ಮಗಧೀರ, ಬಾಹುಬಲಿ, ಆರ್ ಆರ್ ಆರ್ ದಂತಹ ಹಿಟ್ ಚಿತ್ರಗಳ ಕಥೆಗಾರ ವಿ .ವಿಜಯೇಂದ್ರ ಪ್ರಸಾದ್ , ಪ್ಯಾನ್ ಇಂಡಿಯಾ ಎಂಬ ಪರಿಕಲ್ಪನೆ ಹುಟ್ಟುಹಾಕಿದ ಎಸ್ ಎಸ್ ರಾಜಮೌಳಿಯ ಎಲ್ಲಾ ಚಿತ್ರಗಳಿಗೆ ಸ್ಕ್ರಿಪ್ಟ್ ರೈಟರ್ ಆದ ವಿಜಯೇಂದ್ರ ಪ್ರಸಾದ್ ಅವರು ಕನ್ನಡದ ಪ್ರತಿಷ್ಠಿತ ಆರ್ ಸಿ ಸ್ಟುಡಿಯೋಸ್ ಸಂಸ್ಥೆಯ ಚೊಚ್ಚಲ ಚಿತ್ರಕ್ಕೆ ಸ್ಕ್ರಿಪ್ಟ್ ಸೂಪರ್ ವೈಸ್ ಮಾಡಿದ್ದು, ಈ ಚಿತ್ರದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಕಿಚ್ಚ ಸುದೀಪ್ ಅವರು ನಟಿಸುತ್ತಿದ್ದು ಆರ್ ಚಂದ್ರು ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಮೂವರು ದಿಗ್ಗಜರು ಒಂದಾಗಿ ಮಾಡುತ್ತಿರುವ ಈ ಚಿತ್ರಕ್ಕೆ ಇಡೀ ಭಾರತವೇ ಕಾತುರದಿಂದ ಎದುರು ನೋಡುತ್ತಿದ್ದು, ಈ ವರ್ಷದ ಮೆಗಾ ಹಿಟ್ ಚಿತ್ರವಾಗಲಿದೆ. ಆರ್ ಸಿ ಸ್ಟುಡಿಯೋಸ್ ಕರ್ನಾಟಕದ ಪ್ರತಿಷ್ಠಿತ ಸಂಸ್ಥೆಯಾಗಿದ್ದು, 5 ದೊಡ್ಡ ದೊಡ್ಡ ಚಿತ್ರಗಳಿಗೆ ಈ ವರ್ಷ ಚಾಲನೆ ದೊರೆಯಲಿದೆ. ಆರ್ ಚಂದ್ರು ಅವರು ಏನೇ ಮಾಡಿದರು ವಿಶೇಷವಾಗಿರಲಿದ್ದು ಈ ಚಿತ್ರವೂ ಕೂಡ ಹಲವು ವಿಶೇಷತೆಗಳಿಂದ ಕೂಡಿರಲಿದೆ. ಆ ವಿಶೇಷತೆಗಳಿಗೆ ಚಿತ್ರರಂಗ ಕಾಯುತ್ತಿದೆ. ಆರ್ ಸಿ ಸ್ಟುಡಿಯೋಸ್ ಈ ಚಿತ್ರದ ಶೀರ್ಷಿಕೆ ಬಿಡುಗಡೆಗೊಳಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಕಿಚ್ಚನ ಹುಟ್ಟುಹಬ್ಬವಾದ ಸೆಪ್ಟೆಂಬರ್ 2 ರಂದು ಅಧಿಕೃತವಾಗಿ ಘೋಷಣೆಯಾಗಲಿದೆ.
ಕಬ್ಜ ಸಿನಿಮಾದ ಮೂಲಕ ಇಡೀ ಇಂಡಿಯಾದಲ್ಲಿ ಹೆಸರು ಮಾಡಿದವರು ನಿರ್ದೇಶಕ ಆರ್. ಚಂದ್ರು. ಅಷ್ಟು ದೊಡ್ಡ ಪ್ರಾಜೆಕ್ಟನ್ನು ಮುಗಿಸಿದ ನಂತರ ಚಂದ್ರು ಏನು ಮಾಡುತ್ತಿದ್ದಾರೆ? ಅನ್ನೋದು ಎಲ್ಲರ ಪ್ರಶ್ನೆಯಾಗಿತ್ತು. ಚಂದ್ರು ಸುಮ್ಮನೇ ಕೂರೋ ಆಸಾಮಿಯೇ ಅಲ್ಲ. ಸಿನಿಮಾ ಅನ್ನೋದು ಮನರಂಜನಾ ಮಾಧ್ಯಮ ನಿಜ. ಆದೆ ಅದರ ಜೊತೆಗೆ ಲಾಭದಾಯಕ ಉದ್ಯಮವೂ ಹೌದು. ಕ್ರಿಯೇಟೀವ್ ಆಗಿ ಏನಾದರೊಂದು ಮಾಡುತ್ತಲೇ ಅದರಿಂದ ಉತ್ತಮ ವಹಿವಾಟನ್ನೂ ಮಾಡಬಲ್ಲ, ಚಾಣಾಕ್ಷ ವ್ಯಾಪಾರಿ ಮತ್ತು ಚತುರ ನಿರ್ದೇಶಕ ಆರ್. ಚಂದ್ರು. ಈ ವರೆಗೆ ಚಂದ್ರು ರೂಪಿಸಿರುವ ಚಿತ್ರಗಳೇ ಅದಕ್ಕೆ ಸಾಕ್ಷಿ!
