ಸಿಂಪಲ್ ಸುನಿ ನಿರ್ದೇಶನದ ಬಜಾರ್ ಸಿನಿಮಾದ ಮೂಲಕ ಹೀರೋ ಆಗಿ ಎಂಟ್ರಿಕೊಟ್ಟ ಹುಡುಗ ಧನ್ವೀರ್. ಈತ ಅಭಿನಯಿಸುತ್ತಿರುವ ಮುಂದಿನ ಸಿನಿಮಾ ಅನೌನ್ಸ್ ಆಗಿ ತಿಂಗಳು ಕಳೆದರೂ ನಿರ್ದೇಶಕ ಯಾರು ಅನ್ನೋದುಇ ಇನ್ನೂ ಫೈನಲ್ ಆಗಿಲ್ಲ. ಸಾಮಾನ್ಯವಾಗಿ ಡೈರೆಕ್ಟರ್ ಬಂದು, ಕತೆ ಬರೆದು ಮುಗಿಸಿದ ಮೇಲೆ ಸಿನಿಮಾಗೆ ಶೀರ್ಷಿಕೆ ಇಡಲಾಗುತ್ತದೆ. ಆದರೆ ಧನ್ವೀರ್ ಸಿನಿಮಾಗೆ ಡೈರೆಕ್ಟರ್ ಅಪಾಯಿಂಟ್ ಆಗೋ ಮುಂಚೇನೆ ಟೈಟಲ್ ಫಿಕ್ಸ್ ಆಗಿದೆ. ಸದ್ಯ ಧನ್ವೀರ್ ನಟನೆಯ ನೆಕ್ಸ್ಟ್ ಸಿನಿಮಾಗೆ ಬಂಪರ್ ಅಂತಾ ಹೆಸರಿಡಲಾಗಿದೆ. ನಿರ್ಮಾಪಕ ಸುಪ್ರೀತ್ ಹಾಗೂ ನಟ ಧನ್ವೀರ್ ತಮ್ಮ ಚಿತ್ರಕ್ಕೆ ನಿರ್ದೇಶಕ ಚೇತನ್ಕುಮಾರ್ ಅವರು ಬರೆದ ಸ್ಕ್ರಿಪ್ಟ್ನ್ನು ಆಯ್ಕೆ ಮಾಡಿಕೊಂಡಿzರೆ. ಚೇತನ್ಕುಮಾರ್ ಇಲ್ಲಿ ಚಿತ್ರಕಥೆ ಮತ್ತು ಸಂಭಾಷಣೆಯಲ್ಲೂ ಕೆಲಸ ಮಾಡಿzರೆ. ಆದರೆ ಅವರು ಇತರೆ ಸಿನಿಮಾಗಳಲ್ಲಿ ಬ್ಯುಸಿ ಇರುವ ಕಾರಣದಿಂದ ಚಿತ್ರದ ನಿರ್ದೇಶನ ಮಾಡಲಾಗುತ್ತಿಲ್ಲ.
ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಭರಾಟೆ ಚಿತ್ರದ ನಂತರ ನಿರ್ಮಾಪಕ ಸುಪ್ರೀತ್ ಅವರ ಬ್ಯಾನರ್ನಲ್ಲಿ ನಿರ್ಮಾಣವಾಗುತ್ತಿರುವ ಎರಡನೇ ಚಿತ್ರ ಇದಾಗಿದೆ. ಫ್ಯಾಮಿಲಿ ಎಂಟರ್ಟೈನರ್ ಕಥಾನಕ ಒಳಗೊಂಡಿರುವ ಈ ಚಿತ್ರದ ನಾಯಕ, ನಿರ್ಮಾಪಕ ಇಬ್ಬರೂ ರೆಡಿ ಇದ್ದರೂ ನಿರ್ದೇಶಕ ಮಾತ್ರ ಇನ್ನೂ ಅಂತಿಮವಾಗದೇ ಇರುವುದು ನಿಜಕ್ಕೂ ವಿಚಿತ್ರ ವಿಚಾರವಾಗಿದೆ. ಈಗಾಗಲೇ ನಿರ್ಮಾಪಕ ಸುಪ್ರೀತ್ ಅವರು ಅಂಬಿ ನಿಂಗ್ ವಯಸ್ಸಾಯ್ತೋ ಖ್ಯಾತಿಯ ಗುರುದತ್ತ ಗಾಣಿಗ, ಸುನಿಲ್ ಹಾಗೂ ನವೀನ್ ರೆಡ್ಡಿ ಸೇರಿದಂತೆ ಹಲವಾರು ಕನ್ನಡ ನಿರ್ದೇಶಕರನ್ನು ಸಂಪರ್ಕಿಸಿzರೆ. ಆದರೂ ಯಾವುದೇ ನಿರ್ದೇಶಕರನ್ನು ಅಂತಿಮಗೊಳಿಸಿಲ್ಲ. ಅಲ್ಲದೆ ಚಿತ್ರದ ಕಲಾವಿದರು ಹಾಗೂ ತಾಂತ್ರಿಕವರ್ಗದ ಆಯ್ಕೆಯೂ ಪ್ರಕ್ರಿಯೆಯಲ್ಲಿದೆ.