ಕನ್ನಡ ಚಿತ್ರರಂಗದಲ್ಲಿ ಒಂದಕ್ಕಿಂತಾ ಒಂದು ಡಿಫರೆಂಟ್ ಅನ್ನಿಸುವ ಟೈಟಲ್ಲಿನ ಸಿನಿಮಾಗಳು ಸೆಟ್ಟೇರುತ್ತವೆ. ಅಂತಾ ಸಿನಿಮಾಗಳ ಪಟ್ಟಿಗೆ ಈಗ ಗಿರ್ಕಿ ಕೂಡಾ ಸೇರಿಕೊಂಡಿದೆ!
ಹೆಚ್ಚೂ ಕಡಿಮೆ ಹೊಸಬರೇ ಸೇರಿ ನಿರ್ಮಿಸುರುವ ಗಿರ್ಕಿ ಚಿತ್ರ ಇತ್ತೀಚೆ ತಾನೆ ಆರಂಭಗೊಂಡಿದೆ. ಈ ಸಿನಿಮಾಗೆ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವುದು ವೀರೇಶ್.ಪಿ.ಎಂ. ಭಟ್ಟರ ಕ್ಯಾಂಪಿನ ಡೈರೆಕ್ಷನ್ ಟೀಮಿನಲ್ಲಿದ್ದು ಪರಿಪೂರ್ಣವಾಗಿ ಪಳಗಿ ಬಂದಿದ್ದಾರೆ.
ದರ್ಶನ್ ಅವರ ಸಾರಥಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಹಾಸ್ಯ ಕಲಾವಿದನಾಗಿ, ಪೋಷಕ ಪತ್ರಗಳಲ್ಲಿ, ಕಿರುತೆರೆ ಧಾರಾವಾಹಿಗಳು, ಶೋಗಳಲ್ಲಿ ಕಾಣಿಸಿಕೊಂಡು ಕರ್ನಾಟಕದ ಮನೆಮಾತಾಗಿರುವ ತರಂಗ ವಿಶ್ವ ಈ ಸಿನಿಮಾದ ಮೂಲಕ ಹೀರೋ ಆಗಿದ್ದಾರೆ. ಈ ವರೆಗೆ ಹಾಸ್ಯ ಕಲಾವಿದರಾಗಿ ಹೆಸರು ಮಾಡಿದ ನಂತರ ಒಂದು ಹಂತದಲ್ಲಿ ನಾಯಕನಟನಾಗಿ ಪಾದಾರ್ಪಣೆ ಮಾಡುವ ಪರಿಪಾಠ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಎಲ್ಲ ಭಾಷೆಯ ಸಿನಿಮಾ ವಾತಾವರಣದಲ್ಲೂ ನಡೆದುಕೊಂಡು ಬಂದಿರುವ ರೂಢಿ. ಈಗ ವಿಶ್ವ ಕೂಡಾ ಹೀರೋ ಆಗಿ ಖಾತೆ ತೆರೆಯುತ್ತಿದ್ದಾರೆ.
ಲವ್ವು, ಕಾಮಿಡಿ, ಸೆಸ್ಪೆನ್ಸ್ ಹಾಗೂ ಥ್ರಿಲ್ಲರ್ನಂಥ ಎಲ್ಲಾ ಅಂಶಗಳೂ ಈ ಚಿತ್ರದಲ್ಲಿದ್ದು, ಇದೆಲ್ಲದರ ನಡುವೆ ಕತೆ ಸುತ್ತುವುದರಿಂದ ಚಿತ್ರಕ್ಕೆ ಗಿರ್ಕಿ ಎಂಬ ಶೀರ್ಷಿಕೆಯನ್ನು ಇಟ್ಟಿದ್ದಾರಂತೆ. ಜೊತೆಗೊಂದು ಅರ್ಥಪೂರ್ಣ ಸಂದೇಶವನ್ನು ಕೂಡ ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗುತ್ತದೆ ಎಂದು ಚಿತ್ರದ ನಿರ್ದೇಶಕ ವೀರೇಶ್.ಪಿ.ಎಂ. ಟೈಟಲ್ ಕುರಿತಂತೆ ಸ್ಪಷ್ಟನೆ ನೀಡಿದ್ದಾರೆ. ಕಾಮಿಡಿ ಸ್ಟಾರ್ ತರಂಗ ವಿಶ್ವ ದಫೇದಾರ್ ವಜ್ರಮುನಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈವರೆಗೆ ಹಾಸ್ಯ ಪಾತ್ರ ಮಾಡುತ್ತಿದ್ದ ವಿಶ್ವ, ಈ ಚಿತ್ರದಿಂದ ಪ್ರಥಮಬಾರಿಗೆ ನಾಯಕನಾಗಿ ಬಡ್ತಿ ಪಡೆದಿದ್ದಾರೆ. ಶಶಿಕುಮಾರ್, ಈ ಸಿನಿಮಾದ ಮೂಲಕ ವಿಲೋಕ್ರಾಜ್ ಹೆಸರಿನೊಂದಿಗೆ ಬಾರ್ ಸಪ್ಲೈಯರ್ ಆಗಿ ಮತ್ತೊಂದು ಮುಖ್ಯ ಪಾತ್ರದಲ್ಲಿ ನಟಿಸುತ್ತಿzರೆ. ಇವರಿಬ್ಬರಿಗೂ ನಾಯಕಿಯರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಚಿತ್ರದ ಇತರ ತಾರಗಣದಲ್ಲಿ ರಂಗಾಯಣ ರಘು, ದತ್ತಣ್ಣ, ಮುಂತಾದವರಿದ್ದಾರೆ.
ಮೈಸೂರು, ಬೆಂಗಳೂರು ಸುತ್ತಮುತ್ತ ಚಿತ್ರದ ಚಿತ್ರೀಕರಣವನ್ನು ನಡೆಸಲು ಚಿತ್ರತಂಡವು ಯೋಜನೆ ಹಾಕಿಕೊಂಡಿದೆ. ಯೋಗರಾಜ ಭಟ್-ಜಯಂತ್ಕಾಯ್ಕಣಿ ಅವರ ಸಾಹಿತ್ಯದ ಮೂರು ಹಾಡುಗಳಿಗೆ ವೀರ ಸಮರ್ಥ ಸಂಗೀತ ಸಂಯೋಜಿಸುತ್ತಿzರೆ. ಸಾಹಸ ವಿನೋದ್-ಮಾಸ್ ಮಾದ ಅವರದು. ಛಾಯಾಗ್ರಹಣ ನವೀನ್ ಅವರದು, ಸಂಕಲನ ಮಧು ತುಂಬಿಕೆರೆ ಅವರದಾಗಿದೆ. ತರಂಗ ವಿಶ್ವ ಹಾಗೂ ಗೆಳಯರ ಎದಿತ್ ಫಿಲಂ ಫ್ಯಾಕ್ಟರಿ ಮತ್ತು ವಾಸುಕಿ ಮೂವೀ ಪ್ರೊಡPನ್ಸ್ನ ಭುವನ್ ಚಂದ್ರ ಚಿತ್ರದ ಸಹ ನಿರ್ಮಾಪಕರಾಗಿ ಕೈಜೋಡಿಸಿzರೆ. ವಸಂತ ವಲ್ಲಭರಾಯ ದೇವಸ್ಥಾನದಲ್ಲಿ ನಡೆದ ಮಹೂರ್ತ ಸಮಾರಂಭಕ್ಕೆ ನಿರ್ದೇಶಕ ಯೋಗರಾಜ ಭಟ್ಟರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು.