ಸದ್ಯ ತಮ್ಮದೇ ಆದ ವ್ಯಾಪಾರ ವ್ಯವಹಾರದ ಜೊತೆಗೆ, ನಿಯತ್ತಿನಿಂದ ಜನ ಸೇವೆ ಮಾಡುತ್ತಾ ಬಂದಿರುವ ಸೈಫ್ ಈ ತಂಡದ ಮುಂದಾಳಾಗಿದ್ದಾರೆ. ಪ್ರಚಾರದ ಹಂಗಿಲ್ಲದೆ, ಪಡೆದವರ ಫೋಟೋ ಕೂಡಾ ತೆಗೆದುಕೊಳ್ಳದೆ ‘ಮೊದಲು ಮಾನವರಾಗೋಣ’ ತಂಡ ಕೊರೋನಾ ಸಮಸ್ಯೆ ಶುರುವಾದಾಗಿನಿಂದ ಸೇವೆ ಸಲ್ಲಿಸುತ್ತಿದೆ.
ಹೈಸ್ಪೀಡಲ್ಲಿ ಸಾಗುತ್ತಿದ್ದ ಜಗತ್ತಿನ ಮುಂದೆ ದಿಢೀರಂತಾ ಕೊರೋನಾ ಅನ್ನೋ ವೈರಸ್ಸು ವಕ್ಕರಿಸಿಕೊಳ್ಳುತ್ತದೆ. ಸಡನ್ನಾಗಿ ಬ್ರೇಕು ಬಿದ್ದು ಜನರ ಬದುಕು ಬೀದಿಗೆ ಬೀಳುತ್ತದೆ ಅಂತಾ ಯಾರು ತಾನೆ ಕಲ್ಪಿಸಿಕೊಂಡಿದ್ದರು. ಇರುವ ಆಯಸ್ಸನ್ನೇ ಪೂರ್ತಿ ಮಾಡಲು ಯಾರಿಂದಲೂ ಆಗುತ್ತಿಲ್ಲ. ದುರಾಸೆಗೆ ಬಿದ್ದ ಕೆಲವರು ನೂರು ಜನ್ಮಕ್ಕಾಗುವಷ್ಟು ಹಣ ಜೋಡಿಸಿಟ್ಟುಕೊಂಡಿದ್ದಾರೆ. ಇಂಥಾ ಕೆಟ್ಟ ಪರಿಸ್ಥಿತಿಯಲ್ಲೂ ಉಳ್ಳವರು ತುಂಬಿಟ್ಟಿರೋದನ್ನು ಹೊರತೆಗೆಯುವ ಮನಸ್ಸು ಮಾಡುತ್ತಿಲ್ಲ. ಎಲ್ಲರೂ ಮಣ್ಣಲ್ಲಿ ಮಣ್ಣಾದರೂ ನಾವು ಮಾತ್ರ ಬದುಕೇ ಇರ್ತೀವಿ ಎನ್ನುವ ಕರೋನಾಗಿಂತಾ ಕ್ರೂರ ಮನಸ್ಥಿತಿಯವರೂ ಸಾಕಷ್ಟಿದ್ದಾರೆ. ಇಂಥವರ ನಡುವೆ “ನಾನೇನ ತಂದೆ, ನೀನೇನ ತಂದೆ, ಹೋಗುವ ಮುನ್ನ ಹಸಿವ ನೀಗಿಸು ತಂದೆ” ಎನ್ನುವ ಘೋಷವಾಕ್ಯದೊಂದೊಗೆ ‘ಮೊದಲು ಮಾನವರಾಗೋಣ’ ತಂಡ ಜನರ ಸೇವೆಗಿಳಿದಿದೆ.
