ ಅಭಿನಯದ ಒಡೆಯ ಸಿನಿಮಾ ಕೂಡ ಆಗಸ್ಟ್ ನಲ್ಲಿಯೇ ರಿಲೀಸ್ ಆಗುವ ಸಾಧ್ಯತೆ ಇದೆಯಂತೆ. ಈಗಾಗಲೇ ಒಡೆಯ ಸಿನಿಮಾದ ಶೂಟಿಂಗ್ ಕೂಡ ಮುಗಿದಿದ್ದು, ಹಾಡೊಂದನ್ನು ಮಾತ್ರ ಚಿತ್ರೀಕರಣ ಮಾಡಬೇಕಿದೆ. ಎಲ್ಲ ಅಂದುಕೊಂಡಂತಾದರೆ ಜೂನ್ ಅಥವಾ ಜುಲೈನಲ್ಲಿ ಅದೂ ಕೂಡ ಮುಗಿಯಲಿದೆ. ಅದೇನಾದ್ರೂ ನಿರೀಕ್ಷೆಗಿಂತ ಮೊದಲೇ ಮುಗಿದದ್ದೇ ಆದರೆ ಆಗಸ್ಟ್ ನಲ್ಲಿಯೆ ಒಡೆಯ ಸಿನಿಮಾವೂ ರಿಲೀಸ್ ಆಗುವ ಸಾಧ್ಯತೆ ಇದೆಯಂತೆ. ಕುರುಕ್ಷೇತ್ರದಲ್ಲಿ ದುರ್ಯೋಧನನಾಗಿ ಅಬ್ಬರಿಸಿದ್ದರೆ, ಒಡೆಯದಲ್ಲಿ ಮನೆ ಮಗನಾಗಿ ದರ್ಶನ್ ಅಭಿನಯಿಸಲಿದ್ದಾರೆ.
No Comment! Be the first one.