ಆರ್. ಚಂದ್ರು ಈ ಹಿಂದಿನದಕ್ಕಿಂತಾ ದೊಡ್ಡ ಸಾಹಸಕ್ಕೇ ಈ ಸಲ ಕೈ ಇಡುತ್ತಿದ್ದಾರೆ. ಕಬ್ಜ ಚಿತ್ರದಲ್ಲಿ ಕಿಚ್ಚ ಸುದೀಪ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇಡೀ ಸಿನಿಮಾದಲ್ಲಿ ಅವರ ಪಾತ್ರದ ಛಾಯೆ ಇತ್ತು. ಈ ಸಲ ಸುದೀಪ್ ಅವರಿಗಾಗಿಯೇ ನಿರ್ದೇಶನ ಮಾಡುವ ಯೋಜನೆ ರೂಪಿಸಿದ್ದಾರೆ. ಬಾಬಹುಬಲಿ ಖ್ಯಾತಿಯ ನಿರ್ದೇಶಕ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಸ್ಕ್ರಿಪ್ಟ್ ಡಾಕ್ಟರಿಂಗ್ ಮಾಡಿ ಅಂತಿಮಗೊಳಿಸಿರುವ ಅದ್ಭುತ ಸಬ್ಜೆಕ್ಟನ್ನು ಚಂದ್ರು ಈಗ ದೃಶ್ಯರೂಪಕ್ಕಿಳಿಸಲಿದ್ದಾರೆ. ಕನ್ನಡದಲ್ಲಿ ಈ ವರೆಗೂ ಬಂದಿರದ ಕಥೆ ಮತ್ತು ಮೇಕಿಂಗ್ ಕ್ವಾಲಿಟಿ ಈ ಚಿತ್ರದಲ್ಲಿರಲಿದೆಯಂತೆ. ವಿಜಯೇಂದ್ರ ಪ್ರಸಾದ್ ತೊಡಗಿಕೊಂಡಿದ್ದಾರೆಂದರೆ, ಬಹುತೇಕ್ ಅದು ಎಪಿಕ್ ಶೈಲಯ ಚಿತ್ರವಾಗಿರಬಹುದು ಅನ್ನೋದು ಸದ್ಯದ ಊಹೆ. ಈ ಕುರಿತು ಡೈರೆಕ್ಟರ್ ಚಂದ್ರು ಅವರು ಮಾತ್ರ ಯಾವ ಸುಳಿವನ್ನೂ ನೀಡಿಲ್ಲ.
ಸಿನಿಮಾದ ಪೂರ್ವ ತಯಾರಿ ಈಗಾಗಲೇ ಶುರುವಾಗಿದೆ. ಕಿಚ್ಚ ಸುದೀಪ ಅವರ ಜೊತೆಗೆ ಇನ್ನೂ ಅಂತಿಮ ಸುತ್ತಿನ ಮಾತುಕತೆಗಳು ಚಾಲ್ತಿಯಲ್ಲಿವೆ. ಎಲ್ಲವೂ ಅಂದುಕೊಂಡಂತೇ ಆದರೆ, ಬಹುಶಃ ಇದೇ ವರ್ಷ ಚಿತ್ರ ಸೆಟ್ಟೇರಲಿದೆ. ಈ ಸಿನಿಮಾದ ಶೀರ್ಷಿಕೆ ಏನು? ಎಂಬಿತ್ಯಾದಿ ವಿವರಗಳು ಇಷ್ಟರಲ್ಲೇ ಹೊರಬೀಳಲಿದೆ. ಇಷ್ಟಿಷ್ಟೇ ಸುದ್ದಿಯನ್ನು ಜಾಹೀರು ಮಾಡಿ, ಪ್ರೇಕ್ಷಕರು ಮಾತ್ರವಲ್ಲದೆ, ಸಿನಿಮಾ ವಲಯದಲ್ಲೂ ಕುತೂಹಲ ಮೂಡಿಸುವುದು ಆರ್. ಚಂದ್ರು ಶೈಲಿ. ಇಂಥಾ ಚಂದ್ರು ಜೊತೆಗೆ ಕಿಚ್ಚ ಸುದೀಪ ಮತ್ತು ವಿಜಯೇಂದ್ರ ಪ್ರಸಾದ್ ಕೂಡಾ ಸೇರಿದ್ದಾರೆ ಅನ್ನೋದು ವಿಶೇಷ!
No Comment! Be the first one.