ಹವಾರು ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಗೆಳೆಯರೆಲ್ಲಾ ಒಟ್ಟು ಸೇರಿ ಆಹಾರದ ಕಿಟ್ಗಳನ್ನು ಕಷ್ಟದಲ್ಲಿರುವ ಮಂದಿಯ ಕೈ ಸೇರಿಸುತ್ತಿದ್ದಾರೆ. ಆರಂಭದ ದಿನಗಳಲ್ಲಿ ಸಿನಿಮಾ ಸಾಹಚರ್ಯ ಹೊಂದಿದ್ದು, ಸದ್ಯ ತಮ್ಮದೇ ಆದ ವ್ಯಾಪಾರ ವ್ಯವಹಾರದ ಜೊತೆಗೆ, ನಿಯತ್ತಿನಿಂದ ಜನ ಸೇವೆ ಮಾಡುತ್ತಾ ಬಂದಿರುವ ಸೈಫ್ ಈ ತಂಡದ ಮುಂದಾಳಾಗಿದ್ದಾರೆ. ಪ್ರಚಾರದ ಹಂಗಿಲ್ಲದೆ, ಪಡೆದವರ ಫೋಟೋ ಕೂಡಾ ತೆಗೆದುಕೊಳ್ಳದೆ ‘ಮೊದಲು ಮಾನವರಾಗೋಣ’ ತಂಡ ಕೊರೋನಾ ಸಮಸ್ಯೆ ಶುರುವಾದಾಗಿನಿಂದ ಸೇವೆ ಸಲ್ಲಿಸುತ್ತಿದೆ. ಮನರಂಜನೆ ಮತ್ತು ಸುದ್ದಿ ವಾಹಿನಿಗಳಲ್ಲಿ ಕೆಲಸ ಮಾಡಿರುವ, ಸಿನಿಮಾ ಮಂದಿಯ ಆತ್ಮೀಯ ಒಡನಾಟ ಹೊಂದಿರುವ ಸುರೇಶ್ (ಸೋಮಶೇಖರ), ಪ್ರಶಾಂತ್ ಬಿಸ್ಲೇರಿ, ಪ್ರಶಾಂತ್ ಕಲ್ಲೂರ್, ಮಂಜು, ಬಶೀರ್, ಪ್ರಭು, ಕಾರ್ತಿಕ್, ರೋಹಿತ್, ಚಂದ್ರಶೇಖರ್, ಯುಕೆ ಲಂಡನ್ ಪರಿವಾರ ಮುಂತಾದವರು ‘ಮೊದಲು ಮಾನವರಾಗೋಣ’ ತಂಡದ ಸದಸ್ಯರಾಗಿದ್ದಾರೆ. ನಮ್ಮಿಂದ ಆದ ಸಹಾಯ ಮಾಡೋಣ ಅಂತಾ ಮೊದಲಿಗೆ ಕೆಲಸ ಶುರು ಮಾಡಿದ್ದು ಸೈಫ್. ಯಾವ ರಾಜಕೀಯ ಪಕ್ಷ ಅಥವಾ ನಾಯಕರುಗಳನ್ನು ಹಿಂಬಾಲಿಸದೆ, ನೊಂದವರ ಸಂಕಷ್ಟಕ್ಕೆ ಮಿಡಿಯಬೇಕು. ಅವರು ’ಒಳ್ಳೇದಾಗ್ಲಿ’ ಅಂತಾ ಮನಸಾರೆ ಹರಸುತ್ತಾರಲ್ಲಾ? ಅದು ಸಾಕು ಎಂದು ಬಯಸುವ ಸೈಫ್ ನಿಜಕ್ಕೂ ಆದರ್ಶ ವ್ಯಕ್ತಿ.
ಬೆಂಗಳೂರಿನ ಮೂಡಲ ಪಾಳ್ಯ, ಚಂದ್ರಾಲೇಔಟ್, ಇಟ್ಟಮಡುಗು, ರಾಜಾರಾಜೇಶ್ವರಿ ನಗರ, ಶ್ರೀ ರಾಮಪುರಂ, ಗಾಯತ್ರಿ ನಗರ, ಪೀಣ್ಯ ಜಾಲಹಳ್ಳಿ ಕ್ರಾಸ್, ಹೆಗ್ಗನಹಳ್ಳಿ ಕ್ರಾಸ್, ಸುಂದಕಟ್ಟೆ, ಐಟಿಐ ಬಡಾವಣೆ, ಮರಿಯಪ್ಪನ ಪಾಳ್ಯ, ವಿನಾಯಕ ಲೇಔಟ್, ನೆಲಗದನಹಳ್ಳಿ ಹಾಗೂ ಲಗ್ಗೆರೆ. ಲಗ್ಗೆರೆ, ಯಲಹಂಕ, ಆರ್ ಟಿ ನಗರ, ಸುಲ್ತಾನ್ ಪಾಳ್ಯ, ಕೆ ಜಿ ಹಳ್ಳಿ, ಕಮಲಾನಗರ, ಕೆಂಗೇರಿ ಉಪನಗರ ಚೌಡೇಶ್ವರಿ ನಗರ, ದೇವಯ್ಯ ಪಾರ್ಕ್, ಅಗ್ರಹಾರ ದಾಸರಳ್ಳಿ, ಆರ್ ಟಿ ನಗರ, ಸರಸ್ವತಿ ನಗರ, ಮೂಡಲಪಾಳ್ಯ, ಕೆಂಗೇರಿ ಸನ್ ಸಿಟಿ, ಮುದ್ದಿನ ಪಾಳ್ಯ ರಸ್ತೆ, ಸುಂಕದಕಟ್ಟೆ ಸೇರಿದಂತೆ ಬೆಂಗಳೂರಿನ ಮೂಲೆ ಮೂಲೆಗಳಿಗೆ ತೆರಳಿ ಅಗತ್ಯವಿರುವವರಿಗೆ ಪಡಿತರ ಕಿಟ್ ಬರುತ್ತಿದ್ದಾರೆ. ಈ ವರೆಗೂ ಸರಿ ಸುಮಾರು ಸಾವಿರ ಕಿಟ್ ಗಳು ಈ ತಂಡದಿಂದ ಹಂಚಿಕೆಯಾಗಿವೆ.
No Comment! Be the first